ಸರಕಾರಿ ನೌಕರರ ಸಂಘ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಬಳೂoಡಗಿ

ಸರಕಾರಿ ನೌಕರರ ಸಂಘ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಬಳೂoಡಗಿ

ಸರಕಾರಿ ನೌಕರರ ಸಂಘ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಬಳೂoಡಗಿ 

 ಚಿತ್ತಾಪುರ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಸ್ಥಾನಕ್ಕೆ ಪ್ರಾಥಮಿಕ ಶಾಲೆ ಶಿಕ್ಷಕರ ವಿಭಾಗದಿಂದ ಆಯ್ಕೆಯಾದ ಬಸವರಾಜ್ ಬಳೂoಡಗಿ ಅವರು ತಾಲೂಕಾಧ್ಯಕ್ಷ ಸ್ಥಾನಕ್ಕೆ ಹಾಗೂ ರಾಜ್ಯ ಪರಿಷತ್ತು ಸ್ಥಾನಕ್ಕೆ ಆರೋಗ್ಯ ಇಲಾಖೆಯಿಂದ ಆಯ್ಕೆಯಾದ ಪರಶುರಾಮ್ ಹಾಗೂ ಕಂದಾಯ ಇಲಾಖೆಯಿಂದ ಆಯ್ಕೆಯಾದ ಮಕಸೂದ್ ಅವರು ಖಜಂಚಿ ಸ್ಥಾನಕ್ಕೆ ನಾಮಪತ್ರವನ್ನು ಚುನಾವಣೆ ಅಧಿಕಾರಿ ವಿಜಯಕುಮಾರ ಲೊಡ್ಡೆನೊರ ಅವರಿಗೆ ನಾಮಪತ್ರ ಸಲ್ಲಿಸಿದ್ದರು. 

ನಾಮಪತ್ರ ಸಲ್ಲಿಸಲು ನವೆಂಬರ್ ೭ ರಂದು ಕೊನೆ ದಿನಾಂಕವಾಗಿದೆ . ನವೆಂಬರ್ 8ರಂದು ನಾಮಪತ್ರ ಪರಿಶೀಲನೆ ನವಂಬರ್ 9 ರಿಂದ 11 ರವರೆಗೆ ನಾಮಪತ್ರ ವಾಪಸ್ಸು ಪಡೆಯುವುದು. ನವಂಬರ್ 12ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣೆ ಅಧಿಕಾರಿ ವಿಜಯಕುಮಾರ್ ಲೊಡ್ಡೆನೊರ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ನಾಗಪ್ಪ ಯಾದವ್ ತಿಳಿಸಿದ್ದಾರೆ. 

ಪ್ರಾಥಮಿಕ ಶಾಲೆ ಶಿಕ್ಷಕರ ವಿಭಾಗದಿಂದ ಬಸವರಾಜ್ ಬಳೂoಡಗಿ ಅವರು ಸತತವಾಗಿ ಮೂರನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾಗಿ ಮೂರನೇ ಬಾರಿಗೆ ತಾಲೂಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ಹ್ಯಾಟ್ರಿಕ್ ಗೆಲುವು ಸಾಧಿಸುವಲ್ಲಿ ಯಶಸ್ವಿ ಯಾಗುತ್ತಾರೆ ಎಂದು ಅವರ ಬೆಂಬಲಿಗರು ಹೇಳಿದ್ದರು. 

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ನಿರ್ದೇಶಕರಾಗಿ ಆಯ್ಕೆಯಾದ ಶರಣಬಸಪ್ಪ ರೈಕೋಟಿ( ಸರಕಾರಿ ಪದವಿ ಕಾಲೇಜು ಇಲಾಖೆ), ಅಮೃತ್( ತಾಲೂಕ ಪಂಚಾಯತಿ), ಮಹಮ್ಮದ್ ಉಸ್ಮನ್ ಗನಿ( ಲೋಕಾಯುಪಯೋಗಿ ಇಲಾಖೆ), ಜಗದೀಶ್ ಗರ್ಜೆ( ತೋಟಗಾರಿಕೆ ಇಲಾಖೆ), ಅರುಣಕುಮಾರ( ಸರಕಾರಿ ಸಾರ್ವಜನಿಕ ಆಸ್ಪತ್ರೆ), ಅಮಿತ್ (ಪಂಚಾಯತ್ ರಾಜ್ ಇಲಾಖೆ ), ಆನಂದ್ ಕತಕ್ಕನಹಳ್ಳಿ (ಕೃಷಿ ಇಲಾಖೆ ), ಆಂಜನೇಯ ಎನ್( ಭೂ ಮಾಪನ ಇಲಾಖೆ), ಶಿವಪ್ರಕಾಶ್ (ಎಪಿಎಂಸಿ ಇಲಾಖೆ ), ರತನ್ ಕುಮಾರ್ ಜಗದಾಳೆ( ಪಶುಪಾಲನ ಇಲಾಖೆ), ಜಗದೀಶ್ ಎಸ್ ಪಾಟೀಲ್( ಪಶು ಪಾಲನ,ಪಶುವೈದ್ಯ ಇಲಾಖೆ), ಸಂತೋಷ್ ಬಾಬು( ಅರಣ್ಯ ಇಲಾಖೆ), ಉದಯಶಂಕರ್ ಮೋದಿ (ಉಪ ಖಜಾನೆ ಇಲಾಖೆ), ಸಿದ್ದಪ್ಪ (ಬಿಸಿಎಂ ಇಲಾಖೆ) ನಿಂಗಪ್ಪ ಕಾಮಣ್ಣೂರ್( ನೊಂದಣಿ ಮತ್ತು ಮುದ್ರಾಂಕ ಇಲಾಖೆ), ಪ್ರಕಾಶ್ ಭಜಂತ್ರಿ (ನ್ಯಾಯಾಂಗ ಇಲಾಖೆ), ಶರಣಬಸಪ್ಪ ಪಾಟೀಲ್( ಅಬಕಾರಿ ಇಲಾಖೆ), ರಾಜಶೇಖರ ರುದ್ನೂರ್ ( ಸಮಾಜ ಕಲ್ಯಾಣ ಇಲಾಖೆ), ರಮಬಾಯಿ( ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ), ಸಂತೋಷ ಕುಮಾರ ಶಿರನಾಳ( ಪ್ರೌಢಶಾಲಾ ಶಿಕ್ಷಣ ಇಲಾಖೆ), ಶರಣಬಸಪ್ಪ ಕಟ್ಟಿ (ಪ್ರೌಢಶಾಲೆ ಶಿಕ್ಷಣ ಇಲಾಖೆ), ತ್ರಿವೇಣಿ (ಆರೋಗ್ಯ ಇಲಾಖೆ), ರಾಚಯ್ಯ (ತಾಲೂಕ ಪಂಚಾಯಿತಿ), ಕಿರಣಕುಮಾರ( ಆರೋಗ್ಯ ಇಲಾಖೆ), ಅರುಣ ಕುಮಾರ್( ಬಿಇಓ ಕಚೇರಿ), ಶಿವಾನಂದ್ ನಾಲವಾರ(ಪ್ರಾಥಮಿಕ ಶಿಕ್ಷಣ ಇಲಾಖೆ), ಗೌತಮ್ಮಾ( ಪ್ರಾಥಮಿಕ ಶಿಕ್ಷಣ ಇಲಾಖೆ), ಮಹಮ್ಮದ್ ಜಾವಿದ್ ( ಪ್ರಾಥಮಿಕ ಶಿಕ್ಷಣ ಇಲಾಖೆ), ಸಾಬಣ್ಣ ಜಕಬೋ( ಪ್ರಾಥಮಿಕ ಶಿಕ್ಷಣ ಇಲಾಖೆ), ಮೈನೋದ್ದೀನ್ (ಕಂದಾಯ ಇಲಾಖೆ) ಸೇರಿದಂತೆ ಅವರ ಬೆಂಬಲಿಗರು ಇತರರು ಇದ್ದರು.