ಡಾ.ಸಿ.ಆನಂದರಾವ ವೈದ್ಯ ಲೋಕದ ನಕ್ಷತ್ರ
ವೈದ್ಯ ಲೋಕದ ನಕ್ಷತ್ರ ಡಾ.ಸಿ.ಆನಂದರಾವ
ಶರೀರೇ ಜರ್ಜರಿ ಭೂತೇ ವ್ಯಾದಿಗ್ರಸ್ತೆ ಕಲೆಬರೇ ಔಷದ ಓ ಜಾಹ್ನವಿತೊಯ ವೈದ್ಯೋನಾರಾಯಣ ಹರಿ""
ಅಂದರೆ ಶ್ಲೋಕದ ಅರ್ಥ....
ಮಾನವ ದೇಹ ರೋಗ ಗ್ರಸ್ಥಗೊಂಡಾಗ ಪವಿತ್ರ ಗಂಗಾ ನೀರಿನಂತಹ ಔಷದಿ ನೀಡುವ ವೈದ್ಯನು ಭಗವಂತನಾದ ನಾರಾಯಣನ ಸಮ
ಬದುಕು ಸಾವಿನ ನಡುವೆ ಹೋರಾಡುವ ರೋಗಿಗಳಿಗೆ ಔಷಧಿ ಮಾತ್ರೆಗಳ ಕೋಟ್ಟು ಕಾಪಾಡುವ ವೈದ್ಯ ದೇವರ ಸಮಾನ ಎಂದು ತಿಳಿಯುತ್ತೇವೆ.ಅಂಥ ಮಹಾನ್ ವೈದ್ಯರಲ್ಲಿ ಡಾ. ಸಿ.ಆನಂದರಾವ ಕೂಡ ಒಬ್ಬರು.
ಇವರು ಮೂಲತಹ ತೆಲಂಗಾಣ ರಾಜ್ಯದ ಖಮಂ ಪಲ್ಲಿಯವರು ಪ್ರಾಥಮಿಕ ಹಾಗು ಪಿ.ಯು. ಸಿ ತೆಲಗುಭಾಷೆಯಲ್ಲೆ ಕಲಿತರು.ಉಸ್ಮಾನಿಯ ವಿಶ್ವವಿದ್ಯಾಲಯದ ಗಾಂಧಿ ಮೆಡಿಕಲ್ ಕಾಲೇಜನಲ್ಲಿ ಎಂ. ಬಿ. ಬಿ. ಎಸ್. ಪದವಿ ಪೂರ್ಣಗೊಳಿಸಿದರು.
ಕಲಬುರಗಿಯ ಮಹದೇವಪ್ಪ ರಾಂಪುರೆ ಕಾಲೇಜನಲ್ಲಿ ಮಕ್ಕಳ ತಜ್ಞ ಕೋರ್ಸ್ ಪೂರ್ಣಗೊಳಿಸಿದರು .
ಅವರ ಮಾವನವರಾದ ಉದ್ದಿಮೆದಾರರಾದ ಲಿಂ. ನಾಗಣ್ಣ ಜಾಬಶೆಟ್ಟಿ ಅವರ ಆಶ್ರಯದೊಂದಿಗೆ ಬೀದರನಲ್ಲಿ ವೈದ್ಯಕೀಯ ಸೇವೆ ಆರಂಭಿಸಿದರು.ಮಹಿಳಾ ಹಾಗು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಅನಾಥ, ನಿರ್ಗತಿಕ ಮಕ್ಕಳ ರಕ್ಷಣೆ ಹಾಗೂ ಪೋಷಣೆಗಾಗಿ ದತ್ತುಕೇಂದ್ರ ತೆರೆಯಲು ಭಾಲ್ಕಿ ಶ್ರೀಗಳಿಗೆ ಪ್ರೇರಣೆಯಾದರು.
i . M. A. ಅಧ್ಯಕ್ಷರಾಗಿ ಎರಡು ಅವಧಿಗೆ ಅವಿರೋಧವಾಗಿ ಆಯ್ಕೆಯಾದರು ,
ಬ್ರಿಮ್ಸ್ ಮೆಡಿಕಲ್ ಕಾಲೇಜಿನ ಸುಧಾರಣೆ ಸಮಿತಿ ಸದಸ್ಯರಾಗಿ,ಏಡ್ಸ್ ಹಾಗು ಆರೋಗ್ಯ ಮಾಸ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಹಾಮಾರಿ ಕರೋನಾ ಕುರಿತು ಬೀದರ ಜಿಲ್ಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.ಬೀದರ ನಲ್ಲಿ ವಿಶ್ವಗುರು ಬಸವೇಶ್ವರ ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಿದರು .
ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕನ್ನಡಪರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕನ್ನಡ ಕೆಲಸ ಮಾಡುತ್ತಿದ್ದಾರೆ.
ಆರೋಗ್ಯಕ್ಕೆ ಸಂಭಂದಪಟ್ಟ ಅನೇಕ ಲೇಖನಗಳು ಪ್ರಜಾವಾಣಿ, ವಿಜಯವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ, 2017--2018 ರ ಭಾರತೀಯ ವ್ಯದ್ಯಕೀಯ ಸಂಸ್ಥೆಯಿಂದ ಅತ್ಯುತ್ತಮ ವೈದ್ಯ ಪ್ರಶಸ್ತಿ ಲಭಿಸಿದೆ.
ಬಡ ಮಕ್ಕಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವುದು ಇವರ ಸೇವೆ ಶ್ಲಾಘನಿಯವಾಗಿದೆ
ಓಂಕಾರ ಪಾಟೀಲ
(ಕಾರ್ಯದರ್ಶಿ :--ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ).