ಮಗುವಿಗೆ ಶಿಕ್ಷಣದ ಜೊತೆಗೆ ಕಥೆ ಹೇಳಿ - ಬಾನಾಳ
ಮಗುವಿಗೆ ಶಿಕ್ಷಣದ ಜೊತೆಗೆ ಕಥೆ ಹೇಳಿ - ಬಾನಾಳ
ಶಹಾಪುರ (ಗ್ರಾ): ಮಕ್ಕಳಿಗೆ ಶಿಕ್ಷಣದ ಜೊತೆಗೆ ಮನೋರಂಜನೆಗಾಗಿ ಪಾಠದ ಸಮಯದಲ್ಲಿ ಶಿಕ್ಷಕರು ಕಥೆ ಹೇಳುವುದರ ಮೂಲಕ ಅವರ ಮನಸ್ಸನ್ನು ಸೆಳೆಯುವ ಪ್ರಯತ್ನ ಶಿಕ್ಷಕರು ಮಾಡಬೇಕು ಎಂದು ಚಂದ್ರಶೇಖರ ಬಾನಾಳ ಹೇಳಿದರು
ತಾಲೂಕಿನ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಚರಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಕಥಾ ಸಮಯ ವಿಶೇಷ ಕಾರ್ಯಕ್ರಮವನ್ನು ಭಾಗವಹಿಸಿ ಮಾತನಾಡಿದರು,ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮತ್ತು ನಮ್ಮ ರಾಷ್ಟ್ರದ ಶಿಕ್ಷಣಕ್ಕೆ ತುಂಬಾ ವ್ಯತ್ಯಾಸವಿದ್ದು,ವಿದ್ಯಾರ್ಥಿಗಳು ಓದಿಗೆ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.ಜರ್ಮನ್ ಹಾಗೂ ಸ್ವಿಡ್ಜರ್ಲ್ಯಾಂಡಿನ ಹಲವು ಶಿಕ್ಷಣದ ಅಂಶಗಳು ಮಕ್ಕಳಿಗೆ ತಿಳಿಪಡಿಸಿದರು.
ಮುಖ್ಯ ಗುರುಗಳಾದ ಚಂದಣ್ಣ ಚಡಗುಂಡ ಮಾತನಾಡಿ ಮಕ್ಕಳಿಗೆ ಕಥೆ ಹೇಳುವುದರಿಂದ ಅವರಲ್ಲಿಯ ಭಾಷಾ ಪ್ರೌಢಿಮೆ, ಸೃಜನಶೀಲತೆ ಭಾವನಾತ್ಮಕ ಬೆಳವಣಿಗೆಯ ಜೊತೆಗೆ ವೈಯಕ್ತಿಕ ಅನುಭವಗಳನ್ನು ಅಲ್ಲಿ ಕಥೆಯ ಮೂಲಕ ಬಿತ್ತರಿಸಬಹುದಾಗಿದೆ ಎಂದು ನುಡಿದರು.
ನಂತರ ವಿದ್ಯಾರ್ಥಿಗಳಾದ ಕುಮಾರಿ ಬಾನು,ರೇಖಾ,ಅಮರೇಶ್, ನಿಂಗಮ್ಮ,ರಂಗಪ್ಪ ಕಥೆ ಹೇಳಿ ರಂಜಿಸುವುದರ ಜೊತೆಗೆ ಎಲ್ಲರಿಂದ ಮೆಚ್ಚುಗೆ ಪಡೆದರು, ಸಮಾರಂಭದ ವೇದಿಕೆಯ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರೀಶ್ ಸಿದ್ರಾ,ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ದೇವೇಂದ್ರಪ್ಪ ಹಡಪದ,ದೈಹಿಕ ಶಿಕ್ಷಕ ಚಂದ್ರಪ್ಪ,ಶಿಕ್ಷಕಿ ಉಮಾಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
