ಅವಿರಳ ಜ್ಞಾನಿ ಚನ್ನಬಸವಣ್ಣನವರ ಕೊಡುಗೆ ಅನನ್ಯ

ಬಸವೇಶ್ವರ ಸಮಾಜ ಸೇವಾ ಬಳಗದಿಂದ ಶರಣ ಚನ್ನಬಸವಣ್ಣನವರ 852ನೇ ಜಯಂತಿ
ಅವಿರಳ ಜ್ಞಾನಿ ಚನ್ನಬಸವಣ್ಣನವರ ಕೊಡುಗೆ ಅನನ್ಯ
ಕಲಬುರಗಿ: ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ಜರುಗಿದ ಸಾಮಾಜಿಕ ಚಳುವಳಿಯಲ್ಲಿ ಚನ್ನಬಸವಣ್ಣನವರು ಸಾಕಷ್ಟು ಶ್ರಮಿಸಿದ್ದಾರೆ. ಅಮೂಲ್ಯವಾದ ವಚನಗಳನ್ನು ರಚಿಸಿ, ರಕ್ಷಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವಿರಳ ಜ್ಞಾನಿಯಾಗಿದ್ದ ಅವರ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಅವಿರಳ ಜ್ಞಾನಿ ಶರಣ ಚನ್ನಬಸವಣ್ಣನವರ 852ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಅವಿರಳ ಜ್ಞಾನಿ, ಚಿನ್ಮಯಜ್ಞಾನಿ, ಷಟಸ್ಥಲ ಚಕ್ರವರ್ತಿ, ಚಿಕ್ಕದಣ್ಣಾಯಕ, ಗುರು ಬಸವೇಶ್ವರರ ಅಳಿಯರಾದ ಅವರು, ಶರಣರ ಸಾಮಾಜಿಕ ಚಳುವಳಿಗೆ ಪ್ರಮುಖವಾದ ಕೊಡುಗೆಯನ್ನು ನೀಡಿದ್ದಾರೆ. ಕಲ್ಯಾಣ ರಾಷ್ಟç ನಿರ್ಮಾಣ ಮಾಡುವ ಮೂಲಕ ಸಮಾನತೆಯ ಸಮಾಜ ಕಟ್ಟಿರುವ ಬಸವಾದಿ ಶಿವಶರಣ ಕೊಡುಗೆ ನಾವೆಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮಾಜಿ ಯೋಧ ರೇಣುಕಾಚಾರ್ಯ ಸ್ಥಾವರಮಠ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಣ ಅಣ್ಣಾರಾಯ ಎಚ್.ಮಂಗಾಣೆ, ಪ್ರಮುಖರಾದ ಲಕ್ಷಿಪುತ್ರ, ಶುಭಂ ಸೇರಿದಂತೆ ಮತ್ತಿತರರಿದ್ದರು.