ವಿವಿಧ ಬೇಡಿಕೆ ಈಡೇರಿಕೆಗೆ ತಾಲೂಕಾ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ನಿರಂತರ ಧರಣಿ

ವಿವಿಧ ಬೇಡಿಕೆ ಈಡೇರಿಕೆಗೆ ತಾಲೂಕಾ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ನಿರಂತರ ಧರಣಿ

ವಿವಿಧ ಬೇಡಿಕೆ ಈಡೇರಿಕೆಗೆ ತಾಲೂಕಾ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ನಿರಂತರ ಧರಣಿ

ನವೆಂಬರ್ 4 ರಂದು ಕೊಟ್ಟ ಭರವಸೆಯಂತೆ ನಡೆದುಕೊಳದ ತಾಲೂಕ ಆಡಳಿತ : ಆರೋಪ 

ಚಿಂಚೋಳಿ : ಪುರಸಭೆ ವ್ಯಾಪ್ತಿಯ ವಿವಿಧ ಯೋಜನೆಗಳಡಿ ಎಸ್.ಎಂ. ಕನ್ಸ್ಟ್ರಕ್ಷನ್ ನಿರ್ಮಿಸುತ್ತಿರುವ ಮನೆಗಳು ಕಳಪೆ ಮಟ್ಟದಲ್ಲಿ ನಿರ್ಮಾಣ ನಡೆಸುತ್ತಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ನವೆಂಬರ್ 4 ರಂದು ನಡೆಸಿದ ಸಾಂಕೇತಿಕ ಧರಣಿಯಲ್ಲಿ ಅಧಿಕಾರಿಗಳು ನೀಡಿದ ಭರವಸೆಯಂತೆ ಕ್ರಮಕೈಗೊಳದ ಅಧಿಕಾರಿಗಳ ಕ್ರಮ ಖಂಡಿಸಿ, ಸಂಘಟನೆಯ ಹೋರಾಟಗಾರ ಕಾಶಿನ್ನಾಥ ಸಿಂಧೆ ನೇತೃತ್ವದಲ್ಲಿ ಚಿಂಚೋಳಿ ತಾಲೂಕಾ ನಾಗರೀಕ ಹಿತರಕ್ಷಣಾ ವೇದಿಕೆ ನಿರಂತರ ಧರಣಿ ನಡೆಸಲು ಮುಂದಾಗಿದೆ. 

ಸರ್ವೆ ನಂ 311 ರಲ್ಲಿ 200 ಮನೆಗಳು ನಿರ್ಮಿಸಿ 15 ವರ್ಷ ಕಳೆದರೂ ಮೂಲ ಫಲಾನುಭವಿಗಳಿಗೆ ಹಂಚಿಕೆ ಮಾಡದೇ ಅಧಿಕಾರಿಗಳು ಬೇಜವಾಬ್ದಾರಿತನದಿಂದಾಗಿ ನಿರ್ಮಿಸಿದ ಮನೆಗಳು ಪಾಳು ಬಿದಿದ್ದು ವಸತಿಗೆ ಯೋಗ್ಯವಲ್ಲ ದ ಸ್ಥಿತಿಗೆ ತಲುಪಿದ್ದು, ಸುಸ್ತಿಗೆ ತಂದು ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು.  

2018-19ನೇ ಸಾಲಿನ ಕರ್ನಾಟಕ ಕೊಳವೆ ನಿರ್ಮೂಲನ ಮಂಡಳಿ ನಿರ್ಮಿಸಿದ 250 ಮನೆಗಳನ್ನು ಪೂರ್ಣಗೊಳಿಸದೇ ನಿವೇಶನ ಮಾಲೀಕರಿಂದ ಹಣ ವಸೂಲಿ ಮಾಡಲಾಗುತ್ತಿದ್ದು, ಗುತ್ತಿಗೆ ದಾರರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದ್ದೇಶಿಸಬೇಕು. 2೦22ನೇ ಸಾಲಿನಲ್ಲಿ ಸರ್ವೆ. ನಂ. 186/2 ಮತ್ತು ಸರ್ವೆ. ನಂ. 311 ರಲ್ಲಿ ಪಿ.ಎಂ.ಎ.ವೈ (ಯು ) ಮತ್ತು ಎಚ್.ಎಫ್.ಎ ಯೋಜನೆಯಡಿಯಲ್ಲಿ 10 ಎಕರೆ ಜಮೀನಿನಲ್ಲಿ 1393 ಮನೆಗಳು ನಿರ್ಮಿಸಲು ಉದ್ದೇಶಿಸಿರುವ ಕಟ್ಟಡ ಕಾಮಗಾರಿ ಪ್ರಾರಂಭಿಸದ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿ, ಕಟ್ಟಡ ಕಾಮಗಾರಿ ಪ್ರಾರಂಭಿಸಿ, ಪೂರ್ಣಗೊಳಿಸಲು ಕ್ರಮಕೈಗೊಳಬೇಕು.

ವಾರ್ಡ್ ನಂ. 1 ರಲ್ಲಿ ನಿರ್ಮಿಸಲಾದ ಮನೆಗಳಿಗೆ 20 ವರ್ಷ ಕಳದರು ಫಲಾನುಭವಿಗಳಿಗೆ ಹಕ್ಕು ವಿತರಣಮಾಡಿರುವುದಿಲ್ಲ ಮತ್ತು ಪುರಸಭೆ ಕಾರ್ಯಾಲಯದಲ್ಲಿ ಸಂಬಂಧಪಟ್ಟ ದಾಖಲೆಗಳು ಲಭ್ಯವಿಲ್ಲವೆಂದು ಅಧಿಕಾರಿಗಳು ಉತ್ತರ ನೀಡುತ್ತಿರುವುದಕ್ಕೆ ವೇದಿಕೆ 2025 ನವೆಂಬರ್ 4 ರಂದು ತಹಸೀಲ್ ಕಛೇರಿ ಮುಂದೆ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿತ್ತು. ಬೇಡಿಕೆ ಈಡೇರಿಸುವ ಭರವಸೆ ತಾಲೂಕ ಆಡಳಿತ ನೀಡಿದರಿಂದ ಧರಣಿ ಹಿಂಪಡೆದು 50 ದಿನಗಳು ಕಳೆದರು ಇಲ್ಲಿಯವರೆಗೆ ಯಾವುದೇ ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ನಿರಂತರ ಧರಣಿಗೆ ಕೈಗೊಳಲಾಗಿದೆ. ಹೀಗಾಗಿ ಕಳಪೆ ಕಾಮಗಾರಿ ಮಾಡುತ್ತಿರುವ ಕರ್ನಾಟಕ ಕೊಳಗೇರಿ ನಿರ್ಮೂಲನ ಅಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಎಲ್ಲಾ ಮನೆಗಳ ಸಂಪೂರ್ಣ ತನಿಖ ನಡೆಸಬೇಕು ಹಾಗೂ ಎಸ್. ಎಂ. ಕನ್ಸ್ಟ್ರಕ್ಷನ್ ಕಳಪೆ ಮಟ್ಟದಲ್ಲಿ ನಿರ್ಮಿಸುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಈಡೇರಿಕೆಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡಿ ಈಡೇರಿಸುವರೆಗೂ ನಿರಂತರ ಧರಣಿ ನಡೆಯಲಿದೆ ಎಂದು ಕಾಶಿನಾಥ ಶಿಂಧೆ ತಿಳಿಸಿದ್ದಾರೆ.

ಹಣಮಂತ ಪೂಜಾರಿ, ಅಂಕಿತಾ ಕಮಲಾಕರ, ವಿಠಲ್ ಕುಸಾಳೇ, ಉಲ್ಲಾಸ ದೇಗಲ್ಮಡಿ, ರೇವಣಸಿದ್ಧ, ಶಶಿಕುಮಾರ ಮೇತ್ರಿ ಅವರು ಶಿಂಧೆ ಕೈಗೊಂಡಿರುವ ನಿರಂತರ ಧರಣಿಗೆ ಬೆಂಬಲಿಸಿದರು.