ಶ್ರೀ ಶರಣಬಸವೇಶ್ವರ ಸಂಸ್ಥಾನದ ಉಭಯ ಪೀಠಾಧಿಪತಿಗಳ ಜನ್ಮದಿನಾಚರಣೆ : ಶ್ರೀಧರ ನಾಗನಹಳ್ಳಿ, ದಯಾನಂದ ಪಾಟೀಲ್

ಶ್ರೀ ಶರಣಬಸವೇಶ್ವರ ಸಂಸ್ಥಾನದ ಉಭಯ ಪೀಠಾಧಿಪತಿಗಳ ಜನ್ಮದಿನಾಚರಣೆ  : ಶ್ರೀಧರ ನಾಗನಹಳ್ಳಿ, ದಯಾನಂದ ಪಾಟೀಲ್

ಶ್ರೀ ಶರಣಬಸವೇಶ್ವರ ಸಂಸ್ಥಾನದ ಉಭಯ ಪೀಠಾಧಿಪತಿಗಳ ಜನ್ಮದಿನಾಚರಣೆ : ಶ್ರೀಧರ ನಾಗನಹಳ್ಳಿ, ದಯಾನಂದ ಪಾಟೀಲ್ 

ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರ್ಗಿ (ರಿ )ಜಿಲ್ಲಾ ಸಮಿತಿವತಿಯಿಂದ ನವೆಂಬರ್ 14ರಂದು ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳು ಪೂಜ್ಯ ಡಾ. ಶ್ರೀ ಶರಣಬಸಪ್ಪ ಅಪ್ಪಾಜಿ ಹಾಗೂ ಪೂಜ್ಯ 9ನೇ ಪೀಠಾದೀಪತಿಗಳಾದ ಪೂಜ್ಯ ಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪ ಮತ್ತು ಶ್ರೀ ಶರಣಬಸವೇಶ್ವರ್ ವಿದ್ಯಾ ವರ್ಧಕ ಸಂಘದ ಚೇರ್ ಪರ್ಸನ್ , ಮಾತೋಶ್ರೀ ಶ್ರೀ ಡಾ. ದಾಕ್ಷಾಯಣಿ ಎಸ್ ಅಪ್ಪ ಅವರ ಜನುಮದಿನ ಆಚರಣೆ ಮಾಡಲಾಗುವುದು ಎಂದು ಶ್ರೀಧರ್ ನಾಗನಹಳ್ಳಿ ದಯಾನಂದ್ ಪಾಟೀಲ್ ಜಂಟಿಯಾಗಿ ತಿಳಿಸಿದರು. 

ಪೂಜ್ಯರ ಜನ್ಮದಿನದ ಪ್ರಯುಕ್ತ  ಕಲಬುರಗಿ ಆರಾಧ್ಯ ದೈವ ಶ್ರೀ ಶರಬಸವೇಶ್ವರ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆ, ಲಿಂಗ ದೀಕ್ಷೆ , ಇಷ್ಟಲಿಂಗಪೂಜೆ , ಜಂಗಮ ವಟುಗಳಿಗೆ ಅಯ್ಯಚಾರ ಮತ್ತು ಸಾಮೂಹಿಕ ಮಹಾ ಮೃತುಂಜಯಜಪ ಕಾರ್ಯಕ್ರಮ ಜರುಗಲಿದ್ದು ಸಕಲ ಭಕ್ತಾದಿಗಳು ಆಗಮಿಸಿ ಶರಣರ ಕೃಪಾಗೆ ಪಾತ್ರಗಬೇಕೆಂದು  ಹೇಳಿದರು.

ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಕಲ್ಯಾಣರಾವ್ ಪಾಟೀಲ್ ಕಣ್ಣಿ, ಪ್ರಧಾನ್ ಕಾರ್ಯದರ್ಶಿ ಸುನೀಲ್ ಮಹಾಗವಂಕರ್, ಕಾರ್ಯದರ್ಶಿ ಮಹೇಶ್ ಚಂದ್ರ ಪಾಟೀಲ್ ಕಣ್ಣಿ, ಸಹ ಕಾರ್ಯದರ್ಶಿ ಆನಂದ್ ಕಣಸೂರ್, ಪರಮೇಶ್ವರ್ ಯಳಮೆಲಿ, ಜಿಲ್ಲಾ ಸಂಚಾಲಕರಾದ ಗುರುರಾಜ್ ಅಂಬಾಡಿ, ಸತೀಶ್ ಮಾಹುರ್, ಸತೀಶ್ ಕೋಣಿನ್, ಶಿವುಕುಮಾರ್ ಸಾವಳಗಿ, ಗುರುರಾಜ್ ಸುಂಟಿನೂರ್, ಸುನೀಲ್ ಕೊಳ್ಕೊಂರ್ ಸದ್ಯಸರಾದ ಶರಣು ಕರೆಕಲ್, ಕಿರಣ್ ಕಣ್ಣಿ,ಪ್ರಜ್ವಲ್ ಕೊರಳ್ಳಿ , ಅಜಯ್ ರೆಡ್ಡಿ, ಅವಿನಾಶ್ ಗೊಬ್ಬುರಕರ್, ಮಲ್ಲು ಕೊಂಡೆದ, ವಿಜಯ ಪುರಾಣಿಕಮಠ್, ಅಣ್ಣಾರಾಯ ಹಿರೇಗೌಡ, ನಾಗಯ್ಯ ಮಾಲಾಗತ್ತಿ, ಆಕಾಶ್ ಕುಲಕರ್ಣಿ, ಸಚೀನ್, ನಿಖಿಲ್ ಬಿಲಗುಂದಿ , ಶ್ರೀಕಾಂತ್ ಬಿರಾದಾರ್, ನಾಗೇಶ್ ಹಾವನೂರ್ ಅವಿನಾಶ್ ಅರಳಿ , ಮಲ್ಲು ಗೋಲೆದ, ಮಹೇಶ್ ಬಾಳ್ಳಿ, ಆನಂದ್ ಕೇಶವ್, ಅಭಿಷೇಕ್ ಪಾಟೀಲ್, ಶ್ರೀಶೈಲ್ ಪಾಟೀಲ್, ಅಭಿಷೇಕ್ ನಾಗನಹಳ್ಳಿ ಉಪಸ್ಥಿತರಿದ್ದರು.