ಸಂವಿಧಾನದ ಆಶಯದಂತೆ ವಿಶ್ವಕರ್ಮ ಸಮುದಾಯಗಳಗೆ ಮೀಸಲಾತಿ ವಂಚಿಸುತ್ತಿರುವ ಸರ್ಕಾರ: ದೇವಿಂದ್ರ ದೇಸಾಯಿ ಕಲ್ಲುರ

ಸಂವಿಧಾನದ ಆಶಯದಂತೆ ವಿಶ್ವಕರ್ಮ ಸಮುದಾಯಗಳಗೆ ಮೀಸಲಾತಿ ವಂಚಿಸುತ್ತಿರುವ ಸರ್ಕಾರ: ದೇವಿಂದ್ರ ದೇಸಾಯಿ ಕಲ್ಲುರ

ಸಂವಿಧಾನದ ಆಶಯದಂತೆ ವಿಶ್ವಕರ್ಮ ಸಮುದಾಯಗಳಗೆ ಮೀಸಲಾತಿ ವಂಚಿಸುತ್ತಿರುವ ಸರ್ಕಾರ: ದೇವಿಂದ್ರ ದೇಸಾಯಿ ಕಲ್ಲುರ

ಕಲಬುರಗಿ ಜು. ೨೬- ವಿಶ್ವದಲ್ಲಿಯೇ ಅತ್ಯಂತ ದೊಡ್ಡದು ಹಾಗೂ ವಿಶಾಲವಾದ ಅಧ್ಯಾಯನದೊಂದಿಗೆ ರಚಿತವಾದ ಸಂವಿಧಾನವು ವಂಚಿತ ಸಮುದಾಯಗಳಿಗೆ ನ್ಯಾಯವನ್ನು ಒದಗಿಸಿಕೊಟ್ಟಿದೆ. ಆದರೆ ರಾಜಕೀಯ ಇಚ್ಚಾಶಕ್ತಿ ಹಾಗೂ ಮುಂದಾಳತ್ವದ ಕೊರತೆಯಿಂದ ಇಂದು ಅನೇಕ ಸಮುದಾಯಗಳು ಮೀಸಲಾತಿಯಿಂದ ವಂಚಿತವಾಗಿವೆ. ಸದಾ ಕಾಯಕದಲ್ಲಿರುವ ವಿಶ್ವಕರ್ಮ ಸಮುದಾಯಗಳು ಮೀಸಲಾತಿ ಎಂದರೇನು ಎನ್ನುವಂತ ಪರಿಸ್ಥಿತಿಯಲ್ಲಿವೆ. ಅಧಿಕಾರದಲ್ಲಿರುವ ಸರ್ಕಾರಗಳು ವಿಶ್ವಕರ್ಮ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡಲಿಲ್ಲ ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ದೇವಿಂದ್ರ ದೇಸಾಯಿ ಕಲ್ಲೂರ ಅವರು ಕಿಡಿಕಾರಿದ್ದಾರೆ.

ಭಾರತ ದೇಶದಲ್ಲಿ ವಿಶ್ವಕರ್ಮ ಸಮುದಾಯಗಳು ಎಂದೇ ಗುರುತಿಸಿಕೊಳ್ಳುವ ಪ್ರಮುಖವಾದ ಅಕ್ಕಸಾಲಿಗ, ಬಡಿಗೇರ (ಸುತಾರ), ಕಂಚಗಾರ, ಕಂಬಾರ, ಶಿಲ್ಪಿಗಳು ಸೇರಿದಂತೆ ಅನೇಕ ಒಳಪಂಗಡಗಳು ಇವೆ. ವಿಶ್ವಕರ್ಮ ಸಮಾಜವರು ಸದಾ ಕಾಯಕದಲ್ಲಿಯೇ ತೊಡಗಿಕೊಂಡಿರುತ್ತಾರೆ. ಇತರೆ ಸಮುದಾಯಗಳಿಗೆ ಕೃಷಿ ಚಟುವಟಕಿಗಳಿಗೆ ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸಿಕೊಡುವದು ಅವರ ಪ್ರಧಾನವಾಗಿರುತ್ತದೆ. ಸಂಘಟಿತವಾಗಿರುವ ವಿಶ್ವಕರ್ಮ ಸಮಾಜವು ಇಂದಿಗೂ ಸಂವಿಧಾನದ ಆಶಯದಂತೆ ಯಾವುದೇ ಸವಲತ್ತುಗಳು ಪಡೆದುಕೊಳ್ಳದೇ ಇರುವುದು ದುರಂತವಾಗಿದೆ. ಅಲ್ಲಿ ಇಲ್ಲಿ ಸಮುದಾಯದವರಿಗೆ ಅನ್ಯಾಯವಾಗಿದರೆ ಒಂದೀಷ್ಟು ಹೋರಾಟಮಾಡುವುದು ಕಾಣುತ್ತೇವೆ ನಂತರ ನಿರಂತರವಾಗಿ ಮತ್ತೆ ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ.

ಇಂದು ಸಾಮಾಜಿಕವಾಗಿ ಹಿಂದೆ ಉಳಿದ ಸಮುದಾಯಗಳು ಸಂವಿಧಾನದ ಆಶಯದಂತೆ ಮತ್ತು ಹಕ್ಕುಗಳನ್ನು ಬಳಸಿಕೊಂಡು ಮೀಸಲಾತಿ ಪಡೆದುಕೊಳ್ಳುತ್ತೇವೆ. ಇನ್ನೂ ಸಮಾಜದಲ್ಲಿ ಅತ್ಯಂತ ಬಲಿಷ್ಠವಾದ ಸಮುದಾಯಗಳು ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಿರಿವು ಸಮುದಾಯಗಳು ಮೀಸಲಾತಿಯನ್ನು ಪಡೆದುಕೊಳ್ಳುವದನ್ನು ಇಂದು ನಾವು ಕಾಣುತ್ತೇವೆ. ಅದರಲ್ಲಿಯೂ ಆರ್ಥಿಕವಾಗಿ ಹಿಂದುಳಿದವರು ಎಂದು ಪರಿಗಣಿಸಿ ಶೇ ೧೦ ರಷ್ಟು ಆರ್ಥಿಕ ಮೀಸಲಾತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಎಂದೂ ಹೋರಾಟ ಮಾಡದ, ಎಲ್ಲಿಯೂ ಬೀದಿಗೆ ಇಳಿದು ಸಂವಿಧಾನದAತೆ ನಮಗೂ ಹಕ್ಕುಗಳು ಬೇಕು ಎಂದು ಹೇಳದ ಕೆಲವೇ ಶೇ. ೩ ರಷ್ಟು ಇರುವ ಸಮುದಾಯಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಅವರಿಗೆ ಮೀಸಲಾತಿ ನೀಡಿರವುದನ್ನು ನಾವು ವಿರೋಧಿಸುತ್ತೀಲ್ಲ. ಬದಲಾಗಿ ಈಡೀಯಾದ ಸಮಾಜದ ಸೇವೆ ಮಾಡುವ ವಿಶ್ವಕರ್ಮ ಸಮಾಜದವರನ್ನು ಇಂದು ರಾಜಕೀಯವಾಗಿ ಬಲಡ್ಯವನ್ನು ಹೋದಿರವವರು ತಮಗೇ ಹೇಗೆ ಬೇಕು ಹಾಗೆ ಕಾನೂನು ರೂಪಿಸಿಕೊಳ್ಳುತ್ತಿವೆ ಎನ್ನುವುದು ಖೇದಕರವಾಗಿದೆ ಎನ್ನುದಾಗಿದೆ ಎಂದು ದೇವಿಂದ್ರ ದೇಸಾಯಿಕಲ್ಲೂರ ಬೇಸರ ವ್ಯಕ್ತ ಪಡಿಸಿದ್ದಾರೆ.

*ವಿಶ್ವಕರ್ಮ ಸಮುದಾಯದವರೇ ಇಗಲಾದರೂ ಎಚ್ಚತ್ತುಕೊಳ್ಳಿ!*

ಸದಾ ಕಾಯಕದಲ್ಲಿರುವ ವಿಶ್ವಕರ್ಮ ಸಮುದಾಯದ ವಿವಿಧ ಒಳಪಂಗಡದವರೇ ಇನ್ನೂ ಕಾಲ ಮಿಂಚಿಲ್ಲ. ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಲ್ಲಿ ಅಧಿಕಾರಕ್ಕೆ ಯಾವುದೇ ಪಕ್ಷವಿರಲಿ. ಪಕ್ಷಬೇಧ ಮರೆತು ಸಂವಿಧಾನದ ಆಶಯದಂತೆ ನಮಗೂ ಮೀಸಲಾತಿ ನೀಡಿ, ಯಾವುದೇ ಹೋರಾಟ ಮಾಡದೇ ಶೇ. ೧೦ ರಷ್ಟು ಮೀಸಲಾತಿಯನ್ನು ಪಡೆದಕೊಳ್ಳುವ ಸಮುದಾಯ ಇರುವಾಗ ನಾವು ಹೋರಾಟ ಮಾಡಿ ಶೇ. ೫ ರಷ್ಠಾದರೂ ಪಡೆದುಕೊಳ್ಳಣ ಎಂದು ಕರೆ ನೀಡೋಣ. ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೇ ವಿಶ್ವಕರ್ಮ ಸಮಾಜವು ತಮ್ಮ ಕಾಯಕವನ್ನು ಒಂದು ವಾರವಲ್ಲ ಒಂದು ದಿನ ಸ್ಥಗಿತಗೊಳಿಸಿದರೆ ದೇಶದ ಆರ್ಥಿಕತೆಯೇ ಬುಡಮೇಲಾಗುತ್ತದೆ ಎನ್ನುವ ಅರಿವು ನಮ್ಮಲ್ಲಿ ಇರಲಿ. ಇಂದು ವಿಶ್ವದಲ್ಲಿ ಚಿನ್ನದ ಅತೀಯಾದ ಬೇಡಿಕೆ ಇರುವ ನಾವು ಕಾಣುತ್ತೇವೆ. ಚಿನ್ನದ ವ್ಯಾಪರವನ್ನು ಒಂದೇ ದಿನ ನಿಲ್ಲಿಸಿದರೇ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಇನ್ನೂ ಒಂದು ತಿಂಗಳು ನಿಲ್ಲಿಸಿದರೇ? ಸರ್ಕಾರ ತಾನಾಗಿಯೇ ನಮ್ಮ ಹತ್ತರ ಬರುತ್ತದೆ ಎನ್ನು ಸತ್ಯವನ್ನು ಅರಿಯಿರಿ.

ಈ ಕುರಿತು ವಿಶ್ವಕರ್ಮ ಸಮುದಾಯಗಳ ಒಳಪಂಗಡಗಳು ಸೇರಿಕೊಂಡು ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟ ಮಾಡಲು ಅತೀ ಶೀಘ್ರದಲ್ಲಿಯೇ ಹೋರಾಟ ರೂಪಿಸಲು ಸಭೆ ಸೇರಿಸಲಾಗುತ್ತದೆ ಕೇವಲ ಒಂದು ದಿನ ನಮ್ಮ ಕಾಯಕವನ್ನು ನಿಲ್ಲಿಸಿ ಸರ್ಕಾರಕ್ಕೆ ಚೂರುಕು ಮುಟ್ಟಿಸಲು ದಿನಾಂಕವನ್ನು ಘೋಷಣೆ ಮಾಡಲು ಸಭೆ ಕರೆಯಲಾಗುವುದು ಎಂದು ದೇವಿಂದ್ರ ದೇಸಾಯಿ ಕಲ್ಲೂರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.