ಶರಣಗೌಡ ಬಿ ಪಾಟೀಲ ತಿಳಗೂಳ

ಮೂಲತಃ ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಹನ್ನೆರಡನೇ ಜುಲೈ 1974 ರಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಇವರು ಗ್ರಾಮೀಣ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಜಾತ್ರೆ ಉತ್ಸವ ಆಟೋಟ. ಧಾರ್ಮಿಕ ಸಾಮಾಜಿಕ ಆಚರಣೆ , ರೈತಾಪಿ ಜನರ ಬದುಕು ಬವಣೆ ಹತ್ತಿರದಿಂದ ನೋಡಿದವರಾಗಿದ್ದಾರೆ. ರೈತರು, ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತಿಳಿದು ತಮ್ಮ ಬರವಣಿಗೆಯ ಮೂಲಕ ಬೆಳಕು ಚಲ್ಲುವ ಪ್ರಯತ್ನ ಮಾಡಿದ್ದಾರೆ.
ಬಾಲ್ಯದಿಂದಲೇ ಹೊಲ ನೆಲ ಪ್ರೀತಿಸುತ್ತಾ ಬೆಳೆದಿದ್ದರಿಂದ ಗ್ರಾಮೀಣ ಬದುಕಿನ ವಾಸ್ತವಿಕ ಸ್ಥಿತಿಗತಿ ಚನ್ನಾಗಿ ಅರಿತಿದ್ದಾರೆ ಗ್ರಾಮೀಣ ಪರಿಸರದ ಪ್ರಭಾವ ಇವರ ಸಾಹಿತ್ಯದ ಮೇಲಾಗಿರುವದು. ಕಂಡು ಬರುತ್ತದೆ.
ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿ ಪ್ರೌಢ ಶಿಕ್ಷಣ ನೆರೆಯ ಗ್ರಾಮದಲ್ಲಿ ಮುಗಿಸಿ ಕಲ್ಬುರ್ಗಿ ನಗರದಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಮುಂದೆ ಬಿ ಎಡ್ ಮತ್ತು, ಎಂ ಎ ಪದವಿ ಪಡೆದುಕೊಂಡಿದ್ದಾರೆ 2004 ರಲ್ಲಿ ಪ್ರೌಢ ಶಾಲಾ ಶಿಕ್ಷಕರ ಸಿ.ಇ.ಟಿ ಪರೀಕ್ಷೆ ಪಾಸಾಗಿ ಹೈಸ್ಕೂಲ ಶಿಕ್ಷಕ ವೃತ್ತಿಗೆ ಸೇರಿಕೊಂಡು ವೃತ್ತಿ ಜೀವನ ಆರಂಭಿಸಿದರು.
ಸುಮಾರು ಇಪ್ಪತ್ತು,ವರ್ಷಗಳಿಂದ ಶಿಕ್ಷಕ ವೃತ್ತಿ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಿಕ್ಷಕ ಎಂದರೆ ಬರೀ ಕಲಿಸುವದು ಅಷ್ಟೇ ಅಲ್ಲ ಕಲಿಯುವದು ಕೂಡ ಆಗಿರುತ್ತದೆ ಅನ್ನುವದು ಇವರ ಬಲವಾದ ನಂಬಿಕೆ.
ವಿದ್ಯಾರ್ಥಿ ದೆಸೆಯಿಂದಲೇ ಓದುವ ಬರೆಯುವ ಹವ್ಯಾಸ ಬೆಳೆಸಿಕೊಂಡು ಆಕಾಶವಾಣಿ ಸ್ಥಳೀಯ ಪತ್ರಿಕೆಗಳಲ್ಲಿ ತಮ್ಮ ಕಥೆ ಕವನ ಪ್ರಕಟಿಸುತ್ತಾ ಬಂದಿದ್ದಾರೆ.
ಶಿಕ್ಷಕ ವೃತ್ತಿಗೆ ಸೇರಿದ ಮೇಲೆ ತಮ್ಮ ಬರಹಕ್ಕೆ ಹೆಚ್ಚಿನ ಒತ್ತು ನೀಡಿ ಕಥೆ ,ಕಾದಂಬರಿ, ಲಲಿತ ಪ್ರಬಂಧ ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಸೃಜನಶೀಲ ಕೃತಿಗಳು ರಚಿಸಿ ಓದುಗರ ಇವರ ಸಾಹಿತ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಇವರ ಪ್ರಮುಖ ಕೃತಗಳೆಂದರೆ ಹಿಟ್ಟಿನ ಗಿರಣಿ ಕಿಟ್ಟಪ್ಪ ಲಲಿತ ಪ್ರಬಂಧ ಮೊಟ್ಟ ಮೊದಲ ಕೃತಿಯಾಗಿದ್ದು ಇದನ್ನು ಬಸವ ಪ್ರಕಾಶನ ಪ್ರಕಟಿಸಿದೆ . ಈ ಕೃತಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು,ಕೊಡಮಾಡುವ ಡಿ ಮಾಣಿಕರಾವ ದತ್ತಿ ಪ್ರಶಸ್ತಿ ಅಂದಿನ ಅಧ್ಯಕ್ಷರಾದ ಮನು ಬಳಿಗಾರ ನೀಡಿ ಗೌರವಿಸಿದ್ದಾರೆ. ನಂತರ ತೊರೆದ ಗೂಡು. ಕಾಳುಕಟ್ಟದ ಕಣ್ಣಿರು. ನೆಲದ ನಂಟು, ಭೀಮಾ ತೀರದ ತಂಗಾಳಿ ಕೆಂಪು ಶಲ್ಯ ಫಕೀರೂ ಹಾಗು ಇತರ ಕಥೆಗಳು, ನೋಟಿನ ಚೂರು ಮತ್ತು ಇತರ ಕಥೆಗಳು, ಅಳಿಯ ದೇವೋಭವ ಲಲಿತ ಪ್ರಬಂಧ. ಷ್ಯಾಶನ ಪರಮಾತ್ಮ ಮತ್ತು ಇತರ ಕಥೆಗಳು,ಕೃತಿ ಕೂಡ ರಚಿಸಿದ್ದಾರೆ.
ಇವರ ಕೃತಿಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳೂ ಲಭಿಸಿವೆ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯ ಜೊತೆಗೆ ಕಾಳು ಕಟ್ಟದ ಕಣ್ಣೀರು ಕಾದಂಬರಿಗೆ ಕನ್ನಡ ನಾಡು ಲೇಖಕ ಓದುಗರ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪ್ರಶಸ್ತಿ, ಭೀಮಾ ತೀರದ ತಂಗಾಳಿ ಕೃತಿಗೆ ಗುರುಕುಲ ಟ್ರಸ್ಟಿನ ಸಾಹಿತ್ಯ ಶರಭ ಪ್ರಶಸ್ತಿ , ಫ್ಯಾಷನ ಪರಮಾತ್ಮ ಮತ್ತು ಇತರ ಕಥೆಗಳು ಸಂಕಲನಕ್ಕೆ ಸುಭಾಷಚಂದ್ರ ಪಾಟೀಲ ಜನ ಕಲ್ಯಾಣ ಟ್ರಸ್ಟ ಪಾಳಾ ಕೊಡಮಾಡುವ ಬಸವ ಪ್ರಶಸ್ತಿಯೂ ಲಭಿಸಿದೆ ಅದಲ್ಲದೆ ಕಲ್ಯಾಣ ಕರ್ನಾಟಕ ಉತ್ಸವದ ಸಾಧಕ ಪ್ರಶಸ್ತಿ. ವಿಶ್ವ ಕನ್ನಡ ಟ್ರಷ್ಟ ಚಿತ್ರದುರ್ಗ ಇವರಿಂದ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ , ಕಥಾ ಪುರಸ್ಕಾರವೂ ಲಭಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿಯವರಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ ಇವರ ಬರವಣಿಗೆ ನಿರಂತರವಾಗಿ ಮುಂದುವರೆದು ಆಗಾಗ ಬುಕ್ ಬ್ರಹ್ಮ, ಅವಧಿ, ಕೆಂಡಸಂಪಿಗೆ, ಆಕೃತಿ ಕನ್ನಡ, ಪಂಜು, ಸುರಹೊನ್ನೆ , ನಸುಕು, ಮತ್ತಿತರ ಈ ಮ್ಯಾಗ್ಝಿನಗಳಲ್ಲಿ ಕಥೆ, ಪ್ರಬಂಧ, ಕವಿತೆ, ಲೇಖನ ಪ್ರಕಟಿಸುತ್ತಿದ್ದಾರೆ.
ಶರಣಗೌಡ ಬಿ ಪಾಟೀಲ ತಿಳಗೂಳ. ಮನೆ ನಂ.08 ಬಸವಶ್ರಿನಿಲಯ ಜಗಜ್ಯೋತಿ ನಗರ ಸಾಯಿಮಂದಿರ ರಸ್ತೆ ಕಲ್ಬುರ್ಗಿ 585104 . 9945459175