ಮಕ್ಕಳ ಭದ್ರತೆಕಾಗಿ ಹಳೆಯ ಶಾಲಾ ಕಟ್ಟಡದ ಮುಚ್ಚಳಿಕೆ ಅಗತ್ಯ – ಕಾಳೆಬೆಳಗುಂದಿ ಶಾಲೆಗೆ ಕರವೇ

ಮಕ್ಕಳ ಭದ್ರತೆಕಾಗಿ ಹಳೆಯ ಶಾಲಾ ಕಟ್ಟಡದ ಮುಚ್ಚಳಿಕೆ ಅಗತ್ಯ – ಕಾಳೆಬೆಳಗುಂದಿ ಶಾಲೆಗೆ ಕರವೇ
ಭೇಟಿ ಗುರುಮಠಕಲ್ : ತಾಲೂಕಿನ ಕಾಳೆಬೆಳಗುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಅತ್ಯಂತ ತೀವ್ರವಾಗಿದೆ. ಕಳೆದ ಒಂದು ವರ್ಷದಿಂದ ಶಾಲೆಯ ಮೇಲ್ಚಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಚತ್ತಿನ ಸಿಮೆಂಟ್ ಎಪ್ಪತ್ತೋತ್ತು ಕಡೆಗಳಿಂದ ಕೆಳಕ್ಕೆ ಬಿದ್ದುತ್ತಿದೆ. ಇದರ ಕೆಳಗೆ ನೂರಾರು ಮಕ್ಕಳು ಪ್ರತಿದಿನ ಪಾಠವೇಳೆಯಲ್ಲಿ ತೊಡಗಿರುತ್ತಾರೆ. ಈ ಭಯಾನಕ ಪರಿಸ್ಥಿತಿಯ ನಡುವೆಯೂ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಲೆಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಘಟಕದ ಅಧ್ಯಕ್ಷ ಶರಣಬಸಪ್ಪ ಯಲ್ಹೇರಿ ಅವರು ಭೇಟಿ ನೀಡಿದ್ದು, ಮಕ್ಕಳ ಭದ್ರತೆ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. “ಈ ರೀತಿಯ ಅಪಾಯಕಾರಿಯಾದ ಪರಿಸ್ಥಿತಿಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಮಾನವೀಯತೆಗೂ ವಿರುದ್ಧವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಆಗಲೇ ಮಾಹಿತಿ ನೀಡಿದರೂ ಯಾವುದೇ ಪರಿಹಾರ ಕೈಗೊಳ್ಳಲಾಗಿದೆ ಇಲ್ಲ” ಎಂದು ಅವರು ಖಡಕ್ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (KKRDB) 2023-24ರ ಅಕ್ಷರ ಅವಿಸ್ಕಾರ ಮೈಕ್ರೋ ಯೋಜನೆ ಅಡಿಯಲ್ಲಿ ಈ ಶಾಲೆಗೆ ₹3 ಲಕ್ಷದ ಅನುದಾನವನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ SCP ₹1.44 ಲಕ್ಷ, TSP ₹0.39 ಲಕ್ಷ ಮತ್ತು GEN ₹1.17 ಲಕ್ಷ ನಿಗದಿಯಾಗಿದ್ದು, ಕಾಮಗಾರಿಗೆ ಕೆಆರ್‌ಐಡಿಎಲ್ (KRIDL) ಅನ್ನು ನಿಯೋಜಿಸಲಾಗಿದೆ. ಆದರೆ, ಪ್ರಸ್ತುತ ಈ ಅನುದಾನವನ್ನು ಕಟ್ಟಡದ ಬದಲಿಗೆ ಕ್ರೀಡಾ ಸಾಮಗ್ರಿ ಹಾಗೂ ಇತರ ನವೀಕರಣಗಳಿಗೆ ಬಳಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಶಾಲೆಗೆ ಹೊಸದಾಗಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಹೀಗಾಗಿ, ಶಿಥಿಲ ಕಟ್ಟಡವನ್ನು ತಕ್ಷಣವೇ ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ತಕ್ಷಣವೇ ಚಾಲನೆ ನೀಡಬೇಕು ಎಂಬುದು ಕರವೇ ಆಗ್ರಹ. ಇದಲ್ಲದೆ, ಶಿಥಿಲ ಕಟ್ಟಡಗಳಿಗೆ ನಾಳೆಯಿಂದಲೇ ಬೀಗ ಹಾಕಿ, ಪಾಠಗಳಿಗಾಗಿ ಗ್ರಾಮದಲ್ಲಿ ಬೇರೆ ಭದ್ರ ಸ್ಥಳದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ಅನಾಹುತಕ್ಕೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆಗಾರರಾಗುತ್ತದೆ ಎಂದು ಶರಣಬಸಪ್ಪ ಯಲ್ಹೇರಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕರವೇದ ತಾಲೂಕು ಪದಾಧಿಕಾರಿಗಳಾದ ದೇವಸಿಂಗ್ ಠಾಕೂರ್, ಮೌನೇಶ್ ಮಾಧ್ವಾರ, ತಾಯಪ್ಪ ಚೇಳಿಮೆಲಿ, ರಾಜು ಕಲಾಲ್, ಲಕ್ಷ್ಮಣ್ ಬಾಗಿಲಿ ಹಾಜರಿದ್ದರು.