ಬಿಜೆಪಿಗೆ ಮಹಿಳಾ ಕಾಂಗ್ರೆಸ್‌ನಿಂದ ಪೋಸ್ಟರ್ ಕೌಂಟರ್

ಬಿಜೆಪಿಗೆ ಮಹಿಳಾ ಕಾಂಗ್ರೆಸ್‌ನಿಂದ ಪೋಸ್ಟರ್ ಕೌಂಟರ್
ಕಲಬುರಗಿ: ಗ್ರಾಮೀಣಾಭಿವೃದ್ದಿ ಸಚಿವ ಮತ್ತು ಪಂಚಾಯತ್ ರಾಜ್ ಪ್ರಿಯಾಂಕ್ ಖರ್ಗೆ ಆವರು ಆರ್‌ಎಸ್‌ಎಸ್‌ನ ಬ್ಯಾನ್ ಮಾಡಬೇಕಂತ ಎಲ್ಲೂ ಹೇಳಿಲ್ಲ. ಸರ್ಕಾರಿ ಮತ್ತು ಸಾರ್ವಜನಿಕ ಜಾಗಗಳಲ್ಲಿ ಮಾಡಬಾರದು ಅಂತ ಹೇಳಿದ್ದಾರೆ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇದೆ. ಹೈ ಕೋರ್ಟ್ ಆದೇಶ ಪ್ರಕಾರ ಎಲ್ಲಿ ಬೇಕೋ ಅಲ್ಲಿ ಮೆರವಣಿಗೆ ಕೂಡ ಮಾಡುವ ಹಾಗಿಲ್ಲ ಎಂದು ಕಲಬುರಗಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿAದ ಪೊಸ್ಟರ್ ಹಚ್ಚು ಮೂಲಕ ಬಿಜೆಪಿಗೆ ಕೌಂಟರ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ ಆರ್‌ಎಸ್‌ಎಸ್‌ಅನ್ನು ಅವರು, ಈ ಮುಂಚೆಯೇ ಹಲವಾರು ಸಲ ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಸಚಿವರು ಆರ್‌ಎಸ್‌ಎಸ್‌ನ
ಬ್ಯಾನ್ ಮಾಡೋಕು ಅಂತ ಹೇಳಿಲ್ಲ. ಸರ್ಕಾರಿ ಕ್ಷೇತ್ರಗಳಲ್ಲಿ ಸಾರ್ವಜನಿಕ ಆವರಣದಲ್ಲಿ ಅದನ್ನ ಬ್ಯಾನ್ ಮಾಡಬೇಕು ಆರ್‌ಎಸ್‌ಎಸ್ ಚಟು ವಟಿಕೆಗಳನ್ನು ಅವಕಾಶ ಕೊಡಬಾರದು ಅಂತ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡ ಅವರು, ಇಷ್ಟೆಲ್ಲಾ ಹುಯ್ದು ಎಬ್ಬಿಸಿರುವುದು. ಅದರ ನಾವು ಪ್ರಿಯಾಂಕ್ ಖರ್ಗೆ ಅವರ ಬೆಂಬಲಕ್ಕೆ ನಿಲುತ್ತಿದ್ದೇವೆ. ಬಿಜೆಪಿಯವರು ಯಾರನ್ನು ಆರಾಧಿಸಿ ಪೂಜಿಸುವ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಬ್ಯಾನ್ ಮಾಡಿದ್ದರು. ಇಂದಿರಾ ಗಾಂಧಿಯವರು ಬ್ಯಾನ್ ಮಾಡಿದ್ದರು. ನರಸಿಂಹ ರಾವ್ ಅವರು ಬ್ಯಾನ್ ಮಾಡಿದ್ದರು ಎಂದು ಹೇಳಿದರು.
ಕೆಲವು ಕಿಡಿಗೇಡಿಗಳ ಭಾಷೆ ನೋಡಿದರೆ ಆರ್‌ಎಸ್‌ಎಸ್ ಸೃಷ್ಟಿಸಿರುವ ಸಂಸ್ಕೃತಿ ಮತ್ತು ಅದರ ಗುರಿನ ಏನೆಂಬುದನ್ನು ಈಗ ಸಾರ್ವಜನಿಕವಾಗಿ ಸ್ಪಷ್ಟವಾಗುತ್ತಿದೆ. ಈ ಒಟ್ಟಿನಲ್ಲಿ ಪ್ರಿಯಾಂಕ ಅವರ ಬಗ್ಗೆ ಬಳಸುತ್ತಿರುವ ಭಾಷೆಯನ್ನು ನೋಡಿದರೆ ಆರ್‌ಎಸ್‌ಎಸ್ ಸೃಷ್ಟಿಸಿರುವ ಭಾಷಿಕ ದ ಸಂಸ್ಕೃತಿ ಮತ್ತು ಅದರ ಗುರಿ ಎಂತದೆAಬುದು ಎಲ್ಲರಿಗೂ ಜಗ ಜಾಹಿರವಾಗುತ್ತದೆ ಮತ್ತು ಅರ್ಥವಾಗುತ್ತದೆ. ಇಂಥ ನೀಚತನದ ಸಂಸ್ಕೃತಿಯನ್ನು ಅದು ಪ್ರತಿಪಾದನೆ ಮಾಡಿರುವುದು ನಮ್ಮ ದೇಶದ ವರ್ತಮಾನ ಮತ್ತು ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮತ್ತು ಗ್ರಹಣ ಸಚಿವ ಅಮಿತ್ ಅವರಿಗೂ ಪತ್ರ ಬರೆದು ಮನವಿ ಮಾಡಿ ಸಾಂವಿಧಾನಿಕ ಲವಲೇಶ ಎಳ್ಳಿನಷ್ಟಾದರೂ ಅವರಲ್ಲಿ ಪ್ರಜ್ಞೆ ಇದ್ದರೆ ಅವರೇ ಆರ್‌ಎಸ್‌ಎಸ್ ಅನ್ನ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರಾದ ಚಂದ್ರಿಕಾ ಪರಮೇಶ್ವರ್, ವಾಣಿಶ್ರೀ ಸಾಗರಕ್, ಬಸಮ್ಮ, ಸಂಗೀತಾ ಪಾಟೀಲ್, ಸಂವಿತಾ ಒಂಟಿ ಅವರು ಸೇರಿದಂತೆ ಅನೇಕರಿದ್ದರು.