ಕಲಬುರಗಿಯ ಚೌಡೇಶ್ವರ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಚೌಡೇಶ್ವರ ಶಾಲೆಯಲ್ಲಿ ಗುರುವಂದನಾ ಸಂಭ್ರಮ

ಕಲಬುರಗಿಯ ಚೌಡೇಶ್ವರ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಚೌಡೇಶ್ವರ ಶಾಲೆಯಲ್ಲಿ ಗುರುವಂದನಾ ಸಂಭ್ರಮ

ಕಲಬುರಗಿಯ ಚೌಡೇಶ್ವರ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು.

ಚೌಡೇಶ್ವರ ಶಾಲೆಯಲ್ಲಿ ಗುರುವಂದನಾ ಸಂಭ್ರಮ

ಕಲಬುರಗಿ: ಬ್ರಹ್ಮಪುರ ಬಡಾವಣೆಯ ಚೌಡೇಶ್ವರ ಕಾಲೋನಿಯಲ್ಲಿ ಚೌಡೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು. ಶಾಲೆಯ ಸಂಸ್ಥಾಪಕ ಮಲ್ಲೇಶಪ್ಪ ಶಕ್ತಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಸಿ ನೆಟ್ಟು ದೀಪ ಬೆಳಗಿಸುವ ಮೂಲಕ ಶಿಕ್ಷಕರಿಗೆ ಗುರುವಂದನಾ ಸಲ್ಲಿಸಲಾಯಿತು.

ಗುರುಪಾದಲಿಂಗೇಶ್ವರ ವಿಜ್ಞಾನ ಪಿಯು ಕಾಲೇಜಿನ ಅಧ್ಯಕ್ಷ ವಾದಿರಾಜ ವ್ಯಾಸಮುದ್ರ ಮಾತನಾಡಿ, ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬAತೆ ಗುರು-ಶಿಷ್ಯರ ಬಾಂಧವ್ಯ ವೃದ್ಧಿಯಾಗಬೇಕು ಎಂದರು.

ಶಿಕ್ಷಕ ವೃಂದಕ್ಕೆ ಸನ್ಮಾನಿಸಲಾಯಿತು ಹಳೆಯ ವಿದ್ಯಾರ್ಥಿಗಳು ಹಿಂದಿನ ಘಟನೆಗಳ ಬಗ್ಗೆ ಸ್ಮರಿಸಿಕೊಂಡರು. ಹಳೆ ವಿದ್ಯಾರ್ಥಿ ಉಮಾಕಾಂತ ಮಧುರ ಸಂಗೀತ ರಸದೌತಣ ಬಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ಸ್ತಿçÃರೋಗ ಮತ್ತು ಪ್ರಸ್ತುತಿ ವೈದ್ಯೆ ಡಾ. ಇಂದಿರಾ ಶಕ್ತಿ, ಇಂದಿನ ಶಿಕ್ಷಕರಾದವರು ಸಮಯಪ್ರಜ್ಞೆ, ಶಿಸ್ತು ಮತ್ತು ಸಮರ್ಪಣಾ ಭಾವದಿಂದ ಬೋಧಿಸಿದರೆ ಭವ್ಯ ಭಾರತ ಕಟ್ಟಬಹುದು. ಗುಣಾತ್ಮಕ ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ದೇಶದ ಆಸ್ತಿಯಾಗುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕರು ಶೈಕ್ಷಣ ಕ ವಲಯದಲ್ಲಿ ಅಪ್ಡೇಟ್, ಉತ್ತಮ ಜ್ಞಾನ ಸಂಪಾದಿಸಿ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು ಎಂದು ಸಲಹೆ ನೀಡಿದರು.

ಹಳೆ ವಿದ್ಯಾರ್ಥಿಗಳಾದ ಶಕುಂತಲಾ ರ‍್ಯಾಕಾ, ಗುರುದೇವ ದೊಡ್ಡೆನ್ ನಿರೂಪಿಸಿದರು. ಅರವಿಂದ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಮಹಾಗಾಂವ್ ಸ್ವಾಗತಿಸಿದರು. ಶರಣಗೌಡ ಬಿರಾದಾರ್ ವಂದಿಸಿದರು.