ಆರೋಗ್ಯ ಕಾಳಜಿ ಅಕ್ಷಯವಾಗಿರಲಿ
ಆರೋಗ್ಯ ಕಾಳಜಿ ಅಕ್ಷಯವಾಗಿರಲಿ
ಆರೋಗ್ಯವೆ ಮಹಾಭಾಗ್ಯ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆರೋಗ್ಯವೆಂದರೆ ಅದು ಕೇವಲ ದೈಹಿಕ ಆರೋಗ್ಯ ಎಂದು ತಿಳಿದಿರುವವರೆ ಅಧಿಕ . ಮೊದಲು ಆ ತಪ್ಪು ಕಲ್ಪನೆಯಿಂದ ಹೊರಬರಬೇಕು. ಆರೋಗ್ಯವೆಂದರೆ ತನು ಮತ್ತು ಮನ
ಅಷ್ಟೇ ಅಲ್ಲ ಕೌಟುಂಬಿಕ, ಸಾಮಾಜಿಕ ಸ್ವಾಸ್ತ್ಯವು ಮುಖ್ಯ ವಾಗಿದೆ.
ಆರೋಗ್ಯಕ್ಕಿಂತ ದೊಡ್ಡ ಸಂಪತ್ತಿಲ್ಲ ಎಂದು ತಿಳಿದಿದ್ದರೂ,... ಬೇರೆ ಸಂಪತ್ತು ಗಳಿಸುವುದಕ್ಕೋಸ್ಕರ ಅರೋಗ್ಯದ ಬಗ್ಗೆ ಕಾಳಜಿವಹಿಸದೆ ಆಪತ್ತು ತಂದುಕೊಳ್ಳುತ್ತಿದ್ದಾರೆ.
ಕೆಲವರು ಅದರಲ್ಲೂ ಗೃಹಿಣಿಯರು ಗಂಡ, ಮಕ್ಕಳು,ಮನೆಯ ನಿರ್ವಹಣೆಯಲ್ಲಿ ತನ್ನನ್ನು ತಾನು ನಿರ್ಲಕ್ಷ್ಯ ಮಾಡಿಕೊಂಡಿರುತ್ತಾಳೆ.
ಇತ್ತೀಚಿಗಂತೂ ಮನೆ ಜೊತೆಗೆ ಉದ್ಯೋಗ, ಒಂದಿಷ್ಟು ಸಾಮಾಜಿಕ ಕಳಕಳಿಯ ನಡುವೆ ಅವರ ವೈಯಕ್ತಿಕ ಕೆಲಸಕ್ಕೆ ಬಿಡುವೆ ಇಲ್ಲದಾದಂತಾಗಿದೆ.ತುಂಬು ಕುಟುಂಬದ ನೇತಾರರು,ಕೃಷಿಕರು , ಕಂಪನಿ ಮಾಲೀಕರು, ಪತ್ರ ಕರ್ತೃ ರು, ಅಂಚೆ ಕಚೇರಿ, ಬ್ಯಾಂಕ್ ನೌಕರರು, ವೈದ್ಯರು,ಕೂಲಿ ಕಾರ್ಮಿಕರು ವಿಜ್ಞಾನಿಗಳು ಹೀಗೆ ಅನೇಕ ವೃತ್ತಿ ನಿರತರು, ಇದೆ ಸಮಸ್ಯೆ ಎದುರಿಸುತ್ತಿದ್ದಾರೆ.
ಇನ್ನು ಕೆಲವರು ವಿಚಿತ್ರ ಸಮಯವಿದ್ದರೂ ಮೋಬೈಲ್ ಎಂಬ ಮೋಹದ ಸುರುಳಿಯಲ್ಲಿ ಸಿಕ್ಕಿ ನಲುಗುತ್ತಿದ್ದಾರೆ.ಮತ್ತಷ್ಟು ಮಂದಿ ಅವರು ಹಂಗೆ, ಇವರು ಹಿಂಗೆ ಮತ್ತೊಬ್ಬರ ಬಗ್ಗೆ ಚಾಡಿ,ದ್ವೇಷ, ಅಸೂಯೆ ಮಾಡುತ್ತಾ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೆ ಇತರರ ಆರೋಗ್ಯವನ್ನು ಹದಗೆಡಿಸುತ್ತಿದ್ದಾರೆ.
ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಬದಲು ಮೊದಲೇ ಹಾಕಬೇಕು, ಹಾಗೆಯೇ ಕಾಯಿಲೆಗಳು ಬರುವ ಮುನ್ನವೆ ಮುನ್ನೆಚ್ಚರಿಕೆವಹಿಸಬೇಕು.
*ಆರೋಗ್ಯ ನಮ್ಮ ಅಂಗೈಯಲಿ*
ನಮ್ಮ ದಿನಚರಿ ಈಗಿರಲಿ :
*ಸೂರ್ಯೋದಯಕ್ಕೆ ಮುನ್ನ ಎದ್ದೇಳುವುದು
*ಹಲ್ಲುಜ್ಜಿ ಕೈಕಾಲು ಮುಖ ತೊಳೆಯುವುದು
*ಲಘು ವ್ಯಾಯಾಮ ಅಥವಾ ಅರ್ಧ ಗಂಟೆ ನಡಿಗೆ ನಂತರ ಪ್ರಾಣಯಾಮ , ಧ್ಯಾನ ಮಾಡುವುದು
*ಮನೆ ಕೆಲಸ ಮಾಡುವುದು
*ಸ್ನಾನ ಮಾಡಿ ದೇವರ ಪ್ರಾರ್ಥಿಸುವುದು *ರಬೆಳಿಗ್ಗೆ ೮-೯ ಗಂಟೆಗೆ ಒಳಗೆ ಬೆಳಗ್ಗಿನ ಉಪಹಾರ ಸೇವಿಸಬೇಕು.
ನಂತರ ಅವರವರ ಕೆಲಸ ಮುಂದುವರಿಸಬೇಕು.....
ಮಧ್ಯಾಹ್ನ ೧-೨ ರ ಒಳಗೆ ಊಟ ಮಾಡಬೇಕು ನಂತರ ಕೆಲಸ ಮುಂದುವರಿಸಬೇಕು..
*ಸಂಜೆ ೫ಕ್ಕೆಬೆಚ್ಚನೆ ಹಾಲು ಸೇವಿಸಬೇಕು,
ಸ್ವಲ್ಪ ವಾಯು ವಿಹಾರ...
*ಸಂಜೆ ೭-೮ರ ಒಳಗೆ ರಾತ್ರಿ ಊಟ ಮಾಡಬೇಕು.
*ಊಟ ಮಾಡಿ ಎರಡು ತಾಸು ಬಿಟ್ಟು ಮಲಗಬೇಕು
ಉತ್ತಮ ಆರೋಗ್ಯಕ್ಕೆ ದಿನಕ್ಕೆ ೮ಗಂಟೆ ನಿದ್ರೆ ಮಾಡಲೇಬೇಕು.
*ಮನೆಯಲ್ಲಿ ಊಟವನ್ನು ತಯಾರಿಸಿದ ಊಟವನ್ನೇ ಮಾಡಬೇಕು
ಹಸಿರು ತರಕಾರಿ, ತಾಜಾ ಹಣ್ಣು, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು.
ಋತುಮನಕ್ಕೆ ತಕ್ಕಂತೆ ಆಹಾರ ಪದ್ದತಿ ರೂಡಿಸಿಕೊಳ್ಳಬೇಕು.
ಚಿಕ್ಕ ಮಕ್ಕಳು, ವಯೋವೃದ್ಧರು, ಅನಾರೋಗ್ಯ ಇದ್ದವರು ಮತ್ತು ಕೆಲವು ಅನಿವಾರ್ಯ ಸಂಧರ್ಭದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.
*ಮಾನಸಿಕ ಸ್ವಾಸ್ತ್ಯದ ಗುಟ್ಟು **
ಸದೃಢ ಮನಸ್ಸಿದ್ದರೆ ಆರೋಗ್ಯಕರ ಮನಸ್ಸಿರುತ್ತದೆ.
*ಕಳ್ಳತನ, ಸುಳ್ಳು, ಕೊಲೆ ಸುಲಿಗೆ, ಅನ್ಯಾಯ, ಭ್ರಷ್ಟಾಚಾರ, ಅಕ್ರಮದಂತಹ ಕೆಟ್ಟ ಕೆಲಸವನ್ನು ಎಂದಿಗೂ ಮಾಡಲೇ ಬಾರದು.
*ದ್ವೇಷ, ದರ್ಪ , ಅಸೂಯೆ, ಭಯ, ನಾಕಾರಾತ್ಮ ಅಲೋಚನೆ ಮಾಡಬಾರದು
*ಮನೆಯ ಕಸ ಗುಡಿಸುವಂತೆ ಮನಸ್ಸನ್ನು
ಸ್ವಚ್ಜಗೊಳಿಸಿತ್ತಿರಬೇಕು
*ಯಾರಾದ್ರೂ ಕೆಟ್ಟದ್ದು ತುಂಬಲು ಬಂದ್ರೆ ನಾವು ಕಡ ಖಂಡಿತವಾಗಿ ತಿರಸ್ಕರಿಸಬೇಕು
ಅವರನ್ನು ನಮ್ಮಂತೆ ಒಳ್ಳೆಯತನಕ್ಕೆ ಹೊರಳಿಸಬೇಕು.
*ಕಷ್ಟಕ್ಕೆ ಸೋಲಿಗೆ ಕುಗ್ಗದೆ ಮೊನ್ನೆಡೆಯಬೇಕು.
*ಗೆದ್ದಾಗ ಅಟ್ಟಹಾಸ ಮೆರೆಯಬಾರದು
ಸಮಚಿತ್ತದಿಂದ ಮುಂದಿನ ಸಾಧನೆಗೆ ಮುಂದಾಗಬೇಕು.
*ಮತ್ತೊಬ್ಬರ ಗೆಲುವನ್ನು ಅನುಭಿನಂದಿಸಬೇಕು.
*ಸೋತವರ ಸಂತೈಸಬೇಕು.
*ತೊರೆಕೆ ತೊರೆದು ವಾಸ್ತವದಿ ಬದುಕ ಬೇಕು.
*ಇದ್ದರಲ್ಲೇ ಸಂತೃಪ್ತಿ ಅನುಭವಿಸೋಣ
*ದಯೆ. ಕರುಣೆ, ಪ್ರೀತಿ, ಕ್ಷಮೆ, ಪ್ರಾಮಾಣಿಕತೆ, ಸಹಕಾರದಂತಹ ಸದ್ಗುಣಗಳ ಬೆಳೆಸಿಕೊಳ್ಳೋಣ.
* ವಿದ್ಯಾಭ್ಯಾಸ,ವೃತ್ತಿಯೊಂದಿಗೆ ಒಳ್ಳೆ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳುಬೇಕು
* ಸಂಗೀತ, ಸಾಹಿತ್ಯ, ಚಿತ್ರ ಕಲೆ,ಪರಿಸರ ಸಂರಕ್ಷಣೆಯಂತಹ ಪ್ರವೃತ್ತಿ ಕರಗತಮಾಡಿಕೊಳ್ಳಬೇಕು.
ಯೋಗ ಧ್ಯಾನ, ಹಿತ ಮಿತ ಆಹಾರ ಒಂದಿಷ್ಟು ವ್ಯಾಯಾಮ ಅಭ್ಯಾಸ ಮಾಡಬೇಕು.
ಪ್ರತಿದಿನ ನಮ್ಮದೇ ಅದ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು.ಸಾಮರಸ್ಯ ಸಾಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಇದರಿಂದ ಮನಸು ಸದಾ ಆಹ್ಲಾದವಾಗಿರುತ್ತದೆ
ನಮ್ಮಆರೋಗ್ಯ ಕಾಪಾಡಿಕೊಳ್ಳುತ್ತಾ ಸಾಧ್ಯವಾದರೆ ಹಲವರ ಬಗ್ಗೆ ಮುತುವರ್ಜಿವಹಿಸೋಣ. ನಾವು ಮತ್ತೊಬ್ಬರ ಆರೋಗ್ಯ ಕಾಪಾಡ ಬೇಕಾದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲೇ ಬೇಕಲ್ಲವೇ...
ಭವ್ಯ ಸುಧಾಕರ ಜಗಮನೆ
ಎಲ್. ಐ. ಜಿ. -೫೭, ಹುಡ್ಕೋ,೧ನೇ ತಿರುವು.ವಿನೋಬನಗರ ಶಿವಮೊಗ್ಗ. ೫೭೭೨೦೪