ಕಮಲನಗರ|ಚನ್ನಬಸವ ಪಟ್ಟದ್ದೇವರು ಶಾಲೆಯಲ್ಲಿ ಮಕ್ಕಳಿಗಾಗಿ ವಿವಿದ ಸ್ಪರ್ಧೆ ಕಾರ್ಯಕ್ರಮ ನಡೆಸಿದರು
ಕಮಲನಗರ|ಚನ್ನಬಸವ ಪಟ್ಟದ್ದೇವರು ಶಾಲೆಯಲ್ಲಿ ಮಕ್ಕಳಿಗಾಗಿ ವಿವಿದ ಸ್ಪರ್ಧೆ ಕಾರ್ಯಕ್ರಮ ನಡೆಸಿದರು
ಕಮಲನಗರ : ಪಟ್ಟಣದ ಡಾ|| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ, ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರು ಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ 45ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ 2024 ನಿಮಿತ್ಯ ತಾಲ್ಲೂಕಾ ಮಟ್ಟದ ಶರಣರ ವಚನ ಗಾಯನ, ವಚನ ಭಾಷಣ, ವಚನ ಭಾವಾರ್ಥ ಲೇಖನ, ಶರಣರ ಕುರಿತು ರಸಪ್ರಶ್ನೆ ಹಾಗೂ ರೂಪಕ ನಾಟಕ ಜರಿಗುದವು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಮಲನಗರದ ಪಿ.ಎಸ್.ಐ ರಾದ ಶ್ರೀ ಚಂದ್ರಕಾಂತ ನಿರ್ಣಾ ನೆರವೆರಿಸಿದರು. ಬಸವ ಪೂಜೆಯನ್ನು ಗ್ರಾಮ ಪಂಚಾಯತ ಅಭಿವೃಧಿ ಅಧಿಕಾರಿಯಾದ ಶ್ರೀ ರಾಜಕುಮಾರ ತಂಬಾಕೆ ಸಲ್ಲಿಸಿದರು,
ಶಾಲೆಯ ಆಡಳಿತಾಧಿಕಾರಿಯಾದ ಶ್ರೀ ಚನ್ನಬಸವ ಘಾಳೆರವರು ಕಾರ್ಯಕ್ರಮವನು ಉದ್ದೇಶಿಸಿ ಅನುಭವಮಂಟಪ ಉತ್ಸವನ್ನು ಪರಮ ಪೂಜ್ಯರಾದ ನಾಡೋಜ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು 12ನೇ ಶತಮಾನದ ಶರಣರ ಸಾಮಾಜಿಕ ಪರಿವರ್ತನೆಗೆ ಮಾಡಿದ ಕಾರ್ಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ನಿರ್ಣಾಯಕರಾಗಿ ಶ್ರೀ ಚಂದ್ರಕಾತ ಬಿರಾದರ, ಶ್ರೀ ಮಡಿವಾಳ ಮಹಾಜನ, ಶ್ರೀ ಎಸ್.ಎಸ್. ಮೈನಾಳೆ, ಶ್ರೀ ದಶರಥ ಔರಾದೆ, ಶ್ರೀ ರಾಜೇಂದ್ರ ಭಾಲೆಕರ, ಶ್ರೀ ಉಮಾಕಾಂತ ಸುಲಾಕೆ, ಶ್ರೀ ನಾಗನಾಥ ಮಠ ಹಾಗೂ ಶ್ರೀಮತಿ ಫರಾಹ ಇನ್ನಿತರರಿದ್ದರು.
ಕಾರ್ಯಕ್ರಮದ ಸಂಯೋಜಕರಾಗಿ ಶ್ರೀಯುತ ಚನ್ನಬಸವ ಘಾಳೆ ಹಾಗೂ ಮಹಾದೇವ ಮಾಡಿವಾಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ನಡೆಯಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಹಾವಗಿರಾವ ಮಠಪತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಶ್ರೀ ಶ್ರೀಧರ ರಡ್ಡಿ, ಶ್ರೀ ತಾನಾಜಿ ಕಿಟ್ಟಾ, ರಾಜೇಶ್ವರಿ ಬಿರಾದರ, ಶಿವಕುಮಾರ ಎಕಲಾರೆ, ವಿಶಾಲ ಸೋಲಾಪುರೆ,ಪಲ್ಲವಿ ನಾಯ್ಕ, ಕಾಮಾಕ್ಷಿ ಸುತಾರ, ಅರ್ಚನಾ ನಾಯ್ಕ ಹಾಗೂ ಶಾಲೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದರು.