ವಾಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ಶ್ರೀ ವೀರೇಶ ಶರಣರ ಪುರಾಣ ಪಾರಂಭ

ವಾಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ಶ್ರೀ ವೀರೇಶ ಶರಣರ ಪುರಾಣ ಪಾರಂಭ

ವಾಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ಶ್ರೀ ವೀರೇಶ ಶರಣರ ಪುರಾಣ ಪಾರಂಭ

ವಾಡಿ: ಪಟ್ಟಣದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಾಲತವಾಡ ಶ್ರೀ ವೀರೇಶ ಶರಣರ ಪುರಾಣ ದಿನಾಂಕ 12/02/25 ರಿಂದ 26/02/25 ರವರೆಗೆ ನೇರವೇರುವುದು ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ ತಿಳಿಸಿದ್ದಾರೆ.

ಈ ಪುರಾಣ ಕಾರ್ಯಕ್ರಮದಲ್ಲಿ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು,

ಪುರಾಣ,ಪ್ರವಚನಕಾರರಾಗಿ ಶಿವಪೂರದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು,ಸಂಗೀತಕಾರರಾಗಿ ಮಹೇಶ್ ನರಬೋಳ,ತಬಲಾವಾದಕರಾಗಿ ತೋಟೇಂದ್ರ ಕರದಾಳ ಕಲ್ಲಾ ಭಾಗವಹಿಸುವರು.

ಪ್ರತಿದಿನ ಸಂಜೆ 07:00ಗಂಟೆ ಯಿಂದ ರಾತ್ರಿ 10:00ಗಂಟೆವರೆಗೆ ಪುರಾಣ ಕಾರ್ಯಕ್ರಮ ನಡೆಯುವುದು,ಫೆ.26ರ ಮಹಾ ಶಿವರಾತ್ರಿ ದಂದು ಸಂಜೆ 06:00 ಗಂಟೆಗೆ ಪುರಾಣ ಕಾರ್ಯಕ್ರಮದ ಮಹಾ ಮಂಗಲ ಮತ್ತು ಲಕ್ಷದೀಪೋತ್ಸವ ಜರುಗುವುದು ಎಂದು ಹೇಳಿದ್ದಾರೆ.