ಆಳಂದ ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ: ಅಧಿಕಾರಿಯ ವಿರುದ್ಧ ಆರೋಪ, 18 ರಂದು ದೊಡ್ಡ ಪ್ರತಿಭಟನೆ: ಜುಬ್ರೆ

ಆಳಂದ ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ:  ಅಧಿಕಾರಿಯ ವಿರುದ್ಧ ಆರೋಪ, 18 ರಂದು ದೊಡ್ಡ ಪ್ರತಿಭಟನೆ: ಜುಬ್ರೆ

ಆಳಂದ ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ: 

ಅಧಿಕಾರಿಯ ವಿರುದ್ಧ ಆರೋಪ, 18 ರಂದು ದೊಡ್ಡ ಪ್ರತಿಭಟನೆ: ಜುಬ್ರೆ

ಆಳಂದ: ತಾಲೂಕಿನ ಕೃಷಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಬಿ.ಎಂ. ಬಿರಾದಾರ್ ಅವರ ವಿರುದ್ಧ ಭಾರೀ ಭ್ರಷ್ಟಾಚಾರದ ಆರೋಪಗಳು ಎದ್ದಿವೆ. 

ತಾಲೂಕಿನಲ್ಲಿ ಇತ್ತೀಚಿನ ಭಾರಿ ಮಳೆಯಿಂದ ಬೆಳೆ ನಾಶಗೊಂಡಿದ್ದರೂ ಗ್ರಾಮಗಳಿಗೆ ಭೇಟಿ ನೀಡದೆ ಕಚೇರಿಯಲ್ಲಿ ಕುಳಿತು ಅಪೂರ್ಣ ವರದಿ ಸಲ್ಲಿಸಿ ರೈತರಿಗೆ ವಂಚಿಸಿರುವುದು, ಖಾಸಗಿ ವ್ಯಕ್ತಿಗಳಿಗೆ ಅನಧಿಕೃತವಾಗಿ ಕಾರ್ಯಾವಲಯಗಳು ಮತ್ತು ಅನುದಾನಗಳನ್ನು ಹಂಚಿಕೊಟ್ಟಿರುವುದು ಸೇರಿದಂತೆ ಅನೇಕ ಆರೋಪಗಳನ್ನು ಮಂಡಿಸಿ, ಅಖಿಲ ಕರ್ನಾಟಕ ದಲಿತ ಸೇನೆ ತಾಲೂಕು ಘಟಕವು ಡಿ. 18ರಂದು ಬೆಳಗ್ಗೆ 11:30ರಿಂದ ಕೇಂದ್ರ ಬಸ್ ನಿಲ್ದಾಣದಿಂದ ದೊಡ್ಡ ಪ್ರತಿಭಟನೆ ನಡೆಸಲು ಘೋಷಿಸಿದೆ. 

ಕೃಷಿ ಸಂಚೈನಿ ಈ ಹಣದ ಪಾವತಿಯನ್ನು ತಡೆಹಿಡಿಯಬೇಕು ಮತ್ತು ಅಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಸಂಘಟನೆಯ ಅಧ್ಯಕ್ಷ ಭೋಜರಾಜ್ ಟಿ. ಜುಗರಿ ಅವರು ಒತ್ತಾಯಿಸಿದ್ದಾರೆ.

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಜುಭ್ರೆ ಅವರು, "ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ತಾಲೂಕಿನಲ್ಲಿ ಬಾರಿ ಮಳೆಯಿಂದ ರೈತರ ಸಂಪೂರ್ಣ ಬೆಳೆ ನಾಶಗೊಂಡಿತು. ಆದರೂ ಬಿ.ಎಂ. ಬಿರಾದಾರ್ ಅವರು ಒಂದು ಗ್ರಾಮಕ್ಕೂ ತೆರಳದೆ ಕಚೇರಿಯಲ್ಲಿ ಕುಳಿತು 'ಸಂಪೂರ್ಣ' ವರದಿ ಸಲ್ಲಿಸಿ ರೈತರಿಗೆ ನ್ಯಾಯವನ್ನು ತಪ್ಪಿಸಿದ್ದಾರೆ. ಹೆಚ್ಚುವರಿಯಾಗಿ ಐದು ಹುದ್ದೆಗಳನ್ನು ಇವರು ಅನಧಿಕೃತವಾಗಿ ನೇಮಕವಾಗಿರುವುದು ಇದರಲ್ಲೇ ಒಂದು ಭಾಗ" ಎಂದು ಆರೋಪಿಸಿದರು.

ಪ್ರಸ್ತುತ 2025-26 ಸಾಲಿನಲ್ಲಿ 'ವಾಟರ್‌ಶೆಡ್ ಪಿಎಂಕೆಎಸ್‌ವೈ 2.0' ಮಾದರಿ ಜಲಾನಯನ ಯೋಜನೆಯಡಿಯಲ್ಲಿ ಅಂದಾಜು ಪತ್ರಿಕೆ ತಯಾರಿಸಿ, ಬಿಲ್ ಅನುಮೋದಿಸಿ ಹಣ ಪಾವತಿಸುವ ಅಧಿಕಾರವನ್ನು ಖಾಸಗಿ ವ್ಯಕ್ತಿಗೆ ನೀಡಿರುವುದರ ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. ಈ ಯೋಜನೆಗೆ 10 ಕೋಟಿ ರೂಪಾಯಿ ಅನುದಾನ ಮೀಸಲಾಗಿತ್ತು. ಆದರೆ ಈಗಾಗಲೇ 2 ಕೋಟಿ ರೂಪಾಯಿಯ ಕಾಮಗಾರಿಯನ್ನು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಮ್ಮ ಬೆಚ್ಚಗಿನವರಿಗೆ ನೀಡಿ ಮುಗಿಸಿರುವ ಮಾಹಿತಿ ನಮ್ಮ ಬಳಿ ಇದೆ. ಈ ಹಣದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಇದರ ಪಾವತಿಯನ್ನು ತಡೆಯಬೇಕು. ಬಿರಾದಾರ್ ಅವರನ್ನು ಕೂಡಲೇ ಸಸ್ಪೆಂಡ್ ಮಾಡಿ ವಿಚಾರಣೆ ನಡೆಸಬೇಕು" ಎಂದು ಜುಬ್ರೆ ಒತ್ತಿ ಹೇಳಿದರು. 

ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಎಲ್ಲ ರೈತರು, ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕರನ್ನು ಆಹ್ವಾನಿಸಿರುವ ಅವರು, "ಈ ಭ್ರಷ್ಟಾಚಾರದಿಂದ ರೈತರು ಮತ್ತು ದಲಿತ ಸಮುದಾಯವೇ ಹಾನಿಗೊಳಗಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಜೈಕಾಂತ್ ವಾಗ್ಮೊರೆ, ದಿಲೀಪ್ ಬಂಡಾರಿ, ದೇವೇಂದ್ರ ಹಂಗರಗಿ, ಹೊಂದುರ್ಗಿ ಬಸುರಾಜ್ ಕಾಂಬಳೆ, ದತ್ತಾತ್ರೇಯ ಕೊಚ್ಚಿ, ರಾಜಕುಮಾರ್ ಸಿಂಗೆ, ಪ್ರವೀಣ್ ತೊಡೋಳ, ಶರಣಬಸಪ್ಪ ಕಾಳಕಿಂಚಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.