ವಕ್ಫ್ ವಿವಾದದಲ್ಲಿ ರಾಜಕೀಯ ಬೇಡ- ಪಾಟೀಲ್
ವಕ್ಫ್ ವಿವಾದದಲ್ಲಿ ರಾಜಕೀಯ ಬೇಡ- ಪಾಟೀಲ್
ಯಾದಗಿರಿ: ರಾಜ್ಯದಲ್ಲಿ ಭುಗಿಲೆದ್ದಿರುವ ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಕೆಲ ಮಠಾಧೀಶರು ಹಿಂದು- ಮುಸ್ಲಿಂ ಮಧ್ಯೆ ಜಗಳ ಹಚ್ಚಲು ಮುಂದಾಗಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಪಾಟೀಲ್ ಮದ್ದರಕಿ ತಿಳಿಸಿದ್ದಾರೆ.
ವಕ್ಫ್ ಮಂಡಳಿ ರಾಜ್ಯದಲ್ಲಿ ಸಾವಿರಾರು ಎಕರೆ ರೈತರ ಭೂಮಿ ಮತ್ತು ಆಸ್ತಿಗಳು ತಮ್ಮದೆಂದು ಹೇಳುವ ಮೂಲಕ ಅನ್ನದಾತರಲ್ಲಿ ಆತಂಕ ಸೃಷ್ಠಿಸಿದೆ. ಪಯಣಿಯ ಕಲಂ 11 ರಲ್ಲಿ ವಕ್ಫ್ ಎಂದು ನಮೂದಿಸಿದ್ದು, ಇದರಲ್ಲಿ ಹಿಂದು ಹಾಗೂ ಮುಸ್ಲಿಂ ರೈತರ ಭೂಮಿಗಳು ಸೇರಿಕೊಂಡಿವೆ. ಆದರೆ, ಕೆಲ ಮಠಾಧೀಶರು ಮತ್ತು ಬಿಜೆಪಿಯವರು ರಾಜಕೀಯ ಮಾಡುವ ಮೂಲಕ ಸಾಮಾಜಿಕ ಸಾಮರಸ್ಯ ಕದಡುವ ಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರಿದ್ದು, ಇದು ಅನ್ನದಾತರ ಬದುಕಿನ ಪ್ರಶ್ನೆಯಾಗಿದೆ. ಇದರಲ್ಲಿ ರಾಜಕೀಯ ಬೆರಸುವುದರ ಬದಲು, ಎಲ್ಲಿ ತಾಂತ್ರಿಕ ದೋಷವಾಗಿದೆ ಎಂಬುದನ್ನು ಮೊದಲು ಪತ್ತೆ ಮಾಡಿ ಪಹಣಿಯಲ್ಲಿ ಸರಿ ಪಡಿಸುವ ಕೆಲಸವಾಗಬೇಕು. ಅಲ್ಲದೆ, ಈ ವಿಷಯವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ವಕ್ಫ್ ವಿವಾದ ಹೀಗೆ ಮುಂದುವರೆದರೆ ನಮ್ಮ ಸಂಘ ದಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪಾಟೀಲ್ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ