ನಟ ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್ : ದರ್ಶನ ಕುಟುಂಬಕ್ಕೆ ಸಂತಸ

ನಟ ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್ : ದರ್ಶನ ಕುಟುಂಬಕ್ಕೆ ಸಂತಸ

ನಟ ದರ್ಶನ್ ಗೆ 6 ವಾರಗಳ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್ : ದರ್ಶನ ಕುಟುಂಬಕ್ಕೆ ಸಂತಸ 

ಬೆಂಗಳೂರು: ಅಶ್ಲೀಲ ಚಿತ್ರಗಳ ಕಾರಣದಿಂದ ದರ್ಶನ ಗ್ಯಾಂಗ್ ನಿಂದ ಸಾವನ್ನಪ್ಪಿದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಗೆ ಹೈಕೋರ್ಟ್‌ ಇಂದು 6 ವಾರಗಳ ಮಧ್ಯಂತರ ಜಾಮೀನು ನೀಡಿದೆ. 

ಅನಾರೋಗ್ಯದ ಆಧಾರದ ಮೇಲೆ ಈ ಮಧ್ಯಂತರ ಜಾಮೀನು ನೀಡಿದ್ದು, ಸುಮಾರು 131 ದಿನಗಳ ನಂತರ ದರ್ಶನ್ ಜೈಲಿನಿಂದ ಇಂದು ಸಂಜೆ ವೇಳೆಗೆ ಹೋರಬರಲಿದ್ದಾರೆ ಎನ್ನಲಾಗುತ್ತಿದೆ.

ಇಷ್ಟು ದಿನ ಜೈಲು ಹಕ್ಕಿಯಾಗಿದ್ದ ದರ್ಶನ್ ಜೈಲಿನ ಅಧಿಕಾರಿಗಳು ಮೂಲಕ ಜಾಮೀನು ದೊರೆತ ಸುದ್ದಿ ಕೇಳಿ ದಾಸ ಖ್ಯಾತಿಯ ದರ್ಶನ ಸಂತಸಗೊಂಡಿದ್ದಾರೆ.

 ದೀಪಗಳ ಹಬ್ಬ ದೀಪಾವಳಿಯು ದರ್ಶನ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭರವಸೆಯ ಬೆಳಕು ಮೂಡಿದೆ.

ದರ್ಶನ್ ತೀವ್ರ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿ ಬೇಕಿರುವ ಹಿನ್ನೆಲೆ ಮಧ್ಯಂತರ ಜಾಮೀನು ನೀಡಿ ಎಂದು ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು. ನಿನ್ನೆ (ಅ.29) ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದ್ದರು. 

ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರ ಏಕಸದಸ್ಯ ಪೀಠ ಇವತ್ತು ತೀರ್ಪು ಕಾಯ್ದಿರಿಸಿತ್ತು. ಇಂದು ಬೆಳಗ್ಗೆ 10.30 ರ ಸುಮಾರಿಗೆ ತೀರ್ಪು ಪ್ರಕಟಿಸಿದ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

 ಆದರೆ ಬೇಸರ ಸಂಗತಿ ಏನೆಂದರೆ, ಇದು ಮಧ್ಯಂತರ ಜಾಮೀನು ಆಗಿದ್ದು, ಕೇವಲ 6 ವಾರಗಳು ಮಾತ್ರ ದರ್ಶನ್ ಜೈಲಿನಿಂದ ಹೊರಗಡೆ ಇರಲಿದ್ದಾರೆ. ಸಮಯ ಮುಗಿದ ಬಳಿಕ ಮತ್ತೆ ಜೈಲುವಾಸಕ್ಕೆ ತೆರಳಬೇಕು ಅಥವಾ ಜಾಮೀನು ಅವಧಿ ವಿಸ್ತರಣೆ ಸಹ ಆಗಬಹುದು.

ಅರ್ಜಿದಾರರ ದೇಹದಲ್ಲಿ ಸಮರ್ಪಕವಾಗಿ ರಕ್ತಪರಿಚಲನೆ ಆಗುತ್ತಿಲ್ಲ, ಪಾದಗಳಲ್ಲಿ ನಂಬನೆಸ್ (ಮರಗಟ್ಟುವಿಕೆ) ಇದೆ. ಡಿಸ್ಕ್ ಸಮಸ್ಯೆ ಸಹ ಇದೆ. ಕಾಲಿನಲ್ಲಿ ನರದ ತೊಂದರೆ ಉಂಟಾಗಿದ್ದು, ಈಗಾಗಲೇ ಸ್ವಲ್ಪ ಮಟ್ಟಿಗೆ ಪಾದದ ಸ್ಪರ್ಶ ಕಳೆದುಕೊಂಡಿದ್ದಾರೆ.ಹೀಗಿರುವಾಗ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಎಡಮಾಡಿಕೊಡಬಹುದು.

ಹಾಗೆಯೇ ವೈದ್ಯಕೀಯ ವರದಿಯಲ್ಲಿಯೂ ದರ್ಶನ್ ಅವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಅನಿವಾರ್ಯತೆ ಕುರಿತು ವರದಿಯಾಗಿದೆ. ಈ ಎಲ್ಲವನ್ನೂ ಗಮನಿಸಿ ಮಧ್ಯಂತರ ಜಾಮೀನು ನೀಡಬೇಕು ಎಂದು ವಕೀಲ ನಾಗೇಶ್ ಮನವಿ ಮಾಡಿದ್ದರು. ಸರ್ಕಾರದ ಪರ ವಕೀಲ ಪ್ರಸನ್ನಕುಮಾ‌ರ್ ವಾದ ಮಂಡಿಸಿ, ಆರೋಪಿಯು ಪಾರ್ಶ್ವವಾಯುವಿಗೆ ತುತ್ತಾಗಬಹುದು ಎಂದು ವರದಿ ನೀಡಿದೆ ಆದರೆ ತುತ್ತಾಗಿದ್ದಾರೆ ಎಂದಿಲ್ಲ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ ಸರ್ಕಾರ ಪರ ವಕೀಲರಿಗೆ, ನಿಮ್ಮ ಮಾತಿನ ಅರ್ಥವೇನು? ಅರ್ಜಿದಾರರು ಅನಾರೋಗ್ಯದ ಅಂತಿಮ ಹಂತಕ್ಕೆ ತಲುಪುವವರೆಗೆ ಕಾಯಬೇಕು ಎನ್ನುವುದೇ ಎಂದು ಪ್ರಶ್ನಿಸಿತು.? ತದನಂತರ ಸರ್ಕಾರಿ ಪರ ವಕೀಲರನ್ನು ಉದ್ದೇಶಿಸಿ, ನೋಡಿ ಆರೋಗ್ಯ ಎಂಬುವುದು ಮಾನವನ ಮೂಲಭೂತ ಹಕ್ಕು. ವ್ಯಕ್ತಿ ಆರೋಪಿಯಾಗಿರಲಿ, ಅಪರಾಧಿಯೇ ಅಗಿರಲಿ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಇದನ್ನು ಸುಪ್ರೀಂಕೋರ್ಟ್ ಸಹ ಹಲವು ವೇಳೆ ಪುನುರುಚ್ಚರಿಸಿದೆ ಎಂದರು.

ವಾದ - ಪತ್ರಿವಾದ ಆಲಿಸಿದ ನ್ಯಾಯಪೀಠವು ಅರ್ಜಿಯ ತೀರ್ಪನ್ನು ಇಂದಿಗೆ ಪ್ರಕಟಿಸುವುದಾಗಿ ಹೇಳಿತ್ತು.

 ಇಂದು ಬೆಳಗ್ಗೆ ತೀರ್ಪು ಪ್ರಕಟಿಸಿದ ನ್ಯಾಯಾಲಯ ನಟ ದರ್ಶನ್ ಗೆ ಮಧ್ಯಂತರ ಜಾಮೀನು ನೀಡಿದೆ.

ನಟ ದರ್ಶನ್ ರನ್ನು ಕಾಣಲು ಅವರ ಕುಟುಂಬದವರು ಬಳ್ಳಾರಿಗೆ ಆಗಮಿಸುತ್ತಿದ್ದು, ದರ್ಶನ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಜೈಲಿನ ಎದುರುಗಡೆ ಅವರನ್ನು ಭೇಟಿ ಮಾಡಲು ಕಾದು ಕುಳಿತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.