ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ : ಸೋಮೇಶ್ವರ ಶ್ರೀಗಳು
ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ : ಸೋಮೇಶ್ವರ ಶ್ರೀಗಳು
ಶಹಪುರ : ಮನುಷ್ಯ ಸಂಸಾರ ಜಂಜಾಟದಿಂದ ಬೇಸರಗೊಂಡಾಗ ಪುರಾಣ ಪ್ರವಚನಗಳು ಆಲಿಸುವಿಕೆಯಿಂದ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಸಗರದ ನಾಗಠಾಣ ಹಿರೇಮಠದಲ್ಲಿ ಆಯೋಜಿಸಿದ ಶ್ರೀ ಗುರು ಉದಯ ಮಹಾಂತೇಶ್ವರ ಜಾತ್ರಾ ಮಹೋತ್ಸವ ಹಾಗೂ ಸೋಮೇಶ್ವರ ಶಿವಾಚಾರ್ಯ ಗುರು ಪಟ್ಟಾಧಿಕಾರ ದ್ವಾದಶ ವರ್ಧಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ ಮಹಾದಾಸೋಯಿ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರಾತನ ಧರ್ಮವಾದ ಶಿವ ಧರ್ಮ
ಪಾಲಿಸುವುದರ ಜೊತೆಗೆ ನಾವು
ಇಂದಿಗೂ ಶಿವಭಕ್ತರಾಗಿದ್ದೇವೆ ಹಾಗೂ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಜೀವನವನ್ನು ಸಾರ್ಥಕ
ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೇರಟಗಿ - ಗದಗ ಪುರಾಣ ಪ್ರವಚನಕಾರ ಪಟುಗಳಾದ ಮಡಿವಾಳಯ್ಯ ಶಾಸ್ತ್ರಿಗಳು ಮಾತನಾಡಿ ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ಕಾಲಚಕ್ರಕ್ಕೆ ಸಿಲುಕಿ ತನ್ನ ಬದುಕಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ,ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುರಾಣಗಳ ಪ್ರವಚನ ಆಲಿಸಿ ಶರಣರು ನೀಡಿದ ಸಂದೇಶಗಳನ್ನು ಮೈಗೂಡಿಸಿಕೊಂಡರೆ ನಮ್ಮ ಬದುಕಿಗೆ ಮನಮುಟ್ಟುವ ಹಾಗೆ ತಿಳಿಸಿದರು.
ಚರಬಸವೇಶ್ವರರ ಗದ್ದುಗೆ ಸಂಸ್ಥಾನದ ವೇದಮೂರ್ತಿ ಬಸಯ್ಯ ಶರಣರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ, ಹಿರಿಯ ಮುಖಂಡರಾದ ಮಹಾಂತಗೌಡ ಸುಬೇದಾರ,ನಿವೃತ್ತ ಶಿಕ್ಷಕ ಶಿಖರಪ್ಪ ಅರಕೇರಿ, ಹನುಮಂತರಾಯ ಕೂಡ್ಲೂರು, ಸೇರಿದಂತೆ ಇನ್ನಿತರ ಉಪಸಿತರಿದ್ದರು.
