ದೇಹಾಂಗದಾನ ಮೂಲಕ ಸಾವಿನಲ್ಲೂ ಸಾರ್ಥಕತೆ ಕಾಣೋಣ- ಗುರುಮಠಕಲ್ ಶ್ರೀಗಳು

ದೇಹಾಂಗದಾನ ಮೂಲಕ ಸಾವಿನಲ್ಲೂ ಸಾರ್ಥಕತೆ ಕಾಣೋಣ-   ಗುರುಮಠಕಲ್ ಶ್ರೀಗಳು

ದೇಹಾಂಗದಾನ ಮೂಲಕ ಸಾವಿನಲ್ಲೂ ಸಾರ್ಥಕತೆ ಕಾಣೋಣ- ಗುರುಮಠಕಲ್ ಶ್ರೀಗಳು 

ಸಾವಿನ ನಂತರ ನಮ್ಮ ಮೃತದೇಹದಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎನ್ನುವದಾದರೆ ದೇಹಾಂಗದಾನ ಮಾಡುವದು ಉತ್ತಮ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಗುರುಮಠಕಲ್ ಖಾಸಾಮಠದ ಶ್ರೀಗುರು ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು

           ಅವರು ಕಲಬುರ್ಗಿ ನಗರದ ಕನ್ನಡ ಭವನದಲ್ಲಿ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಸಂಸ್ಥಾಪನಾ ದಿನ ಪ್ರಯುಕ್ತ ಆಯೋಜಿಸಿದ್ದ "" ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಉತ್ಸವ 2026"" ರ ಸಾನಿದ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು

        ಕಾರ್ಯಕ್ರಮದ ಸಮ್ಮುಖವನ್ನು ಜನಾಬ್ ಹಜರತ್ ಸೈಯದ್ ಶಾ ಇಸ್ಮಾಯಿಲ್ ಹುಸೇನಿ ಸಜ್ಜಾದ ನಶೀನ್ ಮುತ್ತವಲ್ಲಿ ಬಾರ್ಗ ಚಂದಾ ಹುಸೇನಿ ಗೋಗಿ ಶರೀಫ

ಹಾಗೂ ಕಲಬುರ್ಗಿಯ ದೈವಾನುಗ್ರಹ ಮಾತೆಯ ಪ್ರಧಾನಾಲಯದ ಗುರುಗಳು

ಹಾಗೂ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲರಾದ ಫಾದರ ಜೋಸೆಫ್ ಪ್ರವೀಣ್ ರವರು ವಹಿಸಿದ್ದರು. 

ಕಲಬುರ್ಗಿ ದೇಹದಾನ ಬಳಗದ ಅಧ್ಯಕ್ಷ ಎಸ್ ಎಸ್ ಹಿರೇಮಠ ರವರು ಉದ್ಘಾಟಿಸಿದರು. ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಉಪಾಧ್ಯಕ್ಷರು ಹಾಗೂ ಅಲಮೇಲ ಮಾಜಿ ಜಿ ಪಂ ಸದಸ್ಯೆ ಶಂಕ್ರೆಮ್ಮ ಹೂಗಾರ ವಹಿಸಿದ್ದರು. ಕಲಬುರ್ಗಿ ಕೆ ಬಿ ಎನ್ ಮೆಡಿಕಲ್ ಕಾಲೇಜಿನ aವಿಭಾಗ ಪ್ರಾದ್ಯಾಪಕಿ ಗಝಲಾ ಸಮ್ರಿನ್. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ್ ಬಳು0ಡಗಿ. ಯಡ್ರಾಮಿ ತಾಲೂಕಾಧ್ಯಕ್ಷ ಶಿವಕುಮಾರ ಡಂಬಳ ಉಪಸ್ಥಿತರಿದ್ದರು.

        ಇದೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ದೇಹದಾನ ಚಳುವಳಿ ರೂಪಿಸಿದ ಡಾ. ಸ ಜ ನಾಗಲೋಟಿಮಠರ ಸ್ಮರಣಾರ್ಥ "" ರಾಷ್ಟ್ರೀಯ ದೇಹದಾನ ಜಾಗೃತಿ ರತ್ನ "" ಪ್ರಶಸ್ತಿಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ದೇಹದಾನ ಬಳಗ ರಚಿಸಿ ಜಾಗೃತಿ ಮೂಡಿಸಿದ ಖ್ಯಾತ ವೈದ್ಯ ಡಾ. ಎಸ್ ಎಸ್ ಗುಬ್ಬಿ ರವರಿಗೆ ಹಾಗೂ ತಂದೆಯ ದೇಹ ಛೇಧಿಸಿ ವೈದ್ಯ ವಿದ್ಯಾರ್ಥಿಗಳಿಗೆ ಭೋದಿಸಿ ವಿಶ್ವದಾಖಲೆ ನಿರ್ಮಿಸಿದ ಪ್ರಥಮ ವೈದ್ಯ ಉಪನ್ಯಾಸಕ ಬೆಳಗಾವಿ ಕೆ ಎಲ್ ಈ ಮೆಡಿಕಲ್ ಕಾಲೇಜಿನ ಅನಾಟಮಿ ವಿಭಾಗ ಮುಖ್ಯಸ್ಥರಾದ ಡಾ. ಮಹಾಂತೇಶ್ ರಾಮಣ್ಣವರ ಹಾಗೂ ರಾಷ್ಟ್ರೀಯ ದೇಹಾಂಗದಾನ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಬೆಂಗಳೂರಿನ ಡಾ. ಕಲ್ಪನಾ ಡಿ ಎನ್. ಪವರ ಸ್ಟಾರ್ ನೇತ್ರ ದಾನಿ ಪುನೀತ್ ರಾಜಕುಮಾರ ಸ್ಮರಣಾರ್ಥ ಮಧುಗಿರಿಯ ಗಾಯತ್ರಿ ನಾರಾಯಣ ಹಾಗೂ ಆಂಧ್ರಪ್ರದೇಶದ ಹಿಂದೂಪುರದ ಆರ್ ನಳಿನಾಕ್ಷಿ ವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

 ಸಮಿತಿಯ ವಿವಿಧ ಪದಾಧಿಕಾರಿಗಳಿಗೆ ರಾಷ್ಟ್ರೀಯ ದೇಹಾಂಗದಾನ ಸೇವಾ ರತ್ನ. ಹಾಗೂ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

 ಇದೆ ಸಂದರ್ಭದಲ್ಲಿ ಕುಮಾರಿ ನಿಹಾರಿಕ ದ್ಯಾಮ ರಿಂದ ಭರತ ನಾಟ್ಯ ಹಾಗೂ ಚಿತ್ತಾಪುರ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ "" ದೃಷ್ಟಿ ದಾನ "" ಕಿರು ನಾಟಕ ಪ್ರದರ್ಶನ ನಡೆಯಿತು

       ನ್ಯಾಯವಾದಿ ಸಂಜೀವಕುಮಾರ ಡೊಂಗರಗಾಂವ ಸ್ವಾಗತಿಸಿದರು ಡಾ. ಶಿವಾನಂದ ಹೂಗಾರ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾಧ್ಯಕ್ಷ ಭೀಮರಾಯ ಬೀಳವಾರ ನಿರೂಪಣೆ ಮಾಡಿದರು ಮಲ್ಲಿಕಾರ್ಜುನ ಹಿರೇಮಠ ವಂದಿಸಿದರು 

ವರದಿ ಜೇಟ್ಟೆಪ್ಪ ಎಸ್ ಪೂಜಾರಿ