ಕಲಬುರಗಿಯಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಅದ್ಧೂರಿ ಸ್ವಾಗತ:

ಕಲಬುರಗಿಯಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಅದ್ಧೂರಿ ಸ್ವಾಗತ:

ಕಲಬುರಗಿಯಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಅದ್ಧೂರಿ ಸ್ವಾಗತ:

ಕಲಾ ಮೆಳದ ವರ್ಣರಂಜಿತ ಪ್ರದರ್ಶನ ಅನಾವರಣ

ಕಲಬುರಗಿ,ಅ.11(ಕ.ವಾ) ನೃಪತುಂಗನ ನಾಡಿಗೆ 87ನೇ‌ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಯ ಆಗಮನವಾಗಿದ್ದು,

ಶುಕ್ರವಾರ ನಗರದಿಂದ ಹೊರಡುವ ಮುನ್ನ ಕಲಾ ಮೇಳದ ವರ್ಣರಂಜಿತ ಪ್ರದರ್ಶನ ದೊಂದಿಗೆ ರಥದ ಮುಂದಿನ ಪಯಣಕ್ಕೆ ಬೀಳ್ಕೊಡಲಾಯಿತು.

ಶುಕ್ರವಾರ ಮುಂಜವಿನ ಮುಸುಕು ಹಾಕಿದ ಕಲಬುರಗಿ ವಾತಾವರಣದಲ್ಲಿ ತುಸು ತುಂತುರು ಹನಿಗಳ ಮಳೆಯ ಸಿಂಚನ ಹಾಗೂ ಕನ್ನಡಿಗರ ಮನಸ್ಸುಗಳ ಅಸ್ಮಿತೆಯನ್ನು ನಗರದಲ್ಲಿ ಕರುಗಿದ ಕನ್ನಡ ತಾಯಿಯ ಮೆರವಣಗೆಯಲ್ಲಿ ಅನಾವರಣಗೊಂಡಿತು.

ಬೆಳಿಗ್ಗೆ 8.30 ಗಂಟೆ ಸುಮಾರಿಗೆ ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತಕ್ಕೆ ರಥ ಯಾತ್ರೆ ಆಗಮಿಸಿತ್ತಿದ್ದಂತೆ ಕನ್ನಡಾಂಬೆಯ ಝೇಂಕಾರ, ಸಮ್ಮೇಳನಕ್ಕೆ ಜೈಕಾರ ಎಲ್ಲವೂ ಮೈ ನವಿರೇಳುವಂತೆ ಮಾಡಿದವು. ಚಿಟ್ಟಲಗಿ ವಾದನ, ಡೊಳ್ಳು ಕುಣಿತದ ವಾದ್ಯ ಮೇಳಗಳಿಗೆ ಪುಳಕಗೊಂಡ ಮೈ ಮನಗಳು ಕನದನಡಾಂಬೆಯನ್ನು ಸ್ಮರಿಸುತ್ತಾ ಹೆಜ್ಜೆ ಹಾಕಿದರು.

ಸಕ್ಕರೆ ನಾಡು ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ಯ ನಾಡಿನಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಯಾತ್ರೆ ಎಲ್ಲೆಡೆ ಪಯಣಿಸಿ ನಾಡಿನ‌ ಜನತೆಗೆ

ನುಡಿ ಜಾತ್ರೆಗೆ ಆಹ್ವಾನ ನೀಡಿತ್ತು.

ಭವ್ಯ ಮೆರವಣಿಗೆಗೆ ಡೊಳ್ಳು ಬಾರಿಸಿ ಚಾಲನೆ ನೀಡಿ ಮಾತನಾಡಿದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಲ್ಲಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಯಾತ್ರೆಯು ಕನ್ನಡಿಗರಲ್ಲಿ ನಾಡು ನುಡಿಯ ಜಾಗೃತಿಯನ್ನು ಮೂಡಿಸುತ್ತಿದೆ. ಕನ್ನಡಿಗರಲ್ಲಿ ಭಾಷೆಯ ಅಭಿಮಾನವನ್ನು ಮತ್ತು ನಾಡ ಪ್ರೇಮವನ್ನು ಹೆಚ್ಚಿಸಲು ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸುವುದರ ಮೂಲಕ ಜಾಗೃತಿಯ ಸಂದೇಶವನ್ನು ಮೊಳಗಿಸುತ್ತಿದೆ. ಎಲ್ಲ ಕನ್ನಡಿಗರು ಕನ್ನಡ ರಥವನ್ನು ಸಂಭ್ರಮದಿಂದ ಸ್ವಾಗತಿಸಿ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರುವ ಜೊತೆಗೆ ರಥವು ಕನ್ನಡಿಗರ ನಡುವೆ ಭಾವನಾತ್ಮಕ ಸಂಬಂಧವನ್ನು ವೃದ್ಧಿಗೊಳಿಸುತ್ತಿದೆ ಎಂದರು. 

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚರಿಸಿದ ಕನ್ನಡ ರಥವು ಕಲಬುರಗಿಗೆ ಪ್ರವೇಶಿಸುತ್ತಿದ್ದಂತೆ ಜಿಲ್ಲಾಡಳಿತದಿಂದ ಸಂಭ್ರಮದ ಸ್ವಾಗತ ಕೋರಲಾಗಿದೆ. ನುಡಿ ಸಮ್ಮೇಳನಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ಯಶಸ್ವಿಗೆ ಕಾರಣಕರ್ತರಾಗಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ರಥವು ಕೇವಲ ಒಂದು ರಥವಲ್ಲ. ಇದು ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ರಥವಾಗಿದ್ದು, ಕನ್ನಡಿಗರು ಜಾತಿ-ಮತ-ಪಂಥ ಲಿಂಗ ಎಂಬ ಬೇಧವನ್ನು ಮರೆತು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಲು ನಾವೆಲ್ಲರೂ ಕಂಕಣಬದ್ಧರಾಗಬೇಕಾಗಿದೆ ಎಂದ ಅವರು, 

ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರ ಆಶಯದಂತೆ ಕನ್ನಡ ರಥವು ಸಮ್ಮೇಳನದ ಪ್ರಚಾರದ ಜೊತೆಗೆ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಡಿ. ಬಡಿಗೇರ, ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಮಲ್ಲಿಕಾರ್ಜುನ ಸಾರವಾಡ, ಕಲ್ಯಾಣರಾವ ಪಾಟೀಲ, ಬಾಬುರಾವ ಕೋಬಾಳ, ಶಿವಲಿಂಗಪ್ಪ ಅಷ್ಟಗಿ, ರವೀಂದ್ರಕುಮಾರ ಭಂಟನಳ್ಳಿ, ಕಲ್ಯಾಣಕುಮಾರ ಶೀಲವಂತ, ಧರ್ಮರಾಜ ಜವಳಿ, ಗುರುಬಸಪ್ಪ ಸಜ್ಜನಶೆಟ್ಟಿ, ಶರಣಬಸಪ್ಪ ಕೋಬಾಳ, ಶಾಮಸುಂದರ ಕುಲಕರ್ಣಿ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಎಂ.ಎನ್. ಸುಗಂಧಿ, ವಿನೋದಕುಮಾರ ಜೇನವೇರಿ, ಸೇವಂತಾ ಚವ್ಹಾಣ, ಶರಣಬಸಪ್ಪ, ರಾಜೇಂದ್ರ ಮಾಡಬೂಳ, ಪ್ರಕಾಶ ಗೊಣಗಿ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಸಿದ್ಧಲಿಂಗ ಬಾಳಿ, ಮಂಜುನಾಥ ಕಂಬಾಳಿಮಠ, ರಮೇಶ ಬಡಿಗೇರ, ರೇವಣಸಿದ್ದಪ್ಪ ಜೀವಣಗಿ, ಹಣಮಂತ ಖಜೂರಿ, ಮಹೇಶ ಚಿಂತನಪಳ್ಳಿ, ಕಲಬುರಗಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.