ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ನವದೆಹಲಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಡಾ.ರಾಜಕುಮಾರ ಹೆಬ್ಬಾಳೆ ನೇಮಕ

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ನವದೆಹಲಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಡಾ.ರಾಜಕುಮಾರ ಹೆಬ್ಬಾಳೆ ನೇಮಕ

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ನವದೆಹಲಿಯ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಡಾ.ರಾಜಕುಮಾರ ಹೆಬ್ಬಾಳೆ ನೇಮಕ

ಬೀದರ: 2015ರಿಂದ ನವದೆಹಲಿಯ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ದಕ್ಷಿಣ ಭಾರತದ ಕಾರ್ಯದರ್ಶಿಯಾಗಿ ಡಾ. ರಾಜಕುಮಾರ ಹೆಬ್ಬಾಳೆಯವರು ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ಇದೀಗ ಅವರನ್ನು ಪರಿಷತ್ತಿನ ಅಧ್ಯಕ್ಷ ನಿರ್ಮಲ ರತನಲಾಲ್ ವೈದ್ಯ ಅವರು ಪರಿಷತ್ತಿನ ರಾಷ್ಟ್ರಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ದೇಶದ ಏಳು ವಲಯ ಸಾಂಸ್ಕೃತಿಕ ಕೇಂದ್ರ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಉತ್ತರ ಭಾರತದ ಹರಿಯಾಣ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ, ಜಮ್ಮು ಕಾಶ್ಮೀರ, ಛತ್ತಿಸಗಢ, ದಕ್ಷಿಣ ಭಾರತದ ಮಹಾರಾಷ್ಟç, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಡಾ. ರಾಜಕುಮಾರ ಅವರು ರಾಷ್ಟಿçÃಯ ಜನಪದ ಉತ್ಸವಗಳು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುವುದರ ಜೊತೆಗೆ 2006ರಲ್ಲಿ ಬೀದರನಲ್ಲಿ ಜರುಗಿದ 72ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನಾ ಸಮಿತಿ ಸದಸ್ಯರಾಗಿ, 2011ರಲ್ಲಿ ಆಯೋಜಿಸಿದ ಪ್ರಥಮ ಅಖಿಲ ಭಾರತ ಜನಪದ ಸಮ್ಮೇಳನದ ಸ್ಥಳೀಯ ಕಾರ್ಯದರ್ಶಿಯಾಗಿ ಅಲ್ಲದೇ ಬೀದರ ಕರ್ನಾಟಕ ಜಾನಪದ ಪರಿಷತ್ತಿನ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಗಡಿ ಬೀದರ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಂಡಿರುತ್ತಾರೆ. ಅಲ್ಲದೇ ಕಳೆದ ತಿಂಗಳಲ್ಲಿ ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್‌ನಲ್ಲಿ ಅಂತರಾಷ್ಟಿçÃಯ ಜಾನಪದ ನೃತ್ಯೋತ್ಸವ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಕಾರಣ ರಾಜಕುಮಾರ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ ಎಂದು ತಗಾರೆ ತಿಳಿಸಿದರು. ಅಲ್ಲದೇ ೨೦೨೫ರಲ್ಲಿ ಬೀದರ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅಂತರಾಷ್ಟ್ರೀಯ ಜನಪದ ಸಮ್ಮೇಳನವನ್ನು ಜಿಲ್ಲೆಯಲ್ಲಿ ಆಯೋಜಿಸಲು ರಾಜಕುಮಾರ ಅವರು ಗ್ವಾಲಿಯರ್‌ನಲ್ಲಿ ಅನುಮತಿ ಪಡೆದುಕೊಂಡು ಬಂದಿದ್ದಾರೆ. ಸಕಾರಾತ್ಮಕ ಸ್ಪಂದನೆ ಕೂಡಾ ಸಿಕ್ಕಿದೆ. 

ಡಾ. ರಾಜಕುಮಾರ ಅವರನ್ನು ನವದೆಹಲಿಯ ರಾಷ್ಟಿçÃಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ, ಡಾ. ಸುನಿತಾ ಕೂಡ್ಲಿಕರ್, ಡಾ. ಮಹಾನಂದ ಮಡಕಿ, ಪ್ರೊ.ಎಸ್.ಬಿ.ಬಿರಾದಾರ, ಡಾ. ನೀಲಗಂಗಾ ಹೆಬ್ಬಾಳೆ, ತಾಲೂಕಾಧ್ಯಕ್ಷರಾದ ಸಂಜೀವಕುಮಾರ ಜುಮ್ಮಾ, ಸಂಗಮೇಶ ಜವಾದಿ, ಡಾ.ಬಸವರಾಜ ಸ್ವಾಮಿ, ಎಸ್.ಬಿ.ಕುಚಬಾಳ, ರಾಜಕುಮಾರ ಮಡಕಿ, ವಸಂತ ಹುಣಸನಾಳೆ, ಶಿವರಾಜ ಖಪಲೆ, ಶರದ ನಾರಾಯಣಪೇಟಕರ್, ನಾಗೇಶ ಸಂಗಮೆ, ಮಲ್ಲಮ್ಮ ಸಂತಾಜಿ, ಸವಿತಾ ಸಾಕೊಳೆ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಮಹಾರುದ್ರ ಡಾಕುಳಗೆ, ಧನರಾಜ ಆನೆಕಲೆ, ಬಸವರಾಜ ಹೆಗ್ಗೆ, ದೇವಿದಾಸ ಚಿಮಕೊಡೆ, ಪವನ ನಾಟೇಕಾರ್, ಸೇರಿದಂತೆ ಪರಿಷತ್ತಿನ ಸರ್ವ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಎಂದು ತಗಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಜಲಿಂಗಪ್ಪ ತಗಾರೆ

ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಕ.ಜಾ.ಪ. ಬೀದರ