ಶರಣಬಸವ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಭಾಜನರಾದ ಡಾ.ಬಸವರಾಜ ಕೊನೇಕ್ ಗೆ ಸನ್ಮಾನ

ಶರಣಬಸವ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ಭಾಜನರಾದ ಡಾ.ಬಸವರಾಜ ಕೊನೇಕ್ ಗೆ ಸನ್ಮಾನ
ಕಲಬುರಗಿ: ಕಳೆದ ೪೭ ವರ್ಷಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲು ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ
ಮೂರು ಸಾವಿರದ ಐದನೂರಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದವರು,ಪುಸ್ತಕೋದ್ಯಮಿ, ಬಸವರಾಜ ಜಿ.ಕೊನೇಕ್ ಅವರಿಗೆ ಶರಣ ಬಸವ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾರೆ. ಇದೇ ೨೧ ರಂದು ನಡೆಯುವ ೬ ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಗಳಾದ ಡಾ.ಕೆ.ಎಸ್.ಬಂಧು,ಡಾ.ಗವಿಸಿದ್ಧಪ್ಪ ಪಾಟೀಲ, ಮನೋಹರ ಮರಗುತ್ತಿ,ಡಾ.ರಾಜಕುಮಾರ ಮಾಳಗೆ, ಭೀಮಾಶಂಕರ ಮರತೂರ,ಹಣಮಂತ ಶ್ರೀಂಗೇರಿ,ಜೈಭೀಮ ಹೋಳಿಕೇರಿ ಸನ್ಮಾನಿಸಿ ಗೌರವಿಸಿದರು.