ಕವಿಗಳಿಗೆ ಜಾತಿ ಪಟ್ಟಕಟ್ಟಬೇಡಿ ಡಾ.ಎಚ್.ಟಿ ಪೋತೆ

ಕವಿಗಳಿಗೆ ಜಾತಿ ಪಟ್ಟಕಟ್ಟಬೇಡಿ   ಡಾ.ಎಚ್.ಟಿ ಪೋತೆ

ಕವಿಗಳಿಗೆ ಜಾತಿ ಪಟ್ಟಕಟ್ಟಬೇಡಿ : ಡಾ.ಎಚ್.ಟಿ ಪೋತೆ 

ಪ್ರಾಚೀನ ಜೈನ ಸಾಹಿತ್ಯ- ಮಹಿಳೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ.ಎಚ್.ಟಿ ಪೋತೆ ಅಭಿಮತ

ಆಳಂದ: ಪಟ್ಟಣದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಎ .ವಿ. ಪಾಟೀಲ ಮಹಾವಿದ್ಯಾಲಯದಲ್ಲಿ ಹಮ್ಮಿ ಕೊಂಡಿದ್ದ ಪ್ರಾಚೀನ ಜೈನ ಸಾಹಿತ್ಯ - ಮಹಿಳೆ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಲೇಖಕ, ಬರಹಗಾರ, ವಿಮರ್ಶಕ ಕಾದಂಬರಿಕಾರ ಜಾನಪದ ವಿದ್ವಾಂಸರು ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್. ಟಿ. ಪೋತೆ. ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕವಿಗಳಿಗೆ ಜಾತಿಯಿಂದ ಗುರುತಿಸಬಾರದು ಜೈನರೆಂದರೆ ಯಾರು? ಅಹಿಂಸೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡವರು. ಪಂಪ ಮಾನವ ಜಾತಿ ತಾನೊಂದೆ ವಲಂ ಎಂದಿರುವುದನ್ನು ಸ್ಮರಿಸಿ ನಾವು ನಮ್ಮ ಜಾತಿ ಧರ್ಮ ನಮ್ಮ ಮನೆಯ ಹೊಸ್ತಿಲಿನ ಒಳಗೆ ಇಡಬೇಕು ಹೊರಗೆ ಬಂದಾಗ ನಾವು ಭಾರತೀಯರು ಎಲ್ಲರೂ ಸಮಾನರು .ಜೈನ ಕವಿಗಳ ಕೊಡುಗೆ ಅಪಾರ ಮತ್ತು ಅಮರ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಶೀಲ ನಮೋಶಿ ಜೈನರು ಬೇರೆ ಸಮುದಾಯಗಳಿಗೆ ಮಾದರಿಯಾದಂತ ಸಮಾಜ ಅಹಿಂಸೆ ಮತ್ತು ಸತ್ಯವನ್ನು ತನ್ನಜೀವನದಲ್ಲಿ ಅಳವಡಿಸಿಕೊಂಡಿ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ನುಡಿದರು.

ಮಲ್ಲಿನಾಥ ಪುರಾಣ ಮಹಿಳೆ ಎಂಬ ವಿಷಯದ ಕುರಿತು ಎಲ್ಲರಿಗೂ ಮನಮುಟ್ಟುವಂತೆ ಮಾರ್ಮಿಕವಾಗಿ ಸಂಜಯ ಪಾಟೀಲ ಮಾತನಾಡಿದರು.

ಧರ್ಮಾಮೃತ ಮಹಿಳೆ ವಿಷಯ ಕುರಿತು ಡಾ. ಶ್ರೀಶೈಲ ನಾಗರಾಳ ಉಪನ್ಯಾಸ ನೀಡಿದರು ಈ ಸಂದರ್ಭದಲ್ಲಿ ಡಾ ತಾರಿಹಳ್ಳಿ ಹನುಮಂತಪ್ಪ, ಸಂಯೋಜನಾಧಿಕಾರಿ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರ ಕನ್ನಡ ವಿಶ್ವವಿದ್ಯಾಲಯ ಹಂಪಿ .ಎ.ವಿ ಪಾಟೀಲ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಚ್.ಎಸ್ ಹೊಸಮನಿ, ಡಾ.ಎಂ.ಎಸ್ ಪಾಸೋಡಿ. ಡಾ.ಸೂರ್ಯಕಾಂತ ಸುಜಾತ್ ಬಾಬುರಾವ ಮಡ್ಡೆ, ಡಾ. ಬೈರಮಂಗಲ ರಾಮೇಗೌಡ, ನಾಗಣ್ಣ ಘಂಟಿ, ಸುನೀಲ ಹಿರೋಳಿಕರ ಡಾ.ಸುನೀಲಕಾಂಬಳೆ ಡಾ ಶಿವಪ್ಪ ಕಡಗಂಚಿ ಬಸವರಾಜ ಶ್ರೀಂಗೇರಿ ಮಮತಾ ರಾಜಶ್ರೀ ದಿನೇಶ ಪಾಟೀಲ, ಬಸವರಾಜ ಪಾಟೀಲ ಜೈನ ಸಮುದಾಯದ ಹರಿಯ ವಕೀಲ ಪಿ.ಎನ್ ಶಹಾ,ಬಾಬುರಾವ ಮಡ್ಡೆ ಜೈನ ಸಮುದಾಯದ ಯುವಕರು ಯುವತಿಯರು ಜೈನ ಪಾಠಶಾಲೆಯ ಶಿಕ್ಷಕರು ವಿದ್ಯರ್ಥಿಗಳು ಮುಂತಾದವರು ಉಪಸ್ಥಿತರಿದ್ದರು ಡಾ. ಬಬ್ರುವಾಹನ ನಿರೂಪಿಸಿದರು. ಡಾ.ಎಸ್.ಎಚ್. ಹೊಸಮನಿ ಸ್ವಾಗತಿಸಿದರು. ಡಾ. ರಮೇಶ ವಂದಿಸಿದರು

ವರದಿಗಾರರು ಡಾ ಅವಿನಾಶ ಎಸ್ ದೇವನೂರ