ನಾಡಿಗೆ ಡಾ.ಕೆ.ಶಿವರಾಮ ಕಾರಂತರ ಕೊಡುಗೆ ಅಪಾರ: ಪ್ರಭುಲಿಂಗ ಮುಲಗೆ ಅಭಿಪ್ರಾಯ

ನಾಡಿಗೆ ಡಾ.ಕೆ.ಶಿವರಾಮ ಕಾರಂತರ ಕೊಡುಗೆ ಅಪಾರ: ಪ್ರಭುಲಿಂಗ ಮುಲಗೆ ಅಭಿಪ್ರಾಯ

ಪ್ರಭುಲಿಂಗ ಮುಲಗೆ ಅಭಿಪ್ರಾಯ | ಡಾ.ಕೆ.ಶಿವರಾಮ ಕಾರಂತ್‌ರ ೧೨೦ನೇ ಜನ್ಮದಿನಾಚರಣೆ ನಾಡಿಗೆ ಡಾ.ಕೆ.ಶಿವರಾಮ ಕಾರಂತರ ಕೊಡುಗೆ ಅಪಾರ

ಕಲಬುರಗಿ: ಕಾದಂಬರಿಕಾರ, ಪರಿಸರವಾದಿ, ಪ್ರಗತಿಶೀಲ ಚಿಂತಕ, ಯಕ್ಷಗಾನ ತಜ್ಞ, ಸ್ವಾತಂತ್ರö್ಯ ಹೋರಾಟಗಾರ, ಚಿತ್ರ ನಿರ್ದೇಶಕ ಹೀಗೆ ಹತ್ತು ಹಲವು ಕ್ಷೇತ್ರಗಳ ಮೂಲಕ ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಮೇರು ಸಾಹಿತಿ ಡಾ.ಕೆ.ಶಿವರಾಮ ಕಾರಂತ ಅವರು ನಾಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮುಲಗೆ ಅಭಿಪ್ರಾಯಪಟ್ಟರು. 

        ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಶ್ರೀ ವಿವೇಕಾನಂದ ಕೋಚಿಂಗ್ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಡಾ.ಕೆ.ಶಿವರಾಮ ಕಾರಂತ್‌ರ ೧೨೦ನೇ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಿದರು.

  ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಜಗತ್ತಿನ ಶ್ರೀಮಂತಿಕೆಯಲ್ಲಿ ಒಂದಾಗಲು ಶಿವರಾಮ ಕಾರಂತರ ಕೊಡುಗೆ ಅನನ್ಯವಾಗಿದೆ. ‘ಮೂಕಜ್ಜಿಯ ಕನಸುಗಳು’, ‘ಮರಳಿ ಮಣ್ಣಿಗೆ’ ಎಂಬ ಮೇರು ಕೃತಿಗಳು, ೪೭ ಕಾದಂಬರಿಗಳು ಒಳಗೊಂಡಂತೆ ಒಟ್ಟು ೪೧೭ ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಕಾದಂಬರಿಯಲ್ಲಿ ಸಮಾಜದ ಬಗ್ಗೆ ತಮ್ಮ ಕಳಕಳಿಯನ್ನು ಎತ್ತಿ ತೋರಿಸಿದ್ದಾರೆ. ಎಲ್ಲಾ ಜನರು ಓದುವ, ತಿಳಿಯುವ ಹಾಗೆ ಸರಳವಾದ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದು ಅವರ ವೈಶಿಷ್ಟö್ಯತೆಯಾಗಿದೆ. ಪ್ರಸಿದ್ದ ಇತಿಹಾಸಕಾರರಾದ ರಾಮಚಂದ್ರ ಗುಹಾ ಅವರು ಹೇಳಿರುವಂತೆ, “ಸ್ವಾತಂತ್ರೋತ್ತರ ಭಾರತದ ರವೀಂದ್ರನಾಥ ಟ್ಯಾಗೋರ” ಎಂದು ಶಿವರಾಮ ಕಾರಂತರನ್ನು ವಣ ðಸಿದ್ದು, ಕಾರಂತರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

   ಕಾರಂತರಿಗೆ ‘ಕಡಲ ತೀರದ ಭಾರ್ಗವ’ ಎಂಬ ಬಿರುದಾಂಕಿತವಿತ್ತು. ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕು, ಸಮಾಜದ ಬಗ್ಗೆ ಸದಾ ಕಳಕಳಿ ತುಡಿಯುತ್ತಿತ್ತು. ಗಾಂಧಿಜೀಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗವಹಿಸಿದರು. ದೇಶ ಸೇವೆಯ ಜೊತೆಯಲ್ಲಿ ಸಮಾಜಕ್ಕೆ ಬಹು ಉಪಯುಕ್ತವಾದ ಹಾಗೂ ಮೌಲಿಕವಾದ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದರು.

        ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಕಸಾಪ ಉತ್ತರ ವಲಯದ ಸಂಘಟನಾ ಕಾರ್ಯದರ್ಶಿ ಬಸವರಾಜ ಮಳ್ಳಿ, ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.