ನಗರದ ಖಾಸಗಿ ಶಾಲೆಯ ವಾಹನ ಚಾಲನೆಗೆ ನಿಯಮಗಳ ಬದಲಾವಣೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ವಿನಂತಿಸಿಕೊಳ್ಳುತ್ತೇನೆ, ಮತ್ತು ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಗುರು ಬಂಡಿ ಆಗ್ರಹ
ಇತ್ತೀಚಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮ ಮಾನ್ವಿ ಖಾಸಗಿ ಲೋಯಲ್ ಶಾಲೆಯ ಬೀಗರ ಅಪಘಾತಕ್ಕೆ ಇಡಾಗಿದ್ದು ತುಂಬಾ ದುಃಖಕರ ವಿಷಯವಾಗಿದೆ ಈ ಘಟನೆಗೆ ಖಾಸಗಿ ಶಾಲೆ ಆಡಳಿತ ಮಂಡಳಿ ಮೂಲ ಕಾರಣವಾಗಿದೆ
ಶಾಲೆಯ ವಾಹನಗಳ ಚಾಲಕರಿಗೆ ಶಾಲೆಯ ಆಡಳಿತ ಮಂಡಳಿ ಅಂದರೆ ಕಡಿಮೆ ಸಮಯದಲ್ಲಿ ನಗರದ ಎಷ್ಟು ಕಡೆಗಳಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕೆಂದು ಮಂಡಳಿ ಒತ್ತಾಯಿಸುತ್ತದೆ ಕಡಿಮೆ ಸಮಯದಲ್ಲಿ ಚಾಲಕನು ಟಾರ್ಗೆಟನ್ನು ಮುಗಿಸಬೇಕು ಅನ್ನೋ ಕಾರಣಕ್ಕೆ ಅತಿಯಾಗಿ ಸ್ಪೀಡ್ ಓಡಿಸಿ ಈ ರೀತಿ ದುರ್ಘಟನೆಗೆ ಕಾರಣವಾಗಿರುತ್ತದೆ.
ಇದಕ್ಕೆ ಕಡಿವಾಣ ಹಾಕಬೇಕು ಮತ್ತು ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಸೀಟ್ ಗಳಿಗಿಂತ ಜಾಸ್ತಿ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುತ್ತಾರೆ ಹಾಗೂ ಶಾಲೆಯ ವಾಹನಗಳಿಗೆ 50 ಸ್ಪೀಡ್ ಗಳಿಗೆ ಕಡಿವಾಣ ಹಾಕಬೇಕು ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ನಗರದ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ನಗರದ ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಕರ್ನಾಟಕ ಸಂಘಟನೆಯ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರು ಬಂಡಿ ಅವರು ಪತ್ರಿಕಾಗೋಷ್ಠಿಯ ಮೂಲಕ ಆಗ್ರಹಿಸುತ್ತಿದ್ದಾರೆ..