ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ.ಎಚ್.ಕೆ.ಇ.ಉಪಾಧ್ಯಕ್ಷ ರಾಜಾ ಭೀಮಳ್ಳಿ

ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ.ಎಚ್.ಕೆ.ಇ.ಉಪಾಧ್ಯಕ್ಷ ರಾಜಾ ಭೀಮಳ್ಳಿ

ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ -ಎಚ್ ಕೆ ಇ ಉಪಾಧ್ಯಕ್ಷ ರಾಜಾ ಭೀಮಳ್ಳಿ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಎಮ್.ಆರ್.ಎಮ್.ಸಿ ವೈದ್ಯಕೀಯ ಕಾಲೇಜಿನಲ್ಲಿ 2009 ರಿಂದ 2018ರ ವರೆಗೆ ನಡೆದಿದೆ ಎನ್ನಲಾದ ಹಗರಣದ ಕುರಿತು ಸಂಸ್ಥೆಯ ಉಪಾದ್ಯಕ್ಷರರಾ ರಾಜಾ ಭೀಮಳ್ಳಿ, ರವರು ಪತ್ರಿಕಾಗೋಷ್ಠಿ ನಡೆಸಿ ದೂರಿ ಸತ್ಯಾಸತ್ಯತೆಯ ಬಗ್ಗೆ ಸ್ಪಷ್ಟನೆ ನೀಡಿದರು.

ರಾಜಾ ಭೀಮಳ್ಳಿಯವರು ಮಾತನಾಡಿ ಸಂಸ್ಥೆಯ ಅಭಿವೃದ್ಧಿ ಸಹಿಸದ ಕೆಲವು ಜನರು ಮತ್ತು ವೈಯುಕ್ತಿಕ ವೈಷಮ್ಯಗಳಿಗೆ ನೀಡಿರುವ ಸುಳ್ಳು ದೂರನ್ನು ಪೊಲೀಸ್ ಇಲಾಖೆ ಪರಿಗಣಿಸಿ ಸಂಸ್ಥೆಯ ಹಿರಿಯ ಸದಸ್ಯರುಗಳಾದ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ, ಹಿಂದಿನ ಅಧ್ಯಕ್ಷ ಬಸವರಾಜ ಭೀಮಳ್ಳಿ, ಡಾ.ಶರಣಬಸಪ್ಪ ಹರವಾಳ, ಡಾ. ಸಾಯಿನಾಥ ಆಂದೋಲ ಹಾಗು ಡಾ. ಮಲ್ಲಿಕಾರ್ಜುನ ಭಂಡಾರಿ ರವರುಗಳ ವಿರುದ್ದ ದಾಖಲಿಸಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ ಹಾಗು ದೂರಿನಲ್ಲಿ ಯಾವುದೇ ಸ್ಪಷ್ಟ ದಾಖಲೆ ಇಲ್ಲದಿರುವುದು ಹಾಗೂ ಸಂಬಂಧ ಪಟ್ಟ ವಿದ್ಯಾರ್ಥಿಗಳು ದೂರನ್ನು ನೀಡಿರುವುದಿಲ್ಲ. ದುರುದ್ದೇಶಪೂರ್ವಕವಾಗಿ ಈ ದೂರನ್ನು ತರಾತುರಿಯಲ್ಲಿ ದಾಖಲಿಸಿದ್ದು ಸಂಸ್ಥೆಗೆ ಮಸಿಬಳಿಯುವ ಕಾರ್ಯ ಎದೂರುದಾರರು ಮಾಡಿದ್ದಾರೆ. ಇಂತಹ ದೂರನ್ನು ಪರಿಗಣಿಸಿರುವ ಎ ಪೋಲೀಸ್ ಇಲಾಖೆ ಸಮಾಜದ ಹಿರಿಯ ವ್ಯಕ್ತಿಗಳಾದ ಒಬ್ಬ 4 ಬಾರಿ ವಿಧಾನ ಪರಿಷತ್ ಸದಸ್ಯರು. ಈ ಭಾಗದ ಬಹುದೊಡ್ಡ ಸಂಸ್ಥೆಯ 4 ಬಾರಿ ಅದ್ಯಕ್ಷರಾಗಿದ್ದ ಬಸವರಾಜ ಭೀಮಳ್ಳಿಯವರ ಮೇಲೆ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಹೊಂದಿರುವ ವೈದ್ಯರುಗಳ ( ಹಿಂದಿನ ಡೀನ್ ಗಳು ) ವಿರುದ್ಧ ದೂರು ದಾಖಲಿಸುವ ಮೊದಲು ಕನಿಷ್ಠ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು.

ಈ ಹಿಂದೆ ಕಾಲೇಜಿನಲ್ಲಿ ಓದುತಿದ್ದ 150 ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಪೋಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದಾಗಲೂ ಈ ಹಿಂದಿನ ಮ್ಯಾನೇಜ್‌ಮೆಂಟ್ ವಿರುದ್ಧ ಕೇಸ್ ದಾಖಲಿಸದೆ ಕುಂಟು ನೆಪ ಹೇಳಿ ಕಳಿಸಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ, ಆಗ ನೇರವಾಗಿ ವಿದ್ಯಾರ್ಥಿಗಳು ನೀಡಿದ ದೂರನ್ನೇ ಸ್ವೀಕರಿಸದ ಪೊಲೀಸರು, ಈ ವಿಷಯಕ್ಕೆ ಸಂಬಂಧ ಪಡದವರು ಸದರಿ ದೂರುದಾರರು ಸಂಸ್ಥೆಯ ಕಳೆದ ಎಲ್ಲಾ ಸದಸ್ಯರ ಸಾಮಾನ್ಯ ಸಭೆಗಳಲ್ಲಿ (General Body Meeting ) ಭಾಗವಹಿಸಿ ಈ ವಿಷಯ ಪ್ರಸ್ತಾಪಿಸ ಬಹುದಿತ್ತು. ಆದರೆ ಅವರು ದೂರಿನಲ್ಲಿ ಪ್ರಸ್ತಾಪಿಸಿದ 9 ವರ್ಷಗಳಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವುದಿಲ್ಲ ನಂತರದಲ್ಲೂ 6 ವರ್ಷ ಸುಮ್ಮನಿದ್ದು ಈಗ ದೂರು ದಾಖಲಿಸಿರುವುದು ಸಂಸ್ಥೆಯ ಹೆಸರು ಹಾಳು ಮಾಡುವ ಉದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ ಎಂದು ತಿಳಿಸಿದರು

ಮುಂದುವರೆದು 2009-2018 ಸ್ಟೇಫಂಡ್ ನೀಡಿರುವ ಕುರಿತು ಸ್ಪಷ್ಟ ದಾಖಲೆಗಳಿದ್ದು ಆ ಸಂದರ್ಭದಲ್ಲಿದ್ದ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಈ ಕುರಿತ ಯಾವುದೇ ತನಿಖೆಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ.2009-2018 ಅವಧಿಯಲ್ಲಿ ನೀಡಿದ ಹಾಗು ಪಡೆದ ಒಂದೊಂದು ರೂಪಾಯಿಗೂ ಲೆಕ್ಕವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 2018-2024 ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣ ದೂರಿಗೂ ಮತ್ತು 2009-2018 ದೂರಿನ ನಡುವಿನ ವ್ಯತ್ಯಾಸ ತಿಳಿಸಿದ ಉಪಾದುಕ್ಷರು

ಹಿಂದಿನ ಅದ್ಯಕ್ಷರ ಅವಧಿಯಲ್ಲಿ 2018-2024 ಅವಧಿಯಲ್ಲಿ ನಡೆದ ಹಗರಣದ ದೂರಿನಲ್ಲಿರುವಂತೆ ಯಾವುದೇ ವಿದ್ಯಾರ್ಥಿಯಿಂದ ಖಾಲಿ ಚೆಕ್ ಪಡೆದಿರುವುದಿಲ್ಲ ಹಾಗು ವಿದ್ಯಾರ್ಥಿಗಳ ಖಾತೆಯಿಂದ ಆಡಳಿತ ದುರುಪಯೋಗ ಪಡಿಸಿಕೊಂಡು ಹಣ ಹಿಂಪಡೆದಿಲ್ಲ. ಎಂದು ತಿಳಿಸಿದರು.ಸಂಸ್ತೆಯ ಕಾಯ್ದಶಿಗಳಾದ ಶ್ರೀ ಉದಯಕುಮಾರ್ ಚಿಂಚೋಳಿಯವರು ಮಾತನಾಡಿ 2009- 2018 ರ ಅವಧಿಯಲ್ಲಿ ರಾಜ್ಯ ಇತರ ಭಾಗದಲ್ಲಿ ಖಾಸಗೀ ವೈದ್ಯಕೀಯ ಕಾಲೇಜು ನೀಡುತಿದ್ದ ಸ್ಟೇಫಂಡ್ ಹಣಕ್ಕಿಂತ ಹೆಚ್ಚಿನ ಹಣ ನೀಡಿರುವ ಸಾರ್ಥಕತೆ ನಮಗಿದೆ. ಪ್ರತಿ ವರ್ಷ ಆಡಿಟ್ ನಡೆದಿದ್ದು ಅದರ ಪ್ರಕಾರ ಎಲ್ಲಾ ಎಲಿಜಿಬಲ್ ವಿದ್ಯಾರ್ಥಿಗಳಿಗೂ ಸ್ಟೇಫಂಡ್ ನೀಡಲಾಗಿದೆ ಹಾಗೆಯೇ ಈ ಸಮಯದಲ್ಲಿ ಯಾವುದೇ ವಿದ್ಯಾರ್ಥಿಗಳಿಂದ ಈ ಕುರಿತು ತಕರಾರು ಅರ್ಜಿ ದಾಖಲಾಗಿರುವುದಿಲ್ಲ ಹಾಗು ಎನ.ಎಮ್.ಸಿ ಮತ್ತು ವೈದ್ಯಕೀಯ ವಿಶ್ವ ವಿದ್ಯಾನಿಲಯವೂ ಯಾವುದೇ ಆಕ್ಷೇಪಣೆ ಸಲ್ಲಿಸಿರುವುದಿಲ್ಲ ಅಭಿವೃದ್ಧಿಯ ವಿಚಾರದಲ್ಲಿ ಚರ್ಚೆಗೆ ಬರಲು ದೈರ್ಯವಿಲ್ಲದೆ ಇವರುಗಳು ಸಂಸ್ಥೆಯ ಹಿತಾಸಕ್ತಿಯ ವಿರುದ್ಧ ಕೆಲಸ ಮಾಡುತಿದ್ದಾರೆ ಎಂದು ತಿಳಿಸದರು. ದೂರುದಾರರ ವಿರುದ್ಧ ಕಾನೂನೂ ಹೋರಾಟ ಮಾಡಲಾಗುವುದು. ಈಗಾಗಲೆ ಮಾನ ನಷ್ಟ ಮೊಕದ್ದಮೆ ಹೂಡಲು ತಯಾರಿ ನಡೆಲಾಗಿದೆ. ಇದು ಕೇವಲ ಹಿಂದಿನ ಅದ್ಯಕ್ಷರ ಅಥವ ಡೀನಗಳ ಮಾನ ಹಾನಿ ಮಾತ್ರವಲ್ಲ ಸಂಸ್ಥೆಯ ವಿರುದ್ಧ ಮಾಡಿರುವ ಪಿತೂರಿ ಎಂಬುವುದು ಸ್ಪಷ್ಟವಾಗಿದೆ ಎಂದೂ ತಿಳಿಸಿದರು.ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ್ ಪಾಟೀಲ್ ಮತ್ತು ಆಡಳಿತ ಮಂಡಳಿ ಸದಸ್ಯರಾದ ಡಾ. ಶಿವಾನಂದ ಮೇಳಕುಂದಿ ಉಪಸ್ಥಿತರಿದ್ದರು