ಬೀದರನಲ್ಲಿ ದ.ಸಂ.ಸಮಿತಿ, ಅರೆ ಬೆತ್ತಲೆ ಮೆರವಣಿಗೆ

ಬೀದರನಲ್ಲಿ ದ.ಸಂ.ಸಮಿತಿ, ಅರೆ ಬೆತ್ತಲೆ ಮೆರವಣಿಗೆ
ಬೀದರ: ನ.೬- ನಗರ ಅಂಬೇಡ್ಕರ್ ಭವನ್ ದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅರೆ ಬೆತ್ತಲೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯಿತು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದ್ದು ಸಂವಿಧಾನ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿರುವಂಥದ್ದು . ಸಾಂವಿಧಾನಿಕ ಸಂಸ್ಥೆಗಳಾದ ED ,IT,CBI, ಹಾಗೂ ರಾಜ ಭವನಗಳನ್ನು ಅಧಿಕಾರ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಂಡು ಒತ್ತಡ ಹೇರುವುದು, ತನ್ನ ವ್ಯಾಪ್ತಿಯಲ್ಲಿ ಬರುವ ಅಪರಾಧಗಳು ತನಿಖಾ ಸಂಸ್ಥೆಗಳು ರಾಜಕೀಯ ಗೋಸ್ಕರ ಬಳಸಿಕೊಳ್ಳುತ್ತಿದೆ ಎಂದು ಜಿಲ್ಲಾ ಸಂಚಾಲಕ ಅರುಣ ಪಟೇಲ ಹೇಳಿದರು.
ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ.
ಇಂತಹ ಪ್ಯೂಡಲ್ ರಾಜಕಾರಣದ ಅಂತರ್ಯದಲ್ಲಿ ಕೋಮುವಾದ ಮನುಸಿದ್ಧಾಂತ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮಿಸುಕಾಡುತ್ತಿದೆ. ಕೋಮುವಾದಕ್ಕೆ ಈ ರಾಜ್ಯದಲ್ಲಿ ರಾಜಕೀಯವಾಗಿ ದೊಡ್ಡ ತಡೆಗೋಡೆಯಂತ್ತಿರುವುದೇ ಸಿದ್ದರಾಮಯ್ಯನವರು.
ಕೇವಲ ಮುಡಾ ಪ್ರಕರಣ ಕೃತಕ ಕಾರಣಕ್ಕೆ ಹೆದರಿ ಸಿದ್ದರಾಮಯ್ಯ ಎಂಬ ಜನಪ್ರಿಯನಾಯಕ ಅಧಿಕಾರದಿಂದ ನಿರ್ಗಮಿಸುವುದು ಎಂದರೆ ಅದು ಈ ಸಮಾಜದ ಬಹುಜನರ ವಿಚಾರಧಾರೆಯ ಸೋಲು ಆಗುತ್ತದೆ ಎಂದು ಹೇಳಿದರು
ಕೇಂದ್ರ ಸರ್ಕಾರ ಬಗ್ಗೆ ಏನೆಂದು ಅರ್ಥಮಾಡಿಕೊಳ್ಳುವುದು? ಇದು ಸರ್ವಾಧಿಕಾರಿ ಧೋರಣೆಯೇ? ಅಧಿಕಾರದ ದಕ್ಷತೆಯೇ? ಅಥವಾ ಪ್ರಜಾತಂತ್ರದ ಅಣಕವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾವು ಪಾಲಿಸಬೇಕಾದ ಧರ್ಮ ಅನುಭವಿಸಬೇಕಾದ ಕರ್ಮದ ಕುರಿತು ಮತ್ತು ಅದು ಮುಂದಿನ ತಲೆಮಾರಿನ ಮೇಲೆ ಈಗಿನ ಸತ್ಯೋತ್ತರ ರಾಜಕಾರಣ ಉಂಟುಮಾಡಬಹುದಾದ ಪರಿಣಾಮದ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದು ತಿಳಿಸಿದರು.
ಸಾವಿರಾರು ಜನರು ಸೇರಿ ಅರ ಬತ್ತಲೆ ಮೆರವಣಿಗೆ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತಲುಪಿ ಅವರ ಮುಖಾಂತರ ಮಾನ್ಯ ಗೌರವಿತ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು .
ಮೆರವಣಿಗೆಯಲ್ಲಿ ಮಾನ್ಯ ರಾಜ್ಯ ಸಂಚಾಲಕರು ಶ್ರೀ ಮಾರುತಿ ಬೌದ್ಧೆ ನೇತೃತ್ವದಲ್ಲಿ ನಡೆದು ಅನೇಕರು ಪ್ರಮುಖ ದಲಿತ್ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರು ಅರುಣ್ ಪಾಟೀಲ್ ಜಿಲ್ಲಾ ಸಂಘಟನಾ ಸಂಚಾಲಕರು ರಾಜಕುಮಾರ್ ವಾಗ್ಮರೆ ಜಿಲ್ಲಾ ಸಂಘಟನಾ ಸಂಚಾಲಕರು ಅಶೋಕ್ ಗಾಯಕ್ವಾಡ್ ಹಾಗೂ ಅನೇಕ ದಲಿತ ಹೋರಾಟಗಾರರಿಗೆ ಕೈ ಮೆರವಣಿಗೆಗೆ ಕೈಜೋಡಿಸಿದ್ದರು
ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್