ಸಗರ ರಸ್ತೆಯ ಮೇಲೆ ಕಸದ ರಾಶಿ.

ಸಗರ ರಸ್ತೆಯ ಮೇಲೆ ಕಸದ ರಾಶಿ.

ಸಗರ ರಸ್ತೆಯ ಮೇಲೆ ಕಸದ ರಾಶಿ.

ಶಹಪುರ : ತಾಲೂಕಿನ ಸಗರ ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಚರಂಡಿ ಸ್ವಚ್ಛಗೊಳಿಸಿ ಅದರ ಕಸವನ್ನು ರಸ್ತೆ ಮೇಲೆ ಬಿಟ್ಟು ಒಂದು ತಿಂಗಳಾದರೂ ವಿಲೇವಾರಿ ಮಾಡದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಸರಕಾರ ನೈರ್ಮಲ್ಯದ ಬಗ್ಗೆ ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ ಆದರೆ ತಾಲೂಕಿನ ಸಗರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಚರಂಡಿ ಕಸ ರಸ್ತೆ ಮೇಲೆ ಹಾಕಿರುವುದರಿಂದ,ದುರ್ವಾಸನೆ ಬೀರಿ ರೋಗ ರುಜಿನಗಳು ಹರಡುವ ಭೀತಿ ಶುರುವಾಗಿದೆ.

ರಸ್ತೆ ಮೇಲೆ ಚರಂಡಿಯ ಕಸ ರಾಶಿಯಾಗಿ ಬಿದ್ದು,ನೀರು ಹರಿಯದಂತೆ ಕೊಳಕು ವಾತಾವರಣ ಸೃಷ್ಟಿಯಾಗಿ ಹಂದಿ, ನಾಯಿ,ಹಾವು,ಚೇಳುಗಳ,ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚರಂಡಿಯ ಕಸ ವಿಲೇವಾರಿ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಹಾಗೂ ಮೇಲಾಧಿಕಾರಿಗಳಿಗೂ ಸಂಪರ್ಕಿಸಿದರು,ಕ್ಯಾರೆ ಎನ್ನುತ್ತಿಲ್ಲ, ಕೂಡಲೇ ಕಸ ವಿಲೆವರಿ ಮಾಡಿ ರಸ್ತೆ ಸ್ವಚ್ಛ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.