12ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಸಮಾರಂಭ

12ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಸಮಾರಂಭ

12ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಸಮಾರಂಭ 

ಕಲ್ಬುರ್ಗಿ-ರಾಜ್ಯಮಟ್ಟದ ಸಾಹಿತಿಕ ಮಾಸ ಪತ್ರಿಕೆ ಸಾಹಿತ್ಯ ಸಾರಥಿ ಏಳು ವರ್ಷಗಳಿಂದ ನಿರಂತರವಾಗಿ ಸಂಭ್ರಮ ಮಾಡುತ್ತಾ ಬರುತ್ತದೆ.ಅದರ ಪ್ರಯುಕ್ತ ಸಂಚಿಕೆ ಬಿಡುಗಡೆ ಹಾಗೂ2024ನೇ ಸಾಲಿನ 12ಜನ ಸಾಧಕರನ್ನು ರಾಜ್ಯ ಮಟ್ಟದ ಸಾಹಿತ್ಯ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪತ್ರಿಕೆ ಸಂಪಾದಕರಾದ ಬಿ ಎಚ್ ನಿರಗುಡಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪರಮ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ ಹಾಗೂ ಪರಮ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮುಗುಳನಾಗವ ಸಾನಿಧ್ಯ ವಹಿಸುವರು ಕಾರ್ಯಕ್ರಮ ಉದ್ಘಾಟನೆ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮಾಡುವರು ಶಾಸಕರಾದ ಶಶೀಲ್ ನಮೋಶಿ ಸಂಚಿಕೆ ಬಿಡುಗಡೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ರಾಜ್ಯ ಅಧ್ಯಕ್ಷರಾದ ನಾಡೋಜ ಮನು ಬಳಿಗಾರ್ ರವರು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ ಸುರೇಶ್ ಸಜ್ಜನ, ನೀಲಕಂಠರಾವ ಮೂಲಗೆ ಬಾಬುರಾವ್ ಯಡ್ರಾಮಿ ವಹಿಸುವರು. ಅಧ್ಯಕ್ಷತೆ ರಂಗಾಯಣ ನಿರ್ದೇಶಕರಾದ ಡಾ ಸುಜಾತಾ ಜಂಗಮ ಶೆಟ್ಟಿ ವಹಿಸುವರು 

ಕಾರ್ಯಕ್ರಮದಲ್ಲಿ ಕಿರಣ್ ಪಾಟೀಲ್, ಚಾಮರಾಜ ದೊಡ್ಡಮನಿ, ಸೂರ್ಯಕಾಂತ್ ಪೂಜಾರಿ ಕನ್ನಡ ಗೀತೆಗಳನ್ನು ಹಾಡುವರು.

12ಜನ ಸಾಧಕರು 

ಮಾಧ್ಯಮ ಕ್ಷೇತ್ರ ದೇವು ಪತ್ತಾರ್ ಬುಕ್ ಬ್ರಹ್ಮ ,

ವಿಶ್ವರಾಧ್ಯ ಸತ್ಯಂಪೇಟೆ ಶರಣ ಮಾರ್ಗ ,

ಜಯತೀರ್ಥ ಪಾಟೀಲ್ ವಿಜಯವಾಣಿ 

ಸಾಹಿತ್ಯ ಕ್ಷೇತ್ರ 

ಡಾ.ಕಾವ್ಯಶ್ರೀ ಮಾಹಾಗಾಂಕರ್ ಡಾ.ಲಿಂಗಣ್ಣ ಗೋನಾಳ ,ಡಾ. ಚಿ.ಸಿ .ನಿಂಗಣ್ಣ,

ಸಮಾಜ ಸೇವೆ 

ರವೀಂದ್ರ ಶಾಬಾದಿ 

ಸಂಘಟನಾ ಕ್ಷೇತ್ರ 

ಕಲ್ಯಾಣರಾವ ಶೀಲವಂತ 

ವೈದ್ಯಕೀಯ ಕ್ಷೇತ್ರ

ಸಿದ್ದು ಪಾಟೀಲ್ 

ಶಿಕ್ಷಣ ಕ್ಷೇತ್ರ

ಚಕೋರ ಮೆಹತಾ 

ಕಲಾ ಕ್ಷೇತ್ರ 

ಡಾ ಅಶೋಕ ಶಟಗಾರ 

ಸಂಗೀತ ಕ್ಷೇತ್ರ

ಡಾ ರೇಣುಕಾ ಹಾಗರಗುಂಡಗಿ ಅವರನ್ನು ಪ್ರಶಸ್ತಿ ಪ್ರದಾನ ಮಾಡಲಾಗುವುದು 5ನೇ ಜನವರಿ 2025 ರಂದು ಜಗತ್ತ ಸರ್ಕಲ್ ಬಳಿ ಇರುವ ಪತ್ರಕರ್ತರ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಲಾಗುವುದು ಎಂದು ಸಂಪಾದಕ ಬಿ ಎಚ್ ನಿರಗುಡಿ ತಿಳಿಸಿದ್ದಾರೆ.