ಆಳಂದ ತಾಲೂಕಿನ ಎನ್.ಆರ್.ಇ.ಜಿ ತೆರದ ಬಾವಿ ಕಾಮಗಾರಿ ಕುರಿತು ಹರ್ಷಾನಂದ ಗುತ್ತೇದಾರ ಹೇಳಿಕೆ ಖಂಡನೀಯ: ಬಸವರಾಜ ಜಿ ಉಪ್ಪಿನ

ಆಳಂದ ತಾಲೂಕಿನ ಎನ್.ಆರ್.ಇ.ಜಿ ತೆರದ ಬಾವಿ ಕಾಮಗಾರಿ ಕುರಿತು ಹರ್ಷಾನಂದ ಗುತ್ತೇದಾರ ಹೇಳಿಕೆ ಖಂಡನೀಯ: ಬಸವರಾಜ ಜಿ ಉಪ್ಪಿನ
ಕಲಬುರಗಿ: ಆಳಂದ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಲ್ಲಿ ಕೈಗೊಂಡಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿರುವುದಿಲ್ಲ ಎಂದು ಕಲಬುರಗಿ, ಬೀದರ, ಯಾದಗೀರ ಕೆಎಂಎಪ್ ನಿರ್ದೇಶಕರಾದ ಬಸವರಾಜ ಜಿ ಉಪ್ಪಿನ ಅವರು ಸ್ಪಷ್ಟಪಡಿಸಿದರು.
ಈ ಕುರಿತು ಪ್ರಕಟಣೆ ನೀಡಿದ ಅವರು, ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಹಲವಾರು ಅಭಿವೃದ್ದಿ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿಕೊಂಡು ಬಂದಿರುತ್ತಾರೆ.ಎನ್.ಆರ್.ಇ.ಜಿ ಕಾಮಗಾರಿಯಲ್ಲಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಆಳಂದ ತಾಲೂಕಿನಲ್ಲಿ ತೆರೆದ ಬಾವಿ ಕಾಮಗಾರಿಯನ್ನು ಶಾಸಕ ಬಿ.ಆರ್.ಪಾಟೀಲರು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾಮಗಾರಿ ಯೋಜನೆಯನ್ನು ತಂದಿದ್ದಾರೆ. ಕಾಮಗಾರಿಯನ್ನು ಪ್ರಾರಂಭ ಮಾಡುವ ಸಂದರ್ಭದಲ್ಲಿ ಕಾರ್ಮಿಕರಿಂದ ಎಷ್ಟು ಕೆಲಸ ಸಾಧ್ಯವೋ ಅಷ್ಟು ಕೆಲಸವನ್ನು ಮಾಡಲಾಗಿದೆ.ಅದಲ್ಲದೇ ಪದೇಪದೇ ಬಿ.ಆರ್.ಪಾಟೀಲರ ಹೆಸರು ಮತ್ತು ಆರ.ಕೆ.ಪಾಟೀಲ ಹೆಸರಿಗೆ ಕಳಂಕ ತರುವುದು ಶೋಭೆ ತರತಕ್ಕದಲ್ಲ.ಆದರೆ ಹರ್ಷಾನಂದ ಗುತ್ತೇದಾರ ಅವರು ಪದೇ ಪದೇ ಶಾಸಕರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ.ಮಹಾತ್ಮಗಾಂಧಿ ಉದ್ಯೋಗ ಖಾತರಿಯಲ್ಲಿ ಕಾರ್ಮಿಕರನ್ನು ಬಳಸಿಯೇ ಯಂತ್ರಗಳಿಂದ ನರೇಗಾ ಅಡಿಯಲ್ಲಿ ಕಾಮಗಾರಿ ಮಾಡಲಾಗಿದೆ ವಿನಃ ಈ ಕ್ರಿಯಾ ಯೋಜನೆ ರೂಪಿಸುವ ಸಂದರ್ಭದಲ್ಲಿ ಎಲ್ಲಾ ಜಾತಿ ಜನಾಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷವಾಗಿ ಸಣ್ಣ ರೈತರಿಗೆ ಆಯ್ಕೆ ಮಾಡಲಾಗಿದೆ.ಗ್ರಾಮದಲ್ಲಿ ವಾಸವಿರುವ ಇರುವವರ ಹೆಸರನ್ನು ಬಳಸಲಾಗಿದೆ. ಯಾವುದೇ ರೀತಿಯಿಂದ ಅರೆ ಸರಕಾರಿ ನೌಕರರ ಹೆಸರನ್ನು ಹಾಜರಿಯಲ್ಲಿ ಹಾಕಿರುವುದಿಲ್ಲ.ಶಾಸಕರ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿರುವುದನ್ನು ನೋಡಿ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಹೇಳಿಕೆ ನೀಡಿದ್ದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್.ಕೆ.ಎನ್ ಅಧ್ಯಕ್ಷ ಗುರಲಿಂಗಜಗಂ ಎಸ್ ಪಾಟೀಲ ಧಂಗಾಪೂರ,ಆಳಂದ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಿ.ಡಿ.ಪಾಟೀಲ,ಶಾಂತಲಿಂಗಪ್ಪ ಪಾಟೀಲ,ಮಾದನಹಿಪ್ಪರಗಾ ಕಾಂಗ್ರೆಸ್ ಬ್ಲ್ಯಾಕ ಎಸ್ಸಿ ಎಸ್ಟಿ ಅಧ್ಯಕ್ಷ ಅಮೃತ ಸಜ್ಜನ ಸೇರಿದಂತೆ ಇತರರು ಇದ್ದರು.