ಕಲಾ ಮಂಡಳದಲ್ಲಿ ವಚನ ಗಾಯನ-ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಕಲಾ ಮಂಡಳದಲ್ಲಿ ವಚನ ಗಾಯನ-ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಕಲಬುರಗಿ : ಶರಣರ ರಚಿಸಿದ ವಚನಗಳು ನಮ್ಮ ನಾಡಿನಲ್ಲಿ ತಮ್ಮದೇ ಆದ ಸಾಂಸ್ಕೃತಿಕ-ಸಾಹಿತ್ಯ ಇತಿಹಾಸ ಹೊಂದಿದೆ ಎಂದು ಮಡಿವಾಳಯ್ಯ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಲಾ ಮಂಡಲದಲ್ಲಿ ಶ್ರೀ ಬಸವ ಜನಪದ ಸಂಗೀತ ಕಲಾ ಸಂಘದ ವತಿಯಿಂದ ವಚನ ಗಾಯನ ಹಾಗೂ ಸಾಂಸ್ಕೃತಿಕ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಾದಿ ಶರಣರು ವಚನಗಳ ಮೂಲಕ ಉತ್ತಮ ಸಂಸ್ಕೃತಿಯನ್ನು ಬದುಕಿ-ಬಾಳಲು ಕಲಿಸಿಕೊಟ್ಟ, ತನ್ನಂತೆಯೇ ಇತರರನ್ನೂ ಗೌರವಿಸಬೇಕು ಎನ್ನುವ ಮಾನವೀಯ ಮೌಲ್ಯಗಳನ್ನು ವಚನಗಳಲ್ಲಿ ನೋಡಬಹುದು ಎಂದರು.
ಶ್ರೀ ಬಸವ ಜನಪದ ಸಂಗೀತ ಕಲಾ ಸಂಘದ ಅಧ್ಯಕ್ಷ ಬಸವಣಪ್ಪ ಪಾಟೀಲ್ (ಜಿಡಗಾ), ಮುತ್ತಣ್ಣ ಬಚ್ಚನ್, ಶಿಲ್ಪಾ ಪಾಟೀಲ್, ರತ್ನ ಲಿಲಾವತಿ, ಶರಣಮ್ಮ, ಗಣೇಶ ಬಿರಾದಾರ, ಶ್ವೇತಾ ಪಾಟೀಲ, ಅಭಿನವ ಪಾಟೀಲ, ಸಂಗೀತ ಕಲಾವಿದರಾದ ಸಂತೋಷ ಕೋಡ್ಲ, ಮಹೇಶ ಹೀರೆಮಠ, ಹಣಮಂತ ಬಳುರಗಿ ಇದ್ದರು.