ರಂಗಾಯಣದಲ್ಲಿ ಸೀತಾ ದೇವಿ ಜೊತೆ ಮಾತುಕತೆ

ರಂಗಾಯಣದಲ್ಲಿ ಸೀತಾ ದೇವಿ ಜೊತೆ ಮಾತುಕತೆ

ರಂಗಾಯಣದಲ್ಲಿ ಸೀತಾ ದೇವಿ ಜೊತೆ ಮಾತುಕತೆ 

ಇಂದು 6ಗಂಟೆಗೆ ಕಲಬುರಗಿ ರಂಗಾಯಣದ ಸಭಾಂಗಣ, ರಂಗಾಯಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ರಂಗದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಿರಿಯರ ಮನದಾಳದ ಮಾತುಗಳು ಮತ್ತು ಸಂವಾದ ಕಾರ್ಯಕ್ರಮವನ್ನು ಶ್ರೀ ಮತಿ ಸೀತಾ ಸಿ.ಮಲ್ಲಾಬಾದಿ ಹಿರಿಯ ರಂಗಕರ್ಮಿ ಅವರು 1957ರ ಆಗಸ್ಟ್ 03 ರಂದು ಕಲಬುರಗಿಯಲ್ಲಿ ಜನಿಸಿದರು. ಇವರು ಬಿ.ಎಸ್ಪಿ, ಎಂ.ಎ. ಎಂ. ಎಡ್ ವಿದ್ಯಾಭ್ಯಾಸ ಮುಗಿಸಿರುವ ಇವರು 24 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕನ್ನಡ ಪ್ರಭ, ಇಂಡಿಯನ್ ಎಕ್ಸಪ್ರೆಸ್, ಕ್ರಾಂತಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆಸಲ್ಲಿಸಿರುತ್ತಾರೆ. ಈ ಮಧ್ಯೆ ಅವರು ನಾಟಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಅವುಗಳಲ್ಲಿ ಮುಖ್ಯವಾದವು ಶ್ರೀರಂಗರು ರಚಿಸಿದ ಗಿರಡ್ಡಿಗೋವಿಂದರಾಜ ನಿರ್ದೇಶಿಸಿದ "ಕೇಳು ಜನಮೇಜಯ", ಡಾ. ಚಂದ್ರಶೇಖರ ಕಂಬಾರರು ರಚಿಸಿರುವ "ಜೈಸಿದ್ಧನಾಯ್ಕ", ಶ್ರೀಮತಿ ಪ್ರೇಮಾ ಕಾರಂತ ನಿರ್ದೇಶನದ, "ನಾಯಿಕಥೆ", ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿ ಅವರ ರಚನೆಯ ಶ್ರೀ ಹೇಮಂತ ಕೊಲ್ಲಾಪೂರೆ ನಿರ್ದೇಶಿಸಿರುವ ಮಂಥರಾ", ಗ್ರೀಕ ನಾಟಕವಾದ "ಮೀಡಿಯಾ", ಇತ್ಯಾದಿ ನಾಟಕಗಳು ಅಭಿನಯಿಸಿದ್ದಾರೆ.

ಕಲಬುರಗಿಯ ಆಕಾಶವಾಣಿಯಲ್ಲಿ 1975ರಲ್ಲಿ ಬಿ-ಗ್ರೇಡ್ ಕಲಾವಿದೆಯಾಗಿ 32 ವರ್ಷ ಕಾಲ ರೇಡಿಯೋ ನಾಟಗಳಿಗೆ ಧ್ವನಿ ನೀಡಿದ್ದಾರೆ. ಇವರು ಅಭಿನಯಿಸಿದ ಅನೇಕ ನಾಟಕಗಳು ದೂರದರ್ಶನದಲ್ಲಿ ಪ್ರಸಾರವಾಗಿದೆ. ಅವುಗಳಲ್ಲಿ ಅವ್ವ, ಪಾರ್ಥೇನಿಯಂ, ಸಿಂಪಲ್ ಮದುವೆ ಮುಂತಾವುಗಳು ಅಲ್ಲದೇ 2019ರಲ್ಲಿ ಶ್ರೀ ಗಿರೀಶ ಕಾಸರವಳ್ಳಿ ಅವರ ನಿರ್ದೇಶನದ “ಗತಿ" ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.

 ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆಗಾಗಿ ಕರ್ನಾಟಕ ಸರ್ಕಾರದ , ನಾಟಕ ಅಕಾಡೆಮಿ 2021 ನೇ ಸಾಲಿನ “ಪದ್ಮಶ್ರೀ ಚಿಂದೋಡಿಲೀಲಾ ದತ್ತಿ ನಿಧಿ" ಪುರಸ್ಕಾರ ನೀಡಿ ಗೌರವಿಸಿದೆ

ಇವರ ಜೊತೆ ರಂಗಾಯಣದ ನಿರ್ದೇಶಕರಾದ ಡಾ. ಸುಜಾತ ಜಂಗಮಶೆಟ್ಟಿ ಅವರು ರಂಗದಂಗಲದಲ್ಲಿ ಮಾತುಕತೆ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. ಈ ಕಾರ್ಯಕ್ರಮಕ್ಕೆ ರಂಗಾಸಕ್ತರು ಪಾಲ್ಗೊಂಡು ಯಶಸ್ವಿಗೊಳಿಸಲು ರಂಗಾಯಣದ ಉಪನಿರ್ದೇಶಕರಾದ ಜಗದೀಶ್ವರಿ ನಾಸಿ ಅವರು ತಿಳಿಸಿದರು.