ಕನಕದಾಸರು ವಿಶ್ವ ಮಾನವ ಸಂದೇಶ ರವಾನಿಸಿದ ಮಹಾತ್ಮರು ಪಟ್ಟಣದಲ್ಲಿ ಖ್ಯಾತ ಚಿಂತಕ ಡಾ ಸಂಗಪ್ಪ ತೌಡೆ

ಕನಕದಾಸರು  ವಿಶ್ವ ಮಾನವ ಸಂದೇಶ ರವಾನಿಸಿದ ಮಹಾತ್ಮರು ಪಟ್ಟಣದಲ್ಲಿ ಖ್ಯಾತ ಚಿಂತಕ ಡಾ ಸಂಗಪ್ಪ ತೌಡೆ

ಕನಕದಾಸರು ವಿಶ್ವ ಮಾನವ ಸಂದೇಶ ರವಾನಿಸಿದ ಮಹಾತ್ಮರು ಪಟ್ಟಣದಲ್ಲಿ ಖ್ಯಾತ ಚಿಂತಕ ಡಾ ಸಂಗಪ್ಪ ತೌಡೆ

      ‌ ಹುಮನಾಬಾದ್,: ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಯುವ ಘಟಕ ವತಿಯಿಂದ ರವೀಂದ್ರನಾಥ್ ಹುಲಗುತ್ತೆ ಮನೆಯಲ್ಲಿ ಭಕ್ತ ಕನಕದಾಸ ಜಯಂತ್ಸುವ ಆಚರಿಸಲಾಯಿತು ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಬೀದರ್ ಜಿಲ್ಲಾಧ್ಯಕ್ಷರಾದ ರವೀಂದ್ರ ರೆಡ್ಡಿ ಮಾಲಿ ಪಾಟೀಲ್ ಉದ್ಘಾಟಿಸಿ ಮಾತನಾಡಿ ದಾಸರ ಕೀರ್ತನೆ ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆ ಅತಿ ಅವಶ್ಯ ಸಂಸ್ಕಾರ ಪರಂಪರೆ ನಮ್ಮ ಕುಟುಂಬದಲ್ಲಿ ಎಲ್ಲಾ ಸದಸ್ಯರ ಪಾಲಿಸಬೇಕು, ಇತರರಿಗು ನಾವು ಮಾಧುರಿಯಾಗಬೇಕು ಎಂದು ನುಡಿದರು, ವಿಶೇಷ ಅತಿಥಿ ಉಪನ್ಯಾಸಕರಾಗಿ ,ಡಾ, ಸಂಗಪ್ಪ ತೌಡಿ ವಹಿಸಿಕೊಂಡು ಮಾತನಾಡಿ ಕನಕದಾಸರು ಈ ನಾಡಿನಲ್ಲಿ ಮೊದಲು ದಾಸ ಪರಂಪರೆ ಪರಿಚಯಿಸಿದರು, ಶ್ರೀ ಕೃಷ್ಣ ಪರಮಭಕ್ತರು ದೇವರನ್ನೇ ವಲಸಿಕೊಂಡು ಮಹಾನ್ ಸಂತರು ಅವರ ಕೀರ್ತನೆ ಮುಖಾಂತರ ಸಮಾಜಕ್ಕೆ ಭಕ್ತಿ ಮಾರಗವನ್ನು ಕಲಸಿ ಕೊಟ್ಟವರು, ಅವರ ಕೀರ್ತನೆ ಎಲ್ಲಾ ಭಾಷೆಗಳಲ್ಲಿ ಮುದ್ರಿಸಿ ಭಕ್ತಿ ಪರಂಪರೆ ನವ ಯುಗ ಯುಗಕ್ಕೆ ತಲುಪಿಸುವ ಕಾರ್ಯ ವಾಗಲಿ ಎಂದು ನುಡಿದರು, 

      ಈ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ತಾಲೂಕ ಕಸಾಪ ಗೌರವ ಕಾರ್ಯದರ್ಶಿ ಶ್ರೀಕಾಂತ್ ಸೂಗಿ ಮಾತನಾಡಿದರು , ಈ ಕಾರ್ಯಕ್ರಮದ ಅಧ್ಯಕ್ಷತೆ ತಾಲೂಕು ಕಸಾಪ ಅಧ್ಯಕ್ಷರಾದ ಸಿದ್ದಲಿಂಗ ನಿರ್ಣ ವಹಿಸಿಕೊಂಡು ಮಾತನಾಡಿ ಪ್ರತಿವರ್ಷ ನಾವು ನವೆಂಬರ ಮಾಸದಲ್ಲಿ ತಿಂಗಳ ಪೂರ್ತಿ ಕನ್ನಡ ಕಾರ್ಯಕ್ರಮ ಮಾಡುತ ಬಂದಿದ್ದೇವೆ ಕನ್ನಡ ಕಲರವ 50ನೇ ಸಂಭ್ರಮ ಹೀಗೆ ಅದರಲ್ಲಿ ಅನೇಕ ಮಹಾತ್ಮರು ದಾಸರ ಚಿಂತಕರ ಚಿಂತನೆಗಳು ಅವರ ಜಯಂತಿಗಳು ಸಹ ಆಚರಿಸುತ್ತಾ ಬಂದಿದ್ದೇವೆ , ಬರುವ ಡಿಸೆಂಬರ್ ನಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವ ಸಂತಸ ಹಾಗೂ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಆಸಕ್ತರು ಸಾಹಿತಿಗಳು ಬರಹಗಾರರು, ಕನ್ನಡ ಅಭಿಮಾನಿಗಳು ಭಾಗವಹಿಸುವಂತೆ ಮನವಿ ಮಾಡಿಕೊಂಡರು, ಹಾಗೂ ಈ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಂಗಮಕರ್ ಕರ್ನಾಟಕ ರಾಜ್ಯ ಬರಹಗಾರರ ಸಂಘ ರಿ ಹೂವಿನಹಡಗಲಿ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ ಚಟ್ಟಿ ರವರಿಗೆ ಗೌರವಿಸಿದರು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಉಪಾಧ್ಯಕ್ಷರಾದ ವೀರಣ್ಣ ಕುಂಬಾರ್, ಮಾರ್ತಾಂಡ ತಳಗೆರಿ, ಶರದ ನಾರಾಯಣಪೇಟ್ ಕರ್ ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಮಡೆಪ್ಪಾ ಕುಂಬಾರ, ರಮೇಶ್ ರೆಡ್ಡಿ, ಜೈವಂತ ಉಪಾರ, ಮದನ್ ಸಿಂಗ್, ಶಿವರಾಜ್ ಮೈತ್ರೆ, ಸದಾಶಿವಯ್ಯ ಮಠಪತಿ, ಬಸಪ್ಪ ರೆಡ್ಡಿ, ಅಮಿತ್ ಚಿಂಚೋಳಿಕರ್, ಭುವನೇಶ್ವರಿ, ಗೀತಾ ರೆಡ್ಡಿ, ಭುವನೇಶ್ವರಿ ಪಾಟೀಲ್, ಜೈಶ್ರಿ ಕಾಳಗಿ, ಸೀಮಾ ಹುಲಗುತ್ತೆ, ವೀರಣ್ಣ ಪಂಚಾಲ್ ನಿರ್ವಹಿಸಿದರು, ಅಂಬಿಕಾ ಚಳಕಾಪುರೆ, ವಂದಿಸಿದರು, ಹಾಗೂ ಅನೇಕ ಕನಕದಾಸ ಭಕ್ತರು, ಕನ್ನಡಪರ ಅಭಿಮಾನಿಗಳು ಭಾಗವಹಿಸಿದರು,