ಸಂಗೀತದಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸೋಮಶೇಖರ ರೂಳಿ
ಕಲಬುರಗಿ : ಸಂಗೀತದಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಕಲಬುರಗಿ ಆಕಾಶವಾಣಿ ನಿರ್ದೇಶಕರಾದ ಸೋಮಶೇಖರ ರೂಳಿ ಹೇಳಿದ್ದಾರೆ.
ನಗರದ ಹೊರವಲಯದ ಕೊಕಟನೂರ (ಡಿ) ಗ್ರಾಮದ ಗುರು ಪುಟ್ಟರಾಜ ಸಂಗೀತ ಭವನದಲ್ಲಿ ಇಂದು ಮಧ್ಯಾಹ್ನ ಪಂ.ಪುಟ್ಟರಾಜ ಗವಾಯಿಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊನ್ನ ಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಪಂ.ಡಾ.ಸಿದ್ರಾಮಪ್ಪ ಪೋಲೀಸ್ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಿಶಾ ಪದವಿ ಪೂರ್ವ ಕಾಲೇಜನ ಅದ್ಯಕ್ಷರಾದ ಶಿವಾನಂದ ಖಜೂರಿ,ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕರಾದ ಶರಣಗೌಡ ಪಾಟೀಲ ಪಾಳಾ, ಸಿದ್ದಣ್ಣ ದೇಸಾಯಿ ಕಲ್ಲೂರ, ಬಾಬುರಾವ್ ಪಾಟೀಲ ಚಿತ್ತಕೋಟ ಮುಖ್ಯ ಅತಿಥಿಗಳಾಗಿದ್ದರು.
ಶಿವರುದ್ರಯ್ಯ ಗೌಡಗಾಂವ, ಸುರ್ಯಕಾಂತ ಡುಮ್ಮಾ, ಬಾಬುರಾವ್ ಕೋಬಾಳ,ಡಾ.ಶಿವಶಂಕರ ಬಿರಾದಾರ, ಜಗದೀಶ ನಗನೂರ, ಅಣ್ಣಾರಾಯ ಶೆಳ್ಳಿಗಿ ಮತ್ತಿಮುಡು, ಬಸಯ್ಯ ಗುತ್ತೆದಾರ, ನಾಗರಾಜ ಕೋಟನೂರ,ಸೈದಪ್ಪ ಚೌಡಾಪೂರ, ಬಸವರಾಜ ಟೆಂಗಳಿ ಸಂಗೀತ ಸೇವೆ ಸಲ್ಲಿಸಿದರು,
ಬಸವರಾಜ ಚಳಗೇರಿ, ಅಮರೇಶ್ ದೇಸಾಯಿ ಕಲ್ಲೂರ ತಬಲಾ ಸಾಥ್ ನೀಡಿದರು. ಅಣ್ಣಾರಾಯ ಶೆಳ್ಳಗಿ ಮತ್ತಿಮಡು ಸ್ವಾಗತಿಸಿ ನಿರೂಪಿಸಿದರು, ಕೋಳಕೂರ ಮತ್ತು ರಟಕಲ್.ಶಾಲೆ ಮಕ್ಕಳು ಸಂಗೀತ ಕೇಳಿ ಆನಂದಿಸಿದರು