ರಘುಶಂಖ ಭಾತಂಬ್ರ
ಸಾಹಿತ್ಯದ ಬೆಳಕು ರಘುಶಂಖ ಭಾತಂಬ್ರ
ಸಾಹಿತಿಗಳ ಬಗ್ಗೆ ವಿವರಣೆ ನೀಡುವ ಮುಂಚೆ ಸ್ವಲ್ಪ ಅವರ ಹುಟ್ಟುರಿನ ಹಿನ್ನಲೆ ಬಗ್ಗೆ ಸ್ವಲ್ಪ ಗಮನ ಹರಿಸುವದಾದರೆ, ಭಾತಂಬ್ರ ಊರು ಭಹಳ ಪುರಾತನವಾದ ಇತಿಹಾಸ ಹೊಂದಿದ್ದು ಸುಮಾರು 12ನೆ ಶತಮಾನಕ್ಕಿಂತ ಪೂರ್ವದಲ್ಲಿ ಮರಾಠರ ಸಾಮಂತ ದೊರೆ ರಾಮಚಂದ್ರಸೆನ ಜಾದವ ಆಳ್ವಿಕೆಯಲ್ಲಿ ಕೋಟೆಯನ್ನು ನಿರ್ಮಾಣ ಮಾಡಲಾಗಿದ್ದು,1790ರಲ್ಲಿ ಪುನರ್ ನಿರ್ಮಾಣ ಮಾಡಿರುವ ಬಗ್ಗೆ ಗೋರ್ಟಾ ಶಾಸನದಲ್ಲಿ ಉಲ್ಲೇಖವಾಗಿದ್ದು ಬೀದರ ಜಿಲ್ಲಾ ಕೇಂದ್ರದಿಂದ 40ಕಿ. ಮೀ. ಹಾಗು ಭಾಲ್ಕಿ ತಾಲೂಕಿನಿಂದ 8ಕಿ. ಮೀ. ಅಂತರದಲ್ಲಿದ್ದು ಕೋಟೆಯ ಆವರಣದಲ್ಲಿ ವೀರಭದ್ರೇಶ್ವರ ನಿಂತ ಭಂಗಿಯ ವಿಗ್ರಹ, ನಂದಿ ಮೂರ್ತಿ, ಗಜ ಲಕ್ಷ್ಮಿ ಬಿತ್ತಿಶಿಲ್ಪ ಹಾಗು ಹಲವು ಮಾಸ್ತಿ ಕಲ್ಲುಗಳು ಕೋಟೆಯ ಪ್ರಾಚೀನ ಕುರುಹುಗಳಿದ್ದು, ಸತಿ ಭಾವಿ, ಸತಿ ದೇವಾಲಯ, ಹಾಗು ವೀರಕ್ತ ಮಠ ನೋಡುವ ಪ್ರವಾಸಿ ತಾಣಗಳಾಗಿವೆ.
ರಘುಶಂಕ ಭಾತಂಬ್ರ (ಕಾವ್ಯನಾಮ) ಇವರ ಪೂರ್ಣ ಹೆಸರು ಡಾ ರಘುನಾಥ ಶಂಕ್ರೆಪ್ಪಾ ಖರಾಬೆ, ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರ ಗ್ರಾಮದವರು.
ಶ್ರೀಮತಿ ಗುರಮ್ಮ ಶ್ರೀ ಶಂಕ್ರೆಪ್ಪಾ ದಂಪತಿಗಳ ಮಗನಾಗಿ 1.1.1970ರಲ್ಲಿ ಜನಸಿದರು.ಎಂ. ಎ. ಎಂ. ಫೀಲ್ ಪಿ. ಎಚ್. ಡಿ. ಪದವೀಧರರು,
ವ್ಯಕ್ತಿ ವಿಶೇಷ
ರಘುಶಂಕ ಭಾತಂಬ್ರರವರು ಸಾಹಿತ್ಯ ಸೇವೆಯ ಸಾಕಾರ ಮೂರ್ತಿ.ಲೇಖನ, ಸಾಹಿತ್ಯ, ಹಾಗು ಸಾಮಾಜಿಕ ಕಾಳಜಿಯುಳ್ಳ ಸರಳ ಜೀವಿಗಳು,
""ಹೊತ್ತಿಗೆ ನುಚಿಲ್ಲ,
ಹುಗ್ಗಿಗಿ ಎಲ್ಲಾದ ಬೆಲ್?
ಸುಳ್ಳಂತ ಬರಿಲ್ಯಾಕ,
ಸಿಟ್ಟಿಗಿ ಬರಲ್ಯಾಕ,
ಬಿಟ್ಟೀಗಿ ಬಂತೇನೋ?
ದೌತಿ ಲೆಕ್ಕಾ.
ಎನ್ನುವ ಕಡಕೋಳ ಮಂಜಪ್ಪನವರ ನುಡಿಯನ್ನು ತನ್ನ ಬರಹದಲ್ಲಿ ಅಳವಡಿಸಿಕೊಂಡ ಅವರು ಯಾವುದೇ ಟೊಳ್ಳು, ಪೊಳ್ಳು ಬರೆಯದೆ ಜನರು ಮೆಚ್ಚುವಂತಹ ಜಿಲ್ಲೆಯ ಬರಹಗಾರರಲ್ಲಿ ಗುರುತಿಸಿಕೊಂಡ ವ್ಯಕ್ತಿ.
ಪ್ರಸಿದ್ಧ ಸಾಹಿತಿಗಳಾದ ದೇಶಾಂಶ ಹುಡುಗಿ, ಪ್ರೊ. ವೀರೇಂದ್ರ ಸಿಂಪಿ, ಡಾ.ಎಂ. ಜಿ. ದೇಶಪಾಂಡೆ, ಸೋಮನಾಥ ಎಳವಾರ, ಹಂಶಕವಿ,ಮುಂತಾದ ಸಾಹಿತಿಗಳ ವಡನಾಟ ಹೊಂದಿರುವ ಇವರು ಭಾತಂಬ್ರ ಶ್ರೀ ಮಠದ ಶ್ರೀಗಳಾದ
ಪರಮ ಪೂಜ್ಯ ಶ್ರೀ ಶಿವಯೋಗಿಶ್ವರ ಮಹಾಸ್ವಾಮಿ ಗಳ ಪರಮ ಶಿಷ್ಯರಲ್ಲಿ ಗುರುತಿಸಿಕೊಂಡಿರುವರು.
ವೃತಿ ಪ್ರವೃತ್ತಿ
ರಘುಶಂಕರವರು ಪದವಿ ಮುಗಿದಮೇಲೆ ಕೆಲ ದಿವಸಗಳ ಕಾಲ ಗುಲ್ಬರ್ಗ ಶರಣ ಬಸವೇಶ್ವರ್ ಪದವಿ ಕಾಲೇಜು, ಹಾಗು ಬಸವಕಲ್ಯಾಣದಲ್ಲಿ ಕನ್ನಡದ ಉಪನ್ಯಾಸಕರಾಗಿ ಐದು ವರುಷಗಳ ಕಾಲ ಸೇವೆ ಸಲ್ಲಿಸಿದ್ದು ಸದ್ಯ ಭಾಲ್ಕಿ ತಾಲೂಕಿನ
ಗರ್ಮಾ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಕುರಿತು ಬಹಳ ಅಧ್ಯಯನ ಮಾಡಿದ ರಘುಶಂಕರವರು ತನ್ನ ಶಿಕ್ಷಕ ವೃತ್ತಿ ಧರ್ಮ ಪಾಲಿಸುತ್ತಲೇ ಇತಿಹಾಸ, ಸಂಶೋಧನೆ, ಪ್ರಬಂಧ ಮಂಡನೆ, ಸಾಹಿತ್ಯ ಕೃಷಿ, ಹಾಗು ನಾಣ್ಯ, ಅಂಚೆ ಚೀಟಿ ಸಂಗ್ರಹಣೆ,ಪ್ರಾಚೀನ ದೇವಾಲಯ, ಸ್ಮಾರಕಗಳ ಛಾಯಾಚಿತ್ರಗಳ ಬಗ್ಗೆ ಸಂಶೋಧನೆಗಳ ಹವ್ಯಾಸವನ್ನು ಬೆಳೆಸಿಕೊಂಡು ಇವರು ಸಾಮಾಜಿಕವಾಗಿ ಕೂಡ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಸಾಹಿತ್ಯ ಸೇವೆ
ರಘುಶಂಕರವರು ಅನೇಕ ಲೇಖನಗಳು, ಕವನ ಸಂಕಲನಗಳು, ಹಾಗು ಅನೇಕ ಶರಣರ ಕುರಿತು ಬರೆದ ಕೆಲವುಗಳನ್ನು ಇ ಲೇಖನದಲ್ಲಿ ತಮಗೆ ತಿಳಿಸಲು ಪ್ರಯತ್ನ ಮಾಡಿದ್ದೂ ಅವುಗಳು ಇ ಕೆಳಗಿನಂತಿವೆ.
1) ಹೃದಯಾಳದ ನೋವುಗಳು,(ಕವನ ಸಂಕಲನ )
2)ವಚನ ಸಾಹಿತ್ಯದ ಹೊಸ ಪರಿಕಲ್ಪನೆ,
3)ಕರ್ನಾಟಕೇತರ ಶರಣ, ಶರಣಿಯರು,
4)ಶ್ರೀಗಂಧ ಪ್ರಭುರಾವ ಕಂಬಳಿ ವಾಲೆ
5)ವಚನಕಾರರ ವೃತಿ ಮೌಲ್ಯಗಳು.
6)ಭೂಮಿಕೆ
7) ಮನದೊಡಲು
8)ನಡೆ-ನುಡಿ ಸಿದ್ಧಾಂತವಾದಲ್ಲಿ
9)ಅರ್ಚನೆ -ಪೂಜೆ ನೇಮವಲ್ಲ.
10)ಹೊನ್ನ ದೀವಿಗೆ
ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.
ಷಣ್ಮುಖ ಶಿವಯೋಗಿ ವಚನಗಳು,
ಕಾಯಕ ಜೀವಿ ಶರಣ ನೂಲಿಗಚಂದಯ್ಯ
ಕಲ್ಯಾಣ ಕಲಾ ಪ್ರತಿಭೆ
ಚಿತ್ರ ಪಲ್ಲವಿ
ಚೇತನ ಶಿಲ್ಪಿ (ದೇಶಾoಶ ಹುಡಗಿಯವರ ಅಭಿನಂದನಾ ಗ್ರಂಥ )
ಸ್ನೇಹ ಜೀವಿ,
ಸ್ಪರ್ಶ ಸಂಜೀವಿನಿ
ಪ್ರಣೀತ
ಶರಣ ಸೌರಭ
ತವನಿಧಿ
ಶರಣ ದೀಪ್ತಿ
ಸಿದ್ರಾಮಪ್ಪ ಮರಕುಂಬೆಯವರ ತತ್ವ ಪದಗಳು ಸೇರಿದಂತೆ 22 ಸಂಪಾದಿತ ಕೃತಿಗಳನ್ನು ಹೊರತಂದು ಪ್ರಕಟಿಸಿದ್ದಾರೆ.
ಚೇತನ ತರಂಗ (ಮಾಸ ಪತ್ರಿಕೆ )
ರಚನಾ (ದ್ವಿ ಮಾಸಿಕ ಪತ್ರಿಕೆ ) ಸಂಪಾದಕರಗಿ ಸಾಮಾಜಿಕ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು.
ಅದಲ್ಲದೆ ವಿವಿಧ ಸೇವಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.
ಕಲಬುರಗಿ ಆಕಾಶವಾಣಿಯಿಂದ ಇವರ ಭಾಷಣ, ರೂಪಕ, ಚಿಂತನ, ಕವನಗಳು ಪ್ರಸಾರ ಗೊಂಡಿದ್ದು ಅನೇಕ ವಿಚಾರ ಸಂಕಿರಣ, ಸಭೆ ಸಮ್ಮೇಳನಗಳಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ಮಂಡಿಸಿದ್ದಾರೆ.
100ಕ್ಕೂ ಹೆಚ್ಚು ಲೇಖನಗಳು ನಾಡಿನ ಖ್ಯಾತ ವಾರ ಪತ್ರಿಕೆ, ಹಾಗು ನಿಯತಕಾಲಿಕ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿದ್ದು ದಕ್ಷಿಣಭಾರತ ಪ್ರಾದೇಶಿಕ ಭಾಷೆ ಸಂಸ್ಥಾನ ಮೈಸೂರು ಇವರು ಕನ್ನಡೆತರ ಕಲಿಕೆ ವಿದ್ಯಾರ್ಥಿಗಳ ಪ್ರೌಢ ಹಂತದ ಕನ್ನಡ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಕರ್ನಾಟಕ ಸರಕಾರದ ಒಂದನೇ ತರಗತಿ ಕನ್ನಡ ಪಠ್ಯ ಪುಸ್ತಕಗಳ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವರು.
ಕರನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರಿಂದ ""ಒಂದು ಲಕ್ಷ ರೂಪಾಯಿಗಳ ಫೆಲೋಶಿಪ್ ಅಡಿಯಲ್ಲಿ "ಬೀದರ ಪ್ರದೇಶದ ಸ್ವತಂತ್ರ ಸಂಗ್ರಾಮ" (1820-1948)ಅವಧಿಯ ಕುರಿತು 2015-16 ರಲ್ಲಿ ಸಂಶೋಧನೆ ಗೈದಿರಿವರು.
ಹೀಗೆ ಇವರ ಸೇವೆ ಪರಿಗಣಿಸಿ ಜಿಲ್ಲಾಡಳಿತ ಸೇರಿದಂತೆ ಅನೇಕ ಕನ್ನಡಪರ, ಹಾಗು ವಿವಿಧ ಸಂಘಟನೆಗಳು ಗೌರವ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದು ಇವರ ವೆಕ್ತಿತ್ವದ ಗರಿಮೆ ಹೆಚ್ಚಿಸುತ್ತದೆ.
1)ರಾಜ್ಯೋತ್ಸವದ ಪ್ರಶಸ್ತಿ (ಜಿಲ್ಲಾ ಹಾಗು ತಾಲೂಕು ಆಡಳಿತ ವತಿಯಿಂದ )
2)ವಿಶ್ವ ಭಾರತಿ ಸಮಾಜ ಸೇವಾ ಪ್ರಶಸ್ತಿ
3)ಶರಣ ಚೇತನ ಪ್ರಶಸ್ತಿ
4)ರಮಣ ಶ್ರೀ ಪ್ರಶಸ್ತಿ
5)ಸಾಹಿತ್ಯ ಚೂಡಾಮಣಿ ಪ್ರಶಸ್ತಿ
6)ಕರ್ನಾಟಕ ಭೂಷಣ ಪ್ರಶಸ್ತಿ
7)ಡಾ. ರಾಧಾಕೃಷ್ಣನ್ ರತ್ನ ಪ್ರಶಸ್ತಿ
ಅಲ್ಲದೆ ವಿವಿಧ ಸಂಘ ಸಂಸ್ಥೆಗಳ ವಿವಿಧ ಮಠದಿಶರ ಗೌರವ ಪುರಸ್ಕಾರಕ್ಕೆ ಪಾತ್ರರಾಗಿರುವ ಶ್ರೀಯುತರ ಸಾಹಿತ್ಯ, ಹಾಗು ಸಾಮಾಜಿಕ ಸೇವೆ ನಿರಂತರ ಸಾಗಲೆಂದು ಹಾರೈಸುತ್ತೇನೆ.
ಲೇಖನ - ಓಂಕಾರ ಪಾಟೀಲ
(ಕಾರ್ಯದರ್ಶಿ :--ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.)