ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ಜರುಗಿತು

ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ಜರುಗಿತು

ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ಜರುಗಿತು

ಕಲಬುರಗಿ: ಜನಪದ ನೃತ್ಯಗಳನ್ನು ಪ್ರದರ್ಶಿಸುವ ಒಂದು ವೈಶಿಷ್ಟ್ಯ ಪೂರ್ಣ ಪ್ರಮಾಣದ ಕಾರ್ಯಕ್ರಮವಾಗಿದೆ. ವಿವಿಧ ಜನಪದ ನೃತ್ಯ ಶೈಲಿಗಳು ಪ್ರದರ್ಶನಗೊಂಡವು, ಮತ್ತು ಸಮುದಾಯದ ಸಂಸ್ಕೃತಿ ಹಾಗೂ ಪರಂಪರೆಯನ್ನು ಜೀವಂತವಾಗಿಸಿಕೊಳ್ಳಲಾಗುತ್ತದೆ ಎಂದು ನಗರದ ರಂಗಾಯಣದಲ್ಲಿ ಮನಸ್ವಿ ಸಾಂಸ್ಕೃತಿಕ ಹಾಗೂ ನಾಟ್ಯ ಕಲಾವಿದರ ಸಂಘದ ವತಿಯಿಂದ ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯಕಲಾವಿದ ಚಾಂದ ಜಾಕ್ಸನ್ ಅವರು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಲಾವಿದರಾದ ಮಂಜುಳಾ ಬಿ. ಜಾನೆ, ಸಂತೋಷ ಅಂದಾನಿ, ಯಂಕಪ್ಪ ಅಕ್ಷಯ, ಜ್ಯೋತಿ ಅಕ್ಷಯ, ಮನಸ್ವಿ ಸಾಂಸ್ಕೃತಿಕ ಹಾಗೂ ನಾಟ್ಯ ಕಲಾವಿದರ ಸಂಘದ ಅಧ್ಯಕ್ಷ ವಿಕ್ರಂ ಗೋಕುಲಕರ್, ಕಲಾವಿದರಾದ ಸೂರ್ಯಕಾಂತ ನಂದೂರ, ಸೈಮಂಡ್, ದಿನೇಶ ನಾಯಕ, ಸುರಜ್ ಲೋನಾರ್ ಸೇರಿದಂತೆ ಇತರರು ಇದ್ದರು.