ಸುರೇಶ್ ಸಜ್ಜನ್ ಅವರಿಗೆ ಗೌರವ ಸನ್ಮಾನ
ಸುರೇಶ್ ಸಜ್ಜನ್ ಅವರಿಗೆ ಗೌರವ ಸನ್ಮಾನ
ಕಲಬುರಗಿ: ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕಿನ ನಿರ್ದೇಶಕರಾಗಿ ಎರಡನೇ ಬಾರಿ ಆಯ್ಕೆಯಾದ ಸುರೇಶ್ ಸಜ್ಜನ್ ಅವರನ್ನು ವಾಯು ವಿಹಾರ್ ಮಿತ್ರ ಮಂಡಳಿಯ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಲಿನಾಥ್ ಪಾಟೀಲ ಕಾಳಗಿ, ಅಶೋಕ ತಳವಡೆ, ಕಾಶಪ್ಪನವರು, ಚಂದ್ರಶೇಖರ್, ಅಂಬರೀಶ್ ಸಜ್ಜನ್, ಶರಣು ವಕೀಲರು, ಅಶೋಕ್ ಹೌದೇ, ವಿರುಪಾಕ್ಷ ಸ್ವಾಮಿ, ಸುರೇಶ್ ಮಾಸ್ಟರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ಸುರೇಶ್ ಸಜ್ಜನ್ ಅವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, “ಸಹಕಾರ ಚಳವಳಿಯ ಬಲವರ್ಧನೆಗೆ ನಾನು ಸದಾ ಬದ್ಧನಾಗಿದ್ದೇನೆ. ರೈತ ಮತ್ತು ಸದಸ್ಯರ ಹಿತವನ್ನು ಕಾಪಾಡುವುದು ನನ್ನ ಪ್ರಥಮ ಕರ್ತವ್ಯ” ಎಂದು ಹೇಳಿದರು.ಕಾರ್ಯಕ್ರಮವು ಹರ್ಷೋದ್ಗಾರಗಳಿಂದ ನೆರವೇರಿತು.
