ಪಾಳಾ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಪಾಳಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಮಕ್ಕಳು ವಿದ್ಯೆಯ ಜೊತೆಗೆ ಸಂಸ್ಕಾರ ಕಲಿಯುವದು ಬಹಳ ಮುಖ್ಯವಾಗಿದೆ ಎಂದು ಶಿಕ್ಷಕಿ ಸವಿತಾ ಹೇಳಿದರು.
ಇಂದು ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು
ಕಿರಣ ಮಳಿಗೆ ಅವರು ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಿಸಿದರು. ಎಸ್ ಡಿ.ಎಮ್.ಸಿ. ಅಧ್ಯಕ್ಷ ಗುಂಡಪ್ಪ ತಳವಾರ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಗುರುಗಳಾದ ನೀಲಕಂಠರಾವ್ ಹಿರಿಯ ಶಿಕ್ಷಕರಾದ ಮಲ್ಲಿಕಾರ್ಜುನ್ ಭಜಂತ್ರಿ. ವಿಶ್ವನಾಥ್ ರಾಠೋಡ,ಡಾ. ಕಾವೇರಿ ಕಾಂಬಳೆ. ರಾಜಶೇಖರ್ ಸರ್. ಹುಸೇನಿ ಪಾಳಾ ಅತಿಥಿ ಶಿಕ್ಷಕರಾದ ಆಕಾಶ್ ಪಾಳಾ ಮತ್ತು ಅಡಿಗೆ ಸಿಬ್ಬಂದಿ ಇದ್ದರು, ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು , ಶಿಕ್ಷಕ ಮಲ್ಲಿಕಾರ್ಜುನ್ ಭಜಂತ್ರಿ ಸ್ವಾಗತಿಸಿದರು.