ಸ್ಲಂ ಜನಾಂದೋಲನ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ

ಸ್ಲಂ ಜನಾಂದೋಲನ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ

ಸ್ಲಂ ಜನಾಂದೋಲನ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಕನ್ನಡ ಭವನದಲ್ಲಿ ಸ್ಲಂ ಜನಾಂದೋಲನ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆಯನ್ನು ಕರೆಯಲಾಯಿತು. ಸಭೆಯ ಅಧ್ಯಕ್ಷೆತೆಯನ್ನು ಜನಾರ್ದನ ಹಳ್ಳಿಬೆಂಚಿ ವಹಿಸಿದರು. ಸಮಿತಿ ಅಯ್ಕೆ ಕುರಿತು ವೀಕ್ಷಕರಾಗಿ ದಲಿತ ಸಂಘಟನೆಯ ರಾಜ್ಯ ಮುಖಂಡರಾದ ಎಂ.ಆರ್ ಬೇರಿಯವರು ಬಾಗವಹಿಸಿ ಅಯ್ಕೆ ಪ್ರಕ್ರಿಯೆಯನ್ನು ನಡೆಸಿದರು. 

ನಗರದ ಹದಿನಾಲ್ಕು ಸ್ಲಂ ಗಳಾದ, ರಾಜೀವ ಗಾಂಧಿ ನಗರ, ಸಂಜೀವ ನಗರ, ಆಶ್ರಯ ಕಾಲೋನಿ, ಸಂಜೀವ ಗಾಂಧಿ ನಗರ, ಬುದ್ದನಗರ,ಸಿದ್ದಾರೋಢ ಕಾಲೋನಿ, ಕಪನೂರ, ರಾಮನಗರ,ಲಂಗರ ಹನುಮಾನ ನಗರ,ಪಂಚಶಿಲ ನಗರ ಬೋರಾಬಾಯಿ ನಗರ,ಸವಿತಾ ಕಾಲೋನಿ, ಪಿಲ್ಟರಬೆಡ್ ಆಶ್ರಯ ಕಾಲೋನಿ, ರಾಮಜಿನಗರ, ಗಳಿಂದ ಒಟ್ಟು 48 ಸದಸ್ಯರು ಆಗಮಿಸಿದ್ದು ಇವರಲ್ಲಿ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ 23 ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಸಂಜಯ ಗಾಂಧಿ ನಗರದಿಂದ ವಿಶ್ವರಾಧ್ಯ ಹಿರೇಮಠ, ಅಶ್ವಿನಿ, ಬುದ್ದ ನಗರದಿಂದ ಕಲಾವತಿ, ಮತ್ತು ಗುಂಡಮ್ಮ, ಪಂಚಶೀಲ ನಗರದಿಂದ ರೇಣುಕಾ, ಹೀನಾ ಶೇಖ್, ಸಂಜೀವ ನಗರದಿಂದ ದ್ಯಾವಮ್ಮ ,ಅಮಲಮ್ಮ, ಸಿದ್ದಾರೋಢ ಕಾಲೋನಿ ಬಸವರಾಜ ಪೂಜಾರಿ, ಅಹ್ಮದಬಿ, ರಾಮ ನಗರ, ಲಕ್ಷ್ಮಿ ಕಪನೂರ, ಗೌರಮ್ಮ ಮಾಕಾ, ಚಂದ್ರಕಲಾ, ಫೀಲ್ಡರ್ ಬೆಡ್ಡ್ ಆಶ್ರಯ ಕಾಲೋನಿ ಶೇಖ ರಸಿದ್, ಲಂಗರ ಹನುಮಾನ ರತ್ನಮ್ಮ, ಅಂಬಿಕಾ, ಬೊರಾಬಾಯಿ ನಗರದ ಗೀತಾ, ಸುನೀತಾ, ರಾಮಜಿ ನಗರದ ಸಂತೋಸ್ ಶರಣು, ಅವರನ್ನು ಆಯ್ಕೆ ಮಾಡಲಾಯಿತು.      

ಕಾರ್ಯಕಾರಿಣಿ ಸಮಿತಿ ಸದಸ್ಯರ ಆಯ್ಕೆ ಯಾದ ಬಳಿಕ ವಿಕ್ಷಕರು ಸದಸ್ಯರ ಗೌಪ್ಯ ಮತದಾನದ ಮೂಲಕ ಜಿಲ್ಲಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷ ರಾಗಿ ಗೌರಮ್ಮ ಮಾಕಾ, ಹಾಗೂ ಉಪಾಧ್ಯಕ್ಷ ರಾಗಿ ದ್ಯಾವಮ್ಮ ಅವರನ್ನು ಆಯ್ಕೆಗೊಂಡರು.

ನಂತರ ಚುನಾವಣಾ ವಿಕ್ಷಕರು. ಜಿಲ್ಲಾ ಸಂಚಾಲಕರಾದ ರೇಣುಕಾ ಸರಡಗಿ ಮತ್ತು ಅಧ್ಯಕ್ಷ ಉಪಾಧ್ಯಕ್ಷ ಸೇರಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಹೀನಾ ಶೇಖ ಅವರನ್ನು ಹೆಚ್ಚುವರಿ ಉಪಾಧ್ಯಕ್ಷ ರನ್ನಾಗಿ ,ಶರಣು ಕಣ್ಣಿ ಅವರನ್ನು ಕಾರ್ಯದರ್ಶಿಯಾಗಿ ಸುನೀತಾ ಕೊಳ್ಳೂರ ಅವರನ್ನು ಖಜಾಂಚಿ ಹಾಗೂ ಶರಣು ಹಂಗರಗಿ ಅವರನ್ನು ಸಂಘಟನಾ ಕಾರ್ಯದರ್ಶಿ ಗಳನ್ನಾಗಿ ಆಯ್ಕೆ ಮಾಡಲಾಯಿತು.