ಜಯನಗರ ಶಿವಮಂದಿರದಲ್ಲಿ ರಾಮನವಮಿ ಆಚರಣೆ

ಜಯನಗರ ಶಿವಮಂದಿರದಲ್ಲಿ ರಾಮನವಮಿ ಆಚರಣೆ

ಜಯನಗರ ಶಿವಮಂದಿರದಲ್ಲಿ ರಾಮನವಮಿ ಆಚರಣೆ

ಕಲಬುರಗಿ: ಶ್ರೀರಾಮ ನವಮಿ ಅಂಗವಾಗಿ ಭಾನುವಾರ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಯನಗರ ಶಿವಮಂದಿರದಲ್ಲಿ ಪ್ರಭು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು ದೇಶಾದ್ಯಂತ ಶ್ರೀರಾಮ ನವಮಿ ಹಬ್ಬದಂತೆ ಆಚರಿಸಲಾಗುತ್ತಿದೆ.ಶ್ರೀ ರಾಮಚಂದ್ರನ ಜನ್ಮದಿನದಂದು ರಾಮನವಮಿಯು ಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು.

ಪದಾಧಿಕಾರಿಗಳಾದ ವೀರೇಶ ದಂಡೋತಿ,ಸೂರ್ಯಕಾಂತ ಕೆ.ಬಿ,ಬಂಡಪ್ಪ ಕೇಸೂರ,ಬಸವರಾಜ ಮಾಗಿ,ಶಿವಕುಮಾರ ಪಾಟೀಲ,ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ,ಗುರುಪಾದಪ್ಪ ಕಾಂತಾ,ಬಸವರಾಜ ಪುರ್ಮಾ,ವಿರೇಶ ಹುಡುಗಿ,ಮಲ್ಲಯ್ಯ ಸ್ವಾಮಿ ಗಂಗಾಧರ ಮಠ,ಮಧುಸುಧನ ಕುಲ್ಕರ್ಣಿ,ಶ್ರೀಮತಿ ಅನುರಾಧಾ ಕುಮಾರಸ್ವಾಮಿ,ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಪದಾಧಿಕಾರಿಗಳಾದ ಅನಿತಾ ನವಣಿ,ಸುಷ್ಮಾ ಮಾಗಿ,ಲತಾ ತುಪ್ಪದ,ಸದಸ್ಯರಾದ ರಾಜೇಶ್ವರಿ,ಸುಶೀಲಾ ಬೋಮ್ಮಣ,ಅಂಬಕ್ಕಾ ಪಾಟೀಲ ಸೇರಿದಂತೆ ಜಯನಗರ ಬಡಾವಣೆಯ ಅನೇಕರು ಇದ್ದರು.