ರೇವಣಸಿದ್ಧೇಶ್ವರ ಕಾಲೋನಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ರೇವಣಸಿದ್ಧೇಶ್ವರ ಕಾಲೋನಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ರೇವಣಸಿದ್ಧೇಶ್ವರ ಕಾಲೋನಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಕಲಬುರಗಿ : ನಗರದ ಹುಮನಾಬಾದ ರಸ್ತೆಯ ರೇವಣಸಿದ್ಧೇಶ್ವರ ಕಾಲೋನಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸತತ ಒಂಬತ್ತು ದಿನಗಳ ಕಾಲ ದೇವಿಯ ಅಲಂಕಾರ ದೇಶದ ಒಳಿತಿಗಾಗಿ ಹೋಮ ಹವನ ಹಮ್ಮಿಕೊಂಡಿದ್ದು ಪ್ರತಿದಿನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಾಂಡಿಯಾ ವಿವಿಧ ರೀತಿಯ ಕ್ರೀಡಾಕೂಟಗಳನ್ನು ಹಮ್ಮಿಕೊಂಡಿದ್ದು. 

ಪ್ರತಿದಿನ ಅನ್ನ ಸಂತರ್ಪಣೆ ವಿಶೇಷವಾಗಿತ್ತು ತಾಯಿ ಚಾಮುಂಡೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ಬಡಾವಣೆಯ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಬಾಜಾ ಭಜಂತ್ರಿ ಯೊಂದಿಗೆ ಜರುಗಿ ಸಾಯಂಕಾಲ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಬಡಾವಣೆಯ ಯುವಕರು ಹಿರಿಯರು ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೋಭೆ ತಂದಿದ್ದು. 

ಇದೆ ಸಂದರ್ಭದಲ್ಲಿ ಕಾಲೋನಿಯ ಪ್ರಮುಖರಾದ ರೇವಣಸಿದ್ದಪ್ಪ ಚಿಂಚನಸೂರ, ಶರಣಬಸವಪ್ಪ ಮಚಟ್ಟಿ,ಸೂರ್ಯಕಾಂತ ಗುಬ್ಬಿ,ಕುಪೆಂದ್ರ ಹಾರಕೂಡೆ, ರವಿ ಯಕ್ಕಂಚಿ,ಮಲ್ಲಣ್ಣ ರಟಕಲ್, ಸಂಗಮೇಶ ಜೀವಣಗಿ, ಕೆ ಸಿ ಪಾಟೀಲ್, ಸಿದ್ದು ಪಾಟೀಲ್, ಗುಂಡು ಗುಬ್ಬಿ, ಅಮರ, ಆನಂದ ವಾರಿಕ, ಸಂತೋಷ ಜೈನ, ಕವಿರಾಜ, ನಾಗೇಂದ್ರಪ್ಪ ಧನ್ನೂರ, ಮಲ್ಲು ಪಾಟೀಲ ಉಪಸ್ಥಿತರಿದ್ದರು.