ಅಂತರಾಷ್ಟ್ರೀಯ ಯೋಗ ದಿನಾಚರಣೆ: ಶರಣಬಸವೇಶ್ವರ ವಸತಿ ವಿದ್ಯಾಲಯದಲ್ಲಿ ಯೋಗ ಶಿಬಿರ

ಅಂತರಾಷ್ಟ್ರೀಯ ಯೋಗ ದಿನಾಚರಣೆ: ಶರಣಬಸವೇಶ್ವರ ವಸತಿ ವಿದ್ಯಾಲಯದಲ್ಲಿ ಯೋಗ ಶಿಬಿರ
ಕಲಬುರಗಿ: 21 ಜೂನ್ 2025 — ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಶರಣಬಸವೇಶ್ವರ ವಸತಿ ವಿದ್ಯಾಲಯದ ಆವರಣದಲ್ಲಿ ವಿಶೇಷ ಯೋಗ ಶಿಬಿರವನ್ನು ಶ್ರದ್ಧಾಭಕ್ತಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶರಣಬಸವೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ್ ಉದ್ಘಾಟಿಸಿದರು. ಬ್ರಹ್ಮಕುಮಾರಿ ಸಂಸ್ಥೆಯ ರಾಜೇಶ್ವರಿ ದಿದಿ ಅವರು ಧ್ಯಾನದ ಮಹತ್ವ ಮತ್ತು ಯೋಗದ ಶಾರೀರಿಕ ಹಾಗೂ ಮಾನಸಿಕ ಪ್ರಯೋಜನಗಳ ಬಗ್ಗೆ ಪ್ರಭಾವಿ ಭಾಷಣ ನೀಡಿದರು.
ಪತಂಜಲಿ ಯೋಗ ಸಮಿತಿಯ ಯೋಗ ಗುರು ಶ್ರೀ ಶಿವಾನಂದ ಸಾಲಿಮಠ ಮತ್ತು ಶ್ರೀಮತಿ ಮಂಜುಳಾ ತಡಿಬಿಡಿ ಮಠ ಅವರು ವಿವಿಧ ಯೋಗಾಸನಗಳ ಪರಿಚಯ ಹಾಗೂ ತರಬೇತಿ ನೀಡಿ ಭಾಗವಹಿಸುವವರಿಗೆ ಪ್ರಾಯೋಗಿಕ ಅನುಭವ ನೀಡಿದರು.
ಕಾರ್ಯಕ್ರಮದಲ್ಲಿ ಶಾರದಾ ಮೇಡಂ, ಕಾಲೇಜು ಮತ್ತು ಶಾಲೆಯ ಸಿಬ್ಬಂದಿವರ್ಗ, ಯುವ ಪ್ರಭಾರಿ ಡಾ. ಸಂಗಮೇಶ್, ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು, ಯೋಗ ಶಿಕ್ಷಕರು, ಯೋಗ ಅಭ್ಯಾಸಿಗಳು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಸುದ್ದಿ ಬಿಡುಗಡೆಶ್ರೀ ಶರಣಬಸವೇಶ್ವರ ವಸತಿ ವಿದ್ಯಾಲಯ, ಕಲಬುರಗಿ.