ಮನಸೂರೆಗೊಂಡ ಕಲಾಚಾತುರಿ ಶ್ರೀ ಗಣೇಶ ನೃತ್ಯಲಯ ವಿದ್ಯಾರ್ಥಿಗಳಿಂದ ರಂಗಾಭಿವಂದನೆ

ಮನಸೂರೆಗೊಂಡ ಕಲಾಚಾತುರಿ ಶ್ರೀ ಗಣೇಶ ನೃತ್ಯಲಯ ವಿದ್ಯಾರ್ಥಿಗಳಿಂದ ರಂಗಾಭಿವಂದನೆ

ಮನಸೂರೆಗೊಂಡ ಕಲಾಚಾತುರಿ ಶ್ರೀ ಗಣೇಶ ನೃತ್ಯಲಯ ವಿದ್ಯಾರ್ಥಿಗಳಿಂದ ರಂಗಾಭಿವಂದನೆ 

 ನಗರದ ಮಲ್ಲೇಶ್ವರಂ ಸೇವಾ ಸದನದಲ್ಲಿ ಅರಿಶಿನಕುಂಟೆಯ ಶ್ರೀ ಗಣೇಶ ನೃತ್ಯಾಲಯ ರಂಗಾಭಿ ವಂದನೆ ಕಲಾಚಾತುರಿ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂತು 

 ನೃತ್ಯ ಗುರುಗಳಾದ ವಿದ್ವಾನ್ ಎಂ ಡಿ ಗಣೇಶ ಮತ್ತು ವಿದುಷಿ ಭಾವನ ಗಣೇಶ ರವರ ವಿದ್ಯಾರ್ಥಿಗಳಾದ ಕು ಐಶ್ವರ್ಯ,ಮಾನವಿ, ತನ್ಮಯಿ ಮತ್ತು ಸಿಂಚನ ಭಾವಪೂರ್ಣವಾಗಿ ನೃತ್ಯ ಪ್ರಸ್ತುತಿ ಪಡಿಸಿ ಜನಮನ ಸೂರೆಗೊಂಡರು.

 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತಾ ಪೋಷಕರು ತಮ್ಮ ಮಕ್ಕಳ ಪ್ರತಿಭೆಗಳು ಹೊರಹೊಮ್ಮಲು ಇಂತಹ ಶ್ರೇಷ್ಠ ನೃತ್ಯ ಗುರುಗಳ ಬಳಿ ಅಭ್ಯಾಸಿಸಲು ಕಳುಹಿಸಿ ಸಾಂಸ್ಕೃತಿಕ ಕಾರ್ಯಗಳಿಗೆ ಉತ್ತೇಜನ ನೀಡಬೇಕೆಂದು ತಿಳಿಸಿದರು. ನೃ ತ್ಯಕುಟೀರದ ಕಲಾತ್ಮಕ ನಿರ್ದೇಶಕಿ ಕಲಾ ಯೋಗಿ ಪುರಸ್ಕೃತೆ ವಿದುಷಿ ದೀಪ ಭಟ್ ಮತ್ತು ವಿದ್ವಾನ್ ಮಂಜುನಾಥ ಪುತ್ತೂರು ಭಾಗವಹಿಸಿದ್ದರು. ಎಸ್ ನಂಜುಂಡ ರಾವ್ ಸೊಗಸಾದ ನಿರೂಪಣೆಯಲ್ಲಿ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ ಗಾಯನದಲ್ಲಿ ವಿದ್ವಾನ್ ನಾರಾಯಣಸ್ವಾಮಿ ಮೃದಂಗದಲ್ಲಿ ಹಾಗೂ ವಿದ್ವಾನ್ ಮಹೇಶ ಸ್ವಾಮಿ ಕೊಳಲಿನಲ್ಲಿ ಹಾಗೂ ನಟವಾಂಗದಲ್ಲಿ ವಿದುಷಿ ಭಾವನಾ ಗಣೇಶ್ ತಿಸ್ರ ಏಕ ಅಲರಿಪು, ಆದಿ ತಾಳ ತೋಡಿ ರಾಗದ ರೂಪಮು ಜ್ಜುಚಿ ವರ್ಣಂ, ಮಿಶ್ರ ಚಾಪು ತಾಳದ ರಾಗ ಮಾಲೀಕ ರಾಗದ ಶಬ್ದಂ, ಆದಿತಾಳ ಕಲ್ಯಾಣಿ ರಾಗದ ಶೃಂಗಪುರಾದೀಶ್ವರಿ ಶಾರದಾ ಕೃತಿ, ಆದಿತಾಳ ಅಭೇರಿ ರಾಗದ ಅಕ್ಕಮಹಾದೇವಿ ವಚನ ಮತ್ತು ಕೊನೆಯಲ್ಲಿ ಆದಿತಾಳದ ನಟಭೈರವಿ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.