ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ ಟ್ರಸ್ಟ್‌ನ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಲಿತಾ ಉಮಾಕಾಂತ ಜಮಾದಾರ ಅಫಜಲಪುರ ಆಯ್ಕೆಯಾಗಿದ್ದಾರೆ.

ಸೆ.29ರಂದು ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಬನಶಂಕರಿ ಶಾಲೆಯಲ್ಲಿಯೇ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಂಘದ ಪ್ರಕಟಣೆ ತಿಳಿಸಿದೆ.