ರಾಜೇಂದ್ರ. ಏನ್. ಕೊಲ್ಲೂರು ರವರಿಗೆ ಜೀವನ್ ಜ್ಯೋತಿ ರಾಷ್ಟೀಯ ಪ್ರಶಸ್ತಿ ಪ್ರಧಾನ

ರಾಜೇಂದ್ರ. ಏನ್. ಕೊಲ್ಲೂರು ರವರಿಗೆ ಜೀವನ್ ಜ್ಯೋತಿ ರಾಷ್ಟೀಯ ಪ್ರಶಸ್ತಿ ಪ್ರಧಾನ
ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರದಲ್ಲಿ ರಾಜೇಂದ್ರ. ಏನ್. ಕೊಲ್ಲೂರು ರವರಿಗೆ ಜೀವನ್ ಜ್ಯೋತಿ ರಾಷ್ಟೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಭಾರತ ಸರಕಾರದ ನೆಹರು ಯುವ ಕೇಂದ್ರದ ಜೊತೆಗೆ ಕನಸು ಡಿಜಿಟಲ್ ಸೊಲ್ಯೂಷನ್ಸ್ ವತಿಯಿಂದ ಪ್ರಪ್ರಥಮವಾಗಿ ಇದೆ ಮೊದಲ ಬಾರಿಗೆ ನೀಡುತ್ತಿರುವ ಜೀವನ್ ಜ್ಯೋತಿ ರಾಷ್ಟೀಯ ಪ್ರಶಸ್ತಿಗೆ ರಾಜ್ಯದ ಎಲ್ಲಾ ಭಾಗಗಳಿಂದ ಸಮಾಜ ಸೇವೆ ಮಾಡುತ್ತಿರುವ ಅನೇಕ ಸಂಸ್ಥೆಗಳನ್ನು ಗುರುತಿಸಿ ಆ ಸಂಸ್ಥೆಯ ಅಧ್ಯಕ್ಷರುಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ರಾಜೇಂದ್ರ. ಏನ್. ಕೊಲ್ಲೂರು ಅವರು ಮಾತೃಭೂಮಿ ಸೇವಾ ಸಂಸ್ಥೆಯ ಮೂಲಕ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅವರು ತುಂಬಾ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಸೋಶಿಯಲ್ ಮೀಡಿಯಾ ಮೂಲಕ ಅವರು ಕೂಡ ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ಗಮನಿಸಿ ಮತ್ತು ಸಮಾಜಕ್ಕೆ ಒಳ್ಳೆಯ ಮಾದರಿಯಾಗುವ ಕಿರುಚಿತ್ರ ಮಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ, ತುಂಬಾ ಬಡತನದಲ್ಲಿ ಹುಟ್ಟಿ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸಕಲಕಾಲ ಪ್ರತಿಭೆ ಯನ್ನು ನಮ್ಮ ಕನಸು ಡಿಜಿಟಲ್ ಸೊಲ್ಯೂಷನ್ ಸಂಸ್ಥೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಾರ್ಚ್ 3 ನೇ ತಾರೀಖು ಸೋಮವಾರ ದಂದು ಬೆಂಗಳೂರು ಜಯಚಾಮರಾಜ ನಗರದ ಸರಕಾರಿ ಕನ್ನಡ ಭವನ ದಲ್ಲಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರದ ಖ್ಯಾತ ನಿರ್ಮಾಪಕರು, ನಾಯಕ ನಟಿಯರು, ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಹೆಸರು ಮಾಡಿದ ಸೆಲೆಬ್ರಿಟಿಸ್, ಖ್ಯಾತ ಸಂಗೀತಗಾರರು ಗಳು ಹಾಗೂ ಅನೇಕ ರಾಜಕೀಯ ಧುರಿಣರು, ಮಾತಾಧೀಶರು, ಅನೇಕ ಸಂಘ ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.