ನರೇಗಲ್ಲ ಅಕ್ಷರ ಜಾತ್ರೆ ವಿಜ್ರಂಭಣೆಯಿಂದ ನಡೆಯಿತು

ನರೇಗಲ್ಲ ಅಕ್ಷರ ಜಾತ್ರೆ ವಿಜ್ರಂಭಣೆಯಿಂದ ನಡೆಯಿತು

ನರೇಗಲ್ಲ ಅಕ್ಷರ ಜಾತ್ರೆ ವಿಜ್ರಂಭಣೆಯಿಂದ ನಡೆಯಿತು

ಅನ್ನ, ಅಕ್ಷರ ಕ್ರಾಂತಿ ಮಾಡಿದ ಶ್ರೀ ಅನ್ನದಾನೇಶ್ವರ ಶ್ರೀಗಳು: ಕೆ. ಮಹಾಂತೇಶ ಅನ್ನ, ಅಕ್ಷರ ಕ್ರಾಂತಿಯೊಂದಿಗೆ ಈ ನಾಡಿನ ಉದ್ದಗಲಕ್ಕೂ ತನ್ನ ಚಾಪನ್ನ ಮೂಡಿಸಿದ ಕೀರ್ತಿ ಇಲ್ಲಿನ ಶ್ರೀ ಅನ್ನದಾನೇಶ್ವರ ಶಿಕ್ಷಣ * ಶಿಕ್ಷಣ ಸಂಸ್ಥೆಯದ್ದಾಗಿದೆ ಮಹಾಂತೇಶ ಹೇಳಿದರು.

ನರೇಗಲ್ಲನ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ-ಗಂಜಿಹಾಲ ಮತ್ತು ಅಕ್ಷರ ಪ್ರತಿಷ್ಠಾನ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಕ್ಷರ ಜಾತ್ರೆ-2025 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನರೇಗಲ್ಲ ಪಟ್ಟಣದಲ್ಲಿ ಸ್ವಾತಂತ್ರ್ಯ, ಪೂರ್ವದಲ್ಲಿಯೇ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಇಲ್ಲಿನ ಶ್ರೀಮಠದ ಕಾರ್ಯ ಶ್ಲಾಘನೀಯವಾಗಿದೆ. ಬಾಲ್ಯ ಶಿಕ್ಷಣದೊಂದಿಗೆ ಉನ್ನತ ಸ್ನಾತಕೋತ್ತರ ಪದವಿ ಶಿಕ್ಷಣದ ವರೆಗೆ ಸಂಸ್ಥೆಯನ್ನು ಕಟ್ಟಿ ಇಂದಿನ ಮುಂದುವರೆದ ಶೈಕ್ಷಣಿಕ ಪ್ರಗತಿಯೊಂದಿಗೆ ಪಪೂ ಶಿಕ್ಷಣದಲ್ಲಿಯೇ ಎರಡು ಸಾವಿರಕ್ಕೂ ಅಧಿಕ ಮಕ್ಕಳು ಅಧ್ಯಯನ ಮಾಡುತ್ತಿರುವದು ಸಂತಸದ ವಿಷಯ ಅದರೊಂದಿಗೆ ವಿಕಲಚೇತನ ಮಕ್ಕಳಿಗೆ ಶಿಕ್ಷಣ ವರ್ಷದಿಂದ ನೀಡುತ್ತಿರುವುದು ಮಹತ್ವವನ್ನು ಪಡೆದುಕೊಂಡಿದೆ. ಸಂಸ್ಥೆ ಮುನ್ನಡೆಸುತ್ತಿರುವ ಇಲ್ಲಿನ ಪೂಜ್ಯರು ವರ್ಷಕ್ಕೆ ತನ್ನ ಶೈಕ್ಷಣಿಕ ಪ್ರಗತಿಯೊಂದಿಗೆ ಅಕ್ಷರ ಜಾತ್ರೆಯಂತಹ ಮಹತ್ವದ ಕಾರ್ಯವನ್ನು ಕೈಗೊಂಡು ಇದರೊಂದಿಗೆ ಶೈಕ್ಷಣಿಕ ಆಂದೋಲವನ್ನು ಮಾಡುತ್ತಿರುವುದು ಈ ನಾಡಿನ ಮಠ, ಮಾನ್ಯಗಳ ಕಾಯಕ ಮೆಚ್ಚುವಂತದ್ದು ಎಂದರು. ಸಾಮಾನ್ಯ ಮಕ್ಕಳಿಗಿಂತಲು ಇಂತಹ ಬುದ್ದಿಮಾಂದ್ಯ ಮಕ್ಕಳನ್ನ ಸಲುಹುದು ಬಹಳ

ನರೇಗಲ್ಲನ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ-ಗಂಜಿಹಾಲ ಮತ್ತು ಅಕ್ಷರ ಪ್ರತಿಷ್ಠಾನ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಕ್ಷರ ಜಾತ್ರೆ-2025 ಸಮಾರಂಭವನ್ನು ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳು ಹಾಗೂ ಅತಿಥಿಗಳು ಉದ್ಘಾಟಿಸಿದರು.

ಕಷ್ಟದ ಕಾಯಕವಾಗಿದೆ. ನಾನು ಸಹ ಬಾಲ್ಯ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಮಠದ ಸಂಸ್ಕೃತಿಯಲ್ಲಿ ಬೆಳೆದು ಬಂದಿದ್ದು ನಾನು ಮಠದ ಶಿಕ್ಷಣ ಸಂಸ್ಥೆಯ ಮಹತ್ವವನ್ನು ಹೊಂದಿದ್ದೆನೆ. ತಾವು ಸಹ ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ನೀವುಗಳು ಸಮಾಜದಲ್ಲಿ ಮುಂದೆ ಉನ್ನತ ಹುದ್ದೆಯನ್ನು ಪಡೆದು ಸಮಾಜಕ್ಕೆ ಹಾಗೂ ಕಲಿಸಿದ ತಂದೆ. ತಾಯಿಗಳ ಪ್ರೀತಿಗೆ ಪಾತ್ರರಾಗಿರಿ. ನಿಮ್ಮ ಪ್ರೀತಿಯ ಮಾತು ಅವರಿಗೆ ಸಿಹಿ

ಜೀವನಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಎವಿವಿಪಿ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ ಅಕ್ಷರ ಜಾತ್ರೆ ಎಂದರೆ ಅಳಿಸಲಾಗದ ಜ್ಞಾನವಾಗಿದೆ. ಅಕ್ಷರೋತ್ಸವ ಇಲ್ಲಿನ ಪೂಜ್ಯರ ಪರಿಕಲ್ಪನೆಯಾಗಿದೆ. ಇದು ಒಂದು ಚಳುವಾಳಿಯಾಗಿ ಮಾರ್ಪಡಿಸುವದೆ ಇದರ ಉದ್ದೇಶವಾಗಿದೆ. ನಮ್ಮ బదుకు ವಿವಿಧತೆಯಿಂದ ಇದ್ದರು ಸಹ ಏಕತೆಯಿಂದ

ತಗೆದುಕೊಂಡು ಹೋಗುವದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿವಿಧತೆಯಿಂದ ವೈವಿದ್ಯತೆಯಡೆಗೆ ಕೊಂಡೊಯ್ಯುವದು ಈ ಜಾತ್ರೆಯ ಮಹತ್ವವಾಗಿದೆ. ಅದಕ್ಕಾಗಿಯೇ ಮುಪ್ಪಿನ ಬಸವಲಿಂಗ ಶ್ರೀಗಳು ಇದಕ್ಕೆ ಇಂದು ಈ ಜಾತ್ರೆಯನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು. ಗದಗ ಶಾ.ಶಿ.ಇ ಪಪೂ ಉಪನಿರ್ದೇಶಕ ಶಿದ್ದಲಿಂಗ ಬಂಡು ಮಸನಾಯಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಾಲಕೆರೆ ಸಂಸ್ಥಾನಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಈ ಸಮಾರಂಭದ ಮೊದಲು ನಡೆದ ವಿಜ್ಞಾನ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಆಹಾರ ಮೇಳವನ್ನು ಗದಗ ಶಾ.ಶಿ.ಇ ಪಪೂ ಉಪನಿರ್ದೇಶಕ ಶಿದ್ದಲಿಂಗ ಮಸನಾಯಕ, ಪುಣ್ಯ ಶ್ರೀಗಳು ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಜಗದೀಶ ಕರಡಿ, ಅಮರೇಶ ಗಾಣಗೇರ, ಎಸ್. ಎನ್. ಹೂಲಗೇರಿ, ಪ್ರಾಚಾರ್ಯ ವಾಯ್. ಸಿ. ಪಾಟೀಲ, ಎಸ್. ಜಿ. ಕೇಶಣ್ಣವರ, ಎಫ್. ಎನ್. ಹುಡೇದ, ಎಸ್. ವಿ. ಹಳ್ಳಿಕೇರಿ, ಬಸವೇಶ ಜೋಳದ, ಗಾರಗಿ ಸೇರಿದಂತೆ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಇತ್ತೀಚಿಗೆ ನಿಧನರಾದ ಸಂಸ್ಥೆ ಆಡಳಿತಾಧಿಕಾರಿ ಎನ್. ಆ‌ರ್. ಗೌಡರ ಹಾಗೂ ಇನ್ನಿತರ ಸದಸ್ಯರಿಗೆ ಮೌನಾಚರಣೆ ಸಲ್ಲಿಸಲಾಯಿತು. ದೈಹಿಕ ಉಪನ್ಯಾಸಕ ಶಿವಾನಂದ ಕುರಿ ಸ್ವಾಗತಿಸಿದರು. ಬಿ. ಸಿ. ಹೊಳಿ ಹಾಗೂ ಬಿ. ಸಿ. ಕುಲಕರ್ಣಿ ನಿರೂಪಿಸಿದರು. ಎ. ಎ. ಪಾಪಣ್ಣ ವಂದಿಸಿದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ