ಶಹಾಬಾದ ಸಮಗ್ರ ಅಭಿವೃದ್ಧಿಗೆ ನಾಗರಿಕರು ಪಾದಯಾತ್ರೆ ಮೂಲಕ ಮನವಿ
ಶಹಾಬಾದ ಸಮಗ್ರ ಅಭಿವೃದ್ಧಿಗೆ ನಾಗರಿಕರು ಪಾದಯಾತ್ರೆ ಮೂಲಕ ಮನವಿ
ಶಹಾಬಾದ: ಶಹಾಬಾದ ನಾಗರಿಕ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಹಾಬಾದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರ್ ತಲೂಕಾದಂಡಾಧೀಕಾರಿ ಶಹಾಬಾದ ಅವರಿಗೆ' ಪಾದಯಾತ್ರೆ' ಮೂಲಕ ಮನವಿ ಸಲ್ಲಿಸಿದರು.
ಹಳೆ ಶಹಾಬಾದ ಭಾಗದಲ್ಲಿ ಯಾವುದೇ ಸರ್ಕಾರಿ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತಿಲ್ಲದೇ ಜನರು ಮೂರು ಕಿಲೋಮೀಟರ್ ದೂರ ಪ್ರಯಾಣಿಸಬೇಕಾಗಿರುವ ಪರಿಸ್ಥಿತಿ ಉಂಟಾಗಿದೆ. ಸ್ವಾತಂತ್ರ್ಯದಿಂದ ಇಂದಿನವರೆಗೂ ಬಸ್ ಸೌಲಭ್ಯಗಳು ಇಲ್ಲದೇ ಮೂಲ ಶಹಾಬಾದ ಭಾಗ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಶಹಾಬಾದಕ್ಕೆ ಸಮರ್ಪಕ ವರ್ತುಲ ರಸ್ತೆ (Ring Road) ಇಲ್ಲದೇ ನಗರ ಸಂಚಾರದಲ್ಲಿ ತೊಂದರೆಗಳು ಎದುರಾಗುತ್ತಿವೆ. ಆದ್ದರಿಂದ ಹಳೆ ಶಹಾಬಾದ ಹತ್ತಿರ ತಾಲೂಕು ಆಡಳಿತ ಕಛೇರಿ/ಪ್ರಜಾಸೌಧ, ಬಸ್ ನಿಲ್ದಾಣ ಹಾಗೂ ಸರ್ಕಾರದ ವಸತಿ ಬಡಾವಣೆಗಳು ನಿರ್ಮಾಣ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಜೊತೆಗೆ ಶಹಾಬಾದ ನಗರಕ್ಕೆ ಅತ್ಯಾವಶ್ಯಕತೆ ಇರುವ ವರ್ಥುಲ ರಸ್ತೆ (Ring Road) ಕೂಡಾ ಶೀಘ್ರ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಮನವಿಗೆ
1 ವಾಜೀದಖಾನ್ ಜಮಾದಾರ
2 ಬಸವರಾಜ ತರನಳ್ಳಿ
3 ಶಿವಕುಮಾರ ನಾಟೀಕಾರ
4 ಸ್ನೆಹಲ ಬಾಯಿ ಸಾ.ಗುತ್ತೇದಾರ
5 ರಮೇಶ್ ಪವಾರ್
6 ಶರಣಗೌಡ ಪಾಟೀಲ್
7 ಬಸವರಾಜ್ ದಂಡಗೂಳುಕರ್
8 ಬಸವಣ್ಣಪ್ಪ ವಾಲಿ
9 ಭಾನು ಪ್ರತಾಪ್ ಪವರ್
10 ಮೀರಲಿ ತರನಹಳ್ಳಿ
11. ಲಾಲ್ ಸಾಬ್ ಶೇಖ ಅಮದ
12. ಆಸಿಫ್ ಬಳಗಾರ್
13. ಸನ್ ಉಲ್ಲ ಸಾಹೇಬ್
14. ಮೈಬೂಬ್ ಇನಾಮ್ದಾರ್
15. ರಾಕೇಶ್ ಜಾನಿ
16. ಸುನಿಲ್ ಮಾಗನ್
17. ಪ್ರಕಾಶ್ ವಳಸಂಗ
18. ರಾಯಪ್ಪ ಜಾಯಿ
19. ಶರಣಪ್ಪ ಸೂರಾ
ಸೇರಿದಂತೆ 19 ಮಂದಿ ನಾಗರಿಕರು ಸಹಿ ನೀಡಿದ್ದಾರೆ.