ಚಿತ್ತಾಪುರದಲ್ಲಿ ರೈತ ದಿನಾಚರಣೆ ಆಚರಣೆ
ಚಿತ್ತಾಪುರದಲ್ಲಿ ರೈತ ದಿನಾಚರಣೆ ಆಚರಣೆ
ಕಲಬುರಗಿ: ಕೃಷಿ ಇಲಾಖೆ ಕಲಬುರಗಿ ವತಿಯಿಂದ ಚಿತ್ತಾಪುರ ತಾಲೂಕು ಪಂಚಾಯತ್ ಸಭಾಗೃಹದಲ್ಲಿ ದಿನಾಂಕ 23-12-2025 ರಂದು ರೈತ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಅಕ್ರಮ್ ಪಾಶಾ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ನಾಗಿರೆಡ್ಡಿ, ಪ್ರಗತಿಪರ ರೈತ ಹಾಗೂ ರೈತ ಮುಖಂಡರಾದ ಶ್ರೀ ಪರಸರೆಡ್ಡಿ, ಪಶು ವೈದ್ಯಾಧಿಕಾರಿ, ತೋಟಗಾರಿಕಾ ಅಧಿಕಾರಿಗಳು ಹಾಗೂ ಡಾ. ಸಂಜೀವ್ ಕುಮಾರ್ ಮಾನಕರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 100 ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತೋಟಗಾರಿಕೆ, ಕೃಷಿ, ರೇಷ್ಮೆ ಹಾಗೂ ಪಶುಸಂಗೋಪನೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಕೃಷಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ರವೀಂದ್ರ ಪಾಟೀಲ್ ಅವರು ರೈತರಿಗೆ ಉಪನ್ಯಾಸ ನೀಡಿ, ಆಧುನಿಕ ಕೃಷಿ ಪದ್ಧತಿಗಳು ಹಾಗೂ ತಂತ್ರಜ್ಞಾನಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮವು ರೈತರಿಗೆ ಪ್ರೇರಣೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.
