ಸಾಹಿತ್ಯಕ್ಕೆ ಸುಬ್ಬರಾವ್ ಕುಲಕರ್ಣಿ ಕೊಡಿಗೆ ಅಪಾರ: ಕೊನೇಕ್

ಸಾಹಿತ್ಯ ಸಮಾಗಮ ಉಪನ್ಯಾಸ ಮಾಲೆ ಉದ್ಘಾಟನೆ
ಸಾಹಿತ್ಯಕ್ಕೆ ಸುಬ್ರಾವ್ ಕುಲಕರ್ಣಿ ಕೊಡುಗೆ ಅಪಾರ: ಕೊನೇಕ
ಕಲಬುರಗಿ: ಕನ್ನಡ ಸಾಹಿತ್ಯದ ಕಥೆ,ಪ್ರವಾಸ,ನಾಟಕ, ಪ್ರಬಂಧ ಮೊದಲಾದ ಕ್ಷೇತ್ರಗಳಲ್ಲಿ ಬರವಣಿಗೆಯ ಜೊತೆಗೆ ಆತ್ಮೀಯ ಸಂಬಂಧ ಬೆಸೆಯುವ ಬದುಕು- ಬರಹ ಹೊಂದಾಗಿಸಿ ಕೊಂಡ ಅಪರೂಪದ ಸಾಹಿತಿ ಸಾಹಿತ್ಯಕ್ಕೆ ಅಪಾರ ಕೊಡುಗೆ ಸುಬ್ರಾವ್ ಕುಲಕರ್ಣಿ ನೀಡಿದ್ದಾರೆಂದು ಸಿದ್ಧಲಿಂಗೇಶ್ವರ ಪ್ರಕಾಶನದ ಪ್ರಕಾಶಕ ಡಾ.ಬಸವರಾಜ ಕೊನೇಕ ಅಭಿಮತ ವ್ಯಕ್ತಪಡಿಸಿದರು.
ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಮತ್ತು ಸಾಕ್ಷಿ ಪ್ರತಿಷ್ಠಾನ
ಆಶ್ರಯದಲ್ಲಿ ಅಕ್ಷಯ ನಿವಾಸದಲ್ಲಿ ಸಾಹಿತ್ಯ ಸಮಾಗಮದ ಮಾಲಿಕೆ ಉದ್ಘಾಟಿಸಿ ಮಾತನಾಡಿ ನಮ್ಮ ಪ್ರದೇಶದ ಲೇಖ ಕರ ಕೃತಿಗಳ ಪ್ರಕಟಣೆ ಆಗಬೇಕು,ವಿಮರ್ಶೆ ಆಗಬೇಕು ಇಂತಹ ಮಾಲಿಕೆ ಆ ಕೆಲಸ ನೀಗಿಸಲಿ ಎಂದರು
ನಾಟಕ ಮತ್ತು ಪ್ರಬಂಧ ಕುರಿತು ಪ್ರಾಧ್ಯಾಪಕ ಡಾ.ನಾರಾಯಣ ರೋಳೇಕರ್ ಮಾತನಾಡಿ ಲೇಖಕರು ಸ್ವ ಯಂ ಅನುಭವದ ಮೂಲಕ ನಾಟಕ ರಚಿಸಿ ಹೃದಯ ಪರಿ ವರ್ತನೆಗೆ ಕಾರಣವಾಗಿದೆ.ಪ್ರಬಂಧದ ಹಾಸ್ಯ,ವಿಷಯ ಶೈಲಿ ಯ ಮೂಲಕ ಗಮನ ಸೆಳೆವ ಸೃಜನಶೀಲ ಬರಹಗಾರರು ಎಂದರು.
ಸಾಹಿತಿ ವೆಂಕಟೇಶ ಜನಾದ್ರಿಯವರು ಕಥಾ ಸಾಹಿತ್ಯದಲ್ಲಿ
ಪ್ರೀತಿ,ರಸಿಕತೆ,ಮಾನವೀಯತೆ, ಮನುಷ್ಯ ಸಂಬಂಧದ ಆದರ್ಶ ಮೌಲ್ಯವನ್ನು ಪ್ರತಿಪಾದಿಸಿದ ಅದ್ಭುತ ಕಥೆಗಾರ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ವಹಿಸಿ ಸುಬ್ರಾವರು ಬಹುಮುಖ ಪ್ರತಿಭೆ. ಕಥೆ,ಪ್ರವಾಸ, ಪ್ರಬಂಧ, ನಾಟಕ,ಸೃಜನಶೀಲ ಸಾಹಿತ್ಯ ರಚನೆಯ ಜೊತೆಗೆ ಅವರೊಬ್ಬ ರಂಗ ಕಲಾವಿದರಾಗಿ ಪ್ರಸಿದ್ಧರು.ಅವರ ಸಾಹಿ ತ್ಯ ಮನುಷ್ಯ ಸಂಬಂಧ ಬೆಸೆಯುವುದಾಗಿದೆ ಎಂದರು.
ಡಾ.ಶೋಭಾದೇವಿ ಚಕ್ಕಿ ಮತ್ತು ಸಿ.ಎಸ್.ಮಾಲಿಪಾಟೀಲ ಪ್ರಾರ್ಥನೆಗೀತೆ ಹಾಡಿದರು.ಡಾ.ಸಿದ್ಧಪ್ಪ ಹೊಸಮನಿ
ಸ್ವಾಗತಿಸಿದರು. ಡಾ.ಜಯದೇವಿ ಗಾಯಕವಾಡ ಪ್ರಾಸ್ತಾವಿಕ ನುಡಿ ಆಎಇದರು.ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ಕೈಲಾಸ ಡೋಣಿ ವಂದಿಸಿದರು. ಪ್ರಭಾಕರ ಜೋಶಿ, ಪ.ಮನು ಸಗರ,ರಾಜೇಂದ್ರ ಜಳಕಿ,ಡಾ.ಶೀಲಾದೇವಿ ಬಿರಾದಾರ,ಡಾ. ಮಲ್ಲಿನಾಥ ನಿಂಬರ್ಗಿ,ಭಾಗ್ಯಶ್ರೀ ನರಗುಂದ,ಡಾ.ಕೈಲಾಸ ಡೋಣಿ,ಡಾ.ಶರಣಬಸಪ್ಪ ವಡ್ಡನಕೇರಿ,ಆಕಾಶ ತೆಗನೂರ,ಶಾಮರಾವ್ ಪ್ರಭು,ಶರಣಬಸ ಪ್ಪ ಸೂಗೂರು,ಡಾ.ಶಿವಪುತ್ರ ಹೊಳ್ಕರ್, ಇತರರು ಇದ್ದರು