ಹಣ್ಣು ಹಂಪಲು -ರುಚಿಕರ ಆರೋಗ್ಯಕರ ಅಭಿಯೂ ಹಣ್ಣು

ಹಣ್ಣು ಹಂಪಲು -ರುಚಿಕರ ಆರೋಗ್ಯಕರ ಅಭಿಯೂ ಹಣ್ಣು

ಹಣ್ಣು ಹಂಪಲು -ರುಚಿಕರ ಆರೋಗ್ಯಕರ ಅಭಿಯೂ ಹಣ್ಣು

 ಬಲು ಇಷ್ಟವಾದ ಬಾಯಲ್ಲಿ ನೋಡುವಾಗಲೇ ನೀರೂರಿಸುವ ಸಿಹಿಯಾದ ಇದೀಗ ಪ್ರಚಲಿತಕ್ಕೆ ಬರುತ್ತಿರುವ ಹೊಸ ಹಣ್ಣು ಒಂದೇ ಬೆಳೆಯನ್ನು ನಂಬಿಕೊಳ್ಳದೆ ಕೃಷಿಕರು ಉಪ ಬೆಳೆಗಳತ್ತ ಆಕರ್ಷಿತರಾಗು ತ್ತಿದ್ದಾರೆ. ಅದರಲ್ಲೂ ವಿವಿಧ ಹೂ ಹಣ್ಣುಗಳನ್ನು ಬೆಳೆಸುತ್ತಿದ್ದು ಅದರಲ್ಲೂ ವಿದೇಶಿ ಹಣ್ಣುಗಳು ಇದೀಗ ನಮ್ಮ ತೋಟಗಳಲ್ಲಿ ಮನೆಯ ಸುತ್ತಮುತ್ತ ಚೆನ್ನಾಗಿದೆ ಹಾಗೆ ಇದೀಗ ಅಭಿವುಹಣ್ಣು ಬ್ರೆಜಿಲ್, ಸೌತ್ ಅಮೆರಿಕ ,ಅಮೆಜಾನ್, ಪೇರು ಕೊಲಂಬಿಯಾ ಮುಂತಾದ ದೇಶಗಳಲ್ಲಿದ್ದು ಇದೀಗ ಭಾರತದಲ್ಲಿ ನಮ್ಮ ನೆಲದಲ್ಲೂ ಬೆಳೆಯುತ್ತದೆ.

ಚಿಕ್ಕು ಜಾತಿಗೆ ಸೇರಿದ್ದು ಸಪೋಟೇಷಿಯಾ ಫ್ಯಾಮಿಲಿ ಗೆ ಸೇರಿದೆ ವೈಜ್ಞಾನಿಕ ಹೆಸರು Pouteria caimito ಹತ್ತರಿಂದ ಇಪ್ಪತ್ತು ಸೆಂಟಿಮೀಟರ್ ಉದ್ದವಿದ್ದ ಎಲೆಗಳು ಮೂರರಿಂದ ಆರು ಸೆಂಟಿಮೀಟರ್ ಅಗಲ ಎಲೆಗಳಿರುತ್ತವೆ. 30 ಅಡಿಗಳಷ್ಟು ಎತ್ತರಕ್ಕೆ ಗಿಡ ಬೆಳೆಯುತ್ತದೆ. ಒಂದೊಂದು ಹೂಗಳಾಗಿಯೂ ನಾಲ್ಕು ಐದು ಹೂಗಳ ಗೊಂಚಲು ಅರಳಿ ಕಾಯಿಗಳಾಗುತ್ತವೆ. ಮಾರುಕಟ್ಟೆಗೂ ಪ್ರವೇಶಿಸುತ್ತಿದೆ ಇದೀಗ ನರ್ಸರಿಗಳಲ್ಲಿಯೂ ಗಿಡ ಲಭ್ಯವಿದೆ. ಎರಡು ವರ್ಷ ಎರಡುವರೆ ವರ್ಷದ ಗಿಡಗಳಲ್ಲಿ ಗಿಡ ತುಂಬಾ ಹಣ್ಣುಗಳು ಬೆಳೆದು ನೋಡುಗರನ್ನು ಕಣ್ಮನ ಸೆಳೆಯುತ್ತದೆ . ದ.ಕ ಜಿಲ್ಲೆಯ ಕಡಬದ ಮಹಾಬಲ ನಾಯ್ಕ್ ಅವರ ತೋಟದಲ್ಲಿ ಬೆಳೆದು ಎಲ್ಲರ ಇಷ್ಟಕ್ಕೆ ಕಾರಣವಾಗಿದೆ .ಇದು ಬಾಲ್ ಐಸ್ ಕ್ರೀಮ್ ನಂತೆ ಕಾಣುತ್ತದೆ . ತುದಿಯಲ್ಲಿ ಹಸಿರಾಗಿದ್ದು ತಳ ಭಾಗ ಹಳದಿ ಬಣ್ಣದಲ್ಲಿದ್ದು ಹಣ್ಣಾಗಿ ಒಳಗಿನ ಪಲ್ಪುಗಳು ಮೃದುವಾಗಿ ಸಿಹಿ ಮಿಶ್ರಿತ ಮೇಣ ಅಂಟಿಕೊಳ್ಳುತ್ತದೆ . ಚಿಕ್ಕುವಿನ ತರ ಎರಡು ದೊಡ್ಡ ಸ್ವಲ್ಪ ದೊಡ್ಡದಾಗಿರುವ ಒಂದು ಎರಡು ಬೀಜಗಳಿರುತ್ತವೆ ಗಿಡವು ಸೀತಾಫಲ ಮೊಟ್ಟೆ ಹಣ್ಣು ಬೆಣ್ಣೆ ಹಣ್ಣಿನ ಗಿಡದಂತೆ ಎಲೆಗಳಿರುತ್ತದೆ .ಇದೀಗ ಕೇರಳದಲ್ಲಿ ಈ ಹಣ್ಣುಗಳು ಹೆಚ್ಚಾಗಿ ಕಂಡುಬರುತ್ತದೆ. ಕೇಜಿಗೆ 600 ತನಕ ಬೆಲೆ ಇದೆ ಮುಸುಂಬಿ ಕ್ರಿಕೆಟ್ ಕಾಲ್ ಜಾರಿಗೆ ಅಂತೆ ಕಂಡುಬರುತ್ತದೆ.

ಹೃದಯವಂತ ರೈತನ ಅದ್ಭುತ ಹಣ್ಣಿನ ತೋಟ ಬಗೆ ಬಗೆಯ ದೇಸಿ ಮತ್ತು ವಿದೇಶಿ ಹಣ್ಣುಗಳು ಇದೀಗ ಅಡಿಕೆ ತೋಟದಲ್ಲಿ ಉತ್ತಮ ಉಪ ಬೆಳೆಯಾಗಿದೆ ಆಗಸ್ಟ್ ನಿಂದ ಡಿಸೆಂಬರ್ ತನಕ ಹಣ್ಣುಗಳಾಗುತ್ತವೆ. 200 ಗ್ರಾಂ ನಿಂದ ಒಂದು ಕೆಜಿ ತನಕ ಈ ಹಣ್ಣುಗಳ ಗಾತ್ರ ಇರುತ್ತದೆ ಒಂದು ದಿನ ಫ್ರಿಡ್ಜ್ ನಲ್ಲಿ ಇಟ್ಟು ತಿಂದರೆ ಮೃದುವಾಗಿರುತ್ತದೆ. ಬೀಜದಿಂದಲೂ ಗಿಡವಾಗುತ್ತದೆ ಇದರಲ್ಲೂ ವಿವಿಧ ತಳಿಗಳಿವೆ ವೃತ್ತಾಕಾರ ದಂತೆ ದುಂಡಗೆ ಇರುತ್ತದೆ. ಇದು ಚಿಕ್ಕುವಿನಂತೆ ಮೇಣವನ್ನು ಹೊಂದಿದ್ದು ಪೂರ್ತಿಯಾಗಿ ಹಣ್ಣು ಆದಾಗ ಅಂದರೆ ಹಳದಿ ಬಣ್ಣಕ್ಕೆ ತಿರುಗಿದಾಗ ಯೋಗ್ಯವಾಗಿರುತ್ತದೆ ವಿಟಮಿನ್ ಎ ಹೆಚ್ಚಾಗಿದ್ದು ಅಭಿ ಅಲ್ಲಿ ವಿವಿಧ ತಳಿಗಳು ಇವೆ ಇದನ್ನು ಚಮಚದ ಸಹಾಯದಿಂದ ತಿನ್ನಬೇಕು. ಅಭಿಯು ಬಿಳಿ ಬಣ್ಣದ ತಿರುಳನ್ನು ಹೊಂದಿದ್ದು ಉತ್ತಮ ಸುವಾಸನೆ ಹೊಂದಿದ್ದು ಸಿಹಿಯಾದ ಪಲ್ಪ್ ಅನ್ನು ಹೊಂದಿರುವುದರಿಂದ ಐಸ್ ಕ್ರೀಮ್ ,ಜೆಲ್ಲಿ ಜಾಮ್, ಮಿಲ್ಕ್ ಶೇಕ್ ಗಳ ತಯಾರಿಕೆಗೆ ಬಳಸುತ್ತಾರೆ. ವಿಟಮಿನ್ ಎ ಹೇರಳವಾಗಿದ್ದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ ವಿಟಮಿನ್ ಸಿ ಯನ್ನು ಹೊಂದಿದ್ದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕ್ಯಾಲ್ಸಿಯಂ ಪಾಸ್ಪರಸ್ ಕಾರ್ಬೋಹೈಡ್ರೇಟ್, ಪ್ರೋಟೀನ್ ಎಲ್ಲವನ್ನು ಹೊಂದಿದ್ದು ಆರೋಗ್ಯವರ್ಧಕವೂ ಹೌದು ಸಕ್ಕರೆಯ ಸಿಹಿ ಬೆಲ್ಲದ ಸಿಹಿ ಹಣ್ಣಿನಲ್ಲಿರುವ ಸಿಹಿ ಎಲ್ಲವೂ ಬೇರೆ ಬೇರೆಯಾದರೂ ಅವೆಲ್ಲವೂ ಸಿಹಿಯೇ ಹಾಗೆಯೇ ಮನುಷ್ಯರು ಬೇರೆ ಬೇರೆ ಇದ್ದರೂ ಎಲ್ಲರಲ್ಲೂ ಸಿಹಿಯಾದ ಗುಣಗಳು ಇರುತ್ತವೆ....! ಸೂಪರ್ ಟೆಸ್ಟ್ ....

 ಚಿತ್ರ ಬರಹ :ಕುಮಾರ್ ಪೆರ್ನಾಜೆ ಪುತ್ತೂರು 

ಪೆರ್ನಾಜೆ ಪೋಸ್ಟ್ ಪೆರ್ನಾಜೆ ಮನೆ ಕಾವು ವ.ಯ ಪುತ್ತೂರು ತಾಲೂಕು ದಕ್ಷಿಣ ಕನ್ನಡ 574223 Mob:9480240643